AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral video: ಬಾರ್ಬಿ ಥೀಮ್ ಪಾರ್ಟಿಗಾಗಿ ರೆಡಿಯಾಯ್ತು ಪಿಂಕ್ ಬಿರಿಯಾನಿ; ವಿಡಿಯೋ ವೈರಲ್

ಕಳೆದ ವರ್ಷ ಬಾರ್ಬಿ ಸಿನೆಮಾ ರಿಲೀಸ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆಗ ಹೆಂಗಳೆಯರಂತೂ ಬಾರ್ಬಿ ಥೀಮ್ ಡ್ರೆಸ್ಸ್, ಬಾರ್ಬಿ ಥೀಮ್ ಮೇಕಪ್ ಹೇರ್ ಸ್ಟೈಲ್ ಮಾಡಿ I'm a Barbie girl in a Barbie world' ಅಂತ ರೀಲ್ಸ್ ಮಾಡ್ತಿದ್ರು, ಇದೀಗ ಇಲ್ಲೊಬ್ರು ಮಹಿಳೆ, ತಾವು ಅರೇಂಜ್ ಮಾಡಿರುವ ಬಾರ್ಬಿ ಥೀಮ್ ಪಾರ್ಟಿಗೆ ಗುಲಾಬಿ ಬಣ್ಣದ ಬಿರಿಯಾನಿ ತಯಾರಿಸಿ, ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.

Viral video: ಬಾರ್ಬಿ ಥೀಮ್ ಪಾರ್ಟಿಗಾಗಿ ರೆಡಿಯಾಯ್ತು ಪಿಂಕ್ ಬಿರಿಯಾನಿ; ವಿಡಿಯೋ ವೈರಲ್
Pink Biryani
ಮಾಲಾಶ್ರೀ ಅಂಚನ್​
| Edited By: |

Updated on: Feb 18, 2024 | 2:24 PM

Share

ಬಿರಿಯಾನಿ ಬಹುತೇಕ ಎಲ್ಲಾ ನಾನ್ ವೆಜಿಟೇರಿಯನ್ ಗಳ ನೆಚ್ಚಿನ ಡಿಶ್. ಹೋಟೇಲ್ ರೆಸ್ಟೋರೆಂಟಿಗೆ ಹೋದರಂತೂ ಈ ಬಿರಿಯಾನಿ ಪ್ರಿಯರು ಬಿರಿಯಾನಿ ಬಿಟ್ಟು ಬೇರೇನನ್ನೂ ತಿನ್ನೋಲ್ಲಾ. ಹೈದರಬಾದಿ ಬಿರಿಯಾನಿ, ಅಂಬೂರ್ ಬಿರಿಯಾನಿ, ಕಲ್ಯಾಣಿ ಬಿರಿಯಾನಿ ಹೀಗೆ ತರಹೇವಾರಿ ಬಿರಿಯಾನಿಗಳಿವೆ. ನೀವು ಕೂಡಾ ಈ ಎಲ್ಲಾ ಬಗೆಯ ಬಿರಿಯಾನಿಗಳನ್ನು ಸವಿದಿರಬಹುದು ಅಲ್ವಾ. ಆದರೆ ನೀವು ಎಂದಾದರೂ ಪಿಂಕ್ ಬಿರಿಯಾನಿಯನ್ನು ಸವಿದಿದ್ದೀರಾ? ಅರೇ ಏನಿದು ಪಿಂಕ್ ಬಿರಿಯಾನಿ, ಅದನ್ನು ಹೇಗಪ್ಪಾ ತಯಾರಿಸಲು ಸಾಧ್ಯ ಅಂತ ನೀವು ಯೋಚ್ನೆ ಮಾಡ್ತಿದ್ದೀರಾ. ಇಲ್ಲೊಬ್ಬರು ಮಹಿಳೆ ಅಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ತಾವು ಏರ್ಪಡಿಸಿದ್ದ ಬಾರ್ಬಿ ಥೀಮ್ ಪಾರ್ಟಿಗಾಗಿ ಮುಂಬೈನ ಹೀನಾ ಕೌಸರ್ ರಾದ್ ಎಂಬ ಬೇಕರ್ ಈ ವಿಶಿಷ್ಟ ಪಿಂಕ್ ಬಿರಿಯಾನಿಯನ್ನು ತಯಾರಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಕೌಸರ್ (@creamycreationsbyhkr) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಕೌಸರ್ ತಾವು ಏರ್ಪಡಿಸಿದ್ದ ಬಾರ್ಬಿ ಥೀಮ್ ಪಾರ್ಟಿಯಲ್ಲಿ ಗುಲಾಬಿ ಬಣ್ಣದ ವಿಶಿಷ್ಟ ಬಿರಿಯಾನಿಯನ್ನು ತೋರಿಸುತ್ತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ ರೈತಾವನ್ನು ಕೂಡಾ ಪಿಂಕ್ ಥೀಮ್ ಅಲ್ಲಿಯೇ ತಯಾರಿಸಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಾ ಭಕ್ಷ್ಯಗಳನ್ನು ಆಕೆ ಪಿಂಕ್ ಬಣ್ಣದಲ್ಲಿಯೇ ತಯಾರಿಸಿದ್ದಾರೆ. ಈ ಮಹಿಳೆಯ ಪಿಂಕ್ ಬಿರಿಯಾನಿಯನ್ನು ಕಂಡು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟಿದ್ದಾರೆ.

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮದುವೆ; ದೃಷ್ಟಿಹೀನ ಕುಶಲಕರ್ಮಿಗಳಿಂದ ತಯಾರಾಗುತ್ತಿದೆ ವಿಶೇಷ ಉಡುಗೊರೆ

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 13.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಎಲ್ಲೆಲ್ಲೂ ಪಿಂಕ್ ಬಣ್ಣವೇ ತುಂಬಿದೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ನನ್ನ ಮೊಬೈಲ್ ಎಸೆಯುವ ಮೊದಲು ಈ ವಿಡಿಯೋ ಡಿಲಿಟ್ ಮಾಡಿದ್ರೆ ಸರಿʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಅಪರಾಧಕ್ಕೆ ನಾನು ನಿಮ್ಮ ಮೇಲೆ ಖಂಡಿತವಾಗಿಯೂ ಮೊಕದ್ದಮೆ ಹೂಡುತ್ತೇನೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ದಯವಿಟ್ಟು ಬಿರಿಯಾನಿಯನ್ನು ಹಾಳುಮಾಡಬೇಡಿʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ