10 ವರ್ಷದ ಬಾಲಕಿಯ ಕನಸಲ್ಲಿ ಕಂಡ ಶ್ರೀ ಕೃಷ್ಣ; ಅದೇ ಸ್ಥಳದಲ್ಲಿ ವಿಗ್ರಹ ಪತ್ತೆ

ವಿನೋದ್ ಸಿಂಗ್ ಅವರ ಪುತ್ರಿ ಪೂಜಾ, ಜಿಂದಪುರ ಗ್ರಾಮದ ಕಾಲುವೆ ಬಳಿಯ ಧಾರ್ಮಿಕ ಸ್ಥಳದ ಬಳಿಯ ನೆಲದಲ್ಲಿ ವಿಗ್ರಹವನ್ನು ಹೂಳುವ ಕನಸು ಕಂಡಿದ್ದಾಳೆ. ಜೊತೆಗೆ ತನ್ನ ಕನಸನ್ನು ಮನೆಯವರಿಗೆ ತಿಳಿಸಿದ್ದಾಳೆ. ಆದರೆ ಫೋಷಕರು ಬಾಲಕಿಯ ಮಾತಿಗೆ ತಲೆ ಕೆಡಿಸಿಕೊಂಡಿರಲ್ಲಿಲ್ಲ. ಕಡೆಗೆ ಆಕೆಯ ಮಾತನ್ನು ನಂಬಿ ಕುಟುಂಬಸ್ಥರು ಆಕೆ ಹೇಳಿರುವ ಜಾಗದಲ್ಲಿ ಸ್ವಲ್ಪ ಅಗೆದ ನಂತರ ಶ್ರೀಕೃಷನ ವಿಗ್ರಹ ಪತ್ತೆಯಾಗಿದೆ.

10 ವರ್ಷದ ಬಾಲಕಿಯ ಕನಸಲ್ಲಿ ಕಂಡ ಶ್ರೀ ಕೃಷ್ಣ; ಅದೇ ಸ್ಥಳದಲ್ಲಿ ವಿಗ್ರಹ ಪತ್ತೆ
Statue Of Lord Krishna
Follow us
ಅಕ್ಷತಾ ವರ್ಕಾಡಿ
|

Updated on: Feb 18, 2024 | 12:27 PM

ಉತ್ತರ ಪ್ರದೇಶ: ಶಹಜಹಾನ್‌ಪುರ ಜಿಲ್ಲೆಯಲ್ಲಿ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿಗೋಹ್ ಪ್ರದೇಶದಲ್ಲಿ 10 ವರ್ಷದ ಬಾಲಕಿಯೊಬ್ಬಳು ಭಗವಂತ ಶ್ರೀಕೃಷ್ಣ ತನಗೆ ಕನಸಿನಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಶ್ರೀ ಕೃಷ್ಣನ ವಿಗ್ರಹವನ್ನು ನೆಲದಡಿಯಲ್ಲಿ ಸಮಾಧಿ ಮಾಡಲಾಗಿದೆ ಎಂದು ಬಾಲಕಿ ಹೇಳಿದ್ದಾಳೆ. ಬಾಲಕಿಯ ಕನಸನ್ನು ನಂಬಿ ಮಣ್ಣು ಅಗೆದಾಗ,ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ. ಯಾಕೆಂದರೆ ಬಾಲಕಿ ಹೇಳಿರುವ ಸ್ಥಳದಲ್ಲೇ ದೇವರ ವಿಗ್ರಹ ಪತ್ತೆಯಾಗಿದೆ.

ನಿಗೋಹಿ ಪ್ರದೇಶದ ಗ್ರಾಮದ ನಿವಾಸಿ ವಿನೋದ್ ಸಿಂಗ್ ಅವರ ಪುತ್ರಿ ಪೂಜಾ, ಜಿಂದಪುರ ಗ್ರಾಮದ ಕಾಲುವೆ ಬಳಿಯ ಧಾರ್ಮಿಕ ಸ್ಥಳದ ಬಳಿಯ ನೆಲದಲ್ಲಿ ವಿಗ್ರಹವನ್ನು ಹೂಳುವ ಕನಸು ಕಂಡಿದ್ದರು. ಜೊತೆಗೆ ತನ್ನ ಕನಸನ್ನು ಮನೆಯವರಿಗೆ ತಿಳಿಸಿದ್ದಾಳೆ. ಆದರೆ ಫೋಷಕರು ಮೊದಲಿಗೆ ಬಾಲಕಿಯ ಮಾತಿಗೆ ತಲೆ ಕೆಡಿಸಿಕೊಂಡಿರಲ್ಲಿಲ್ಲ. ಆದರೆ ಪೂಜಾ ಕಳೆದ ಏಳು ದಿನಗಳಿಂದ ಅಲ್ಲಿ ಮಣ್ಣು ಅಗೆದು ವಿಗ್ರಹ ಹೊರತೆಗೆಯುವ ವರೆಗೆ ಉಪವಾಸದಲ್ಲಿ ಕುಳಿತಿರುವುದಾಗಿ ಪಟ್ಟು ಹಿಡಿದು ಕುಳಿತ್ತಿದ್ದಾಳೆ. ಕಡೆಗೆ ಆಕೆಯ ಮಾತನ್ನು ನಂಬಿದ ವಿನೋದ್ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ದರ್ಗಾ ಬಳಿ ತಲುಪಿದ್ದಾರೆ. ಅಗೆಯುವ ಸಂದರ್ಭದಲ್ಲಿ ಇತರ ಸಮುದಾಯಗಳ ವಿರೋಧದಿಂದ ಪರಿಸ್ಥಿತಿ ಉದ್ವಿಗ್ನಗೊಳ್ಳಲು ಪ್ರಾರಂಭಿಸಿತು. ಮುಂಜಾಗ್ರತಾ ಕ್ರಮವಾಗಿ ದರ್ಗಾ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮದುವೆ; ದೃಷ್ಟಿಹೀನ ಕುಶಲಕರ್ಮಿಗಳಿಂದ ತಯಾರಾಗುತ್ತಿದೆ ವಿಶೇಷ ಉಡುಗೊರೆ

ಎರಡೂ ಕಡೆಯಿಂದ ಜನರು ಜಮಾಯಿಸಿದಾಗಲೂ ಅಗೆಯುವ ಕಾರ್ಯ ಮುಂದುವರಿದಿತ್ತು. ಸ್ವಲ್ಪ ಅಗೆದ ನಂತರ ಶ್ರೀಕೃಷನ ವಿಗ್ರಹ ಪತ್ತೆಯಾಗಿದೆ. ಬಳಿಕ ಅಲ್ಲಿಂದ ಎರಡೂವರೆ ಕಿಲೋಮೀಟರ್ ದೂರದ ಗದ್ದೆಯಲ್ಲಿ ಗ್ರಾಮಸ್ಥರು ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ