Viral Video: ಇದು ಸಿಂಗಲ್ಸ್ ಕಷ್ಟ, ಗರ್ಲ್ ಫ್ರೆಂಡ್ ಇಲ್ಲ ಅದಕ್ಕೆ ಬಟ್ಟೆ ಅಂಗಡಿಯ ಗೊಂಬೆ ಜೊತೆ ಬೈಕ್ ರೈಡ್​​ 

ನಮ್ಮಂತ ಹುಡುಗ್ರುಗೆಲ್ಲ ಯಾರ್ ಬಿಳ್ತಾರೆ ಸ್ವಾಮಿ ಎಂದು  ಅದೆಷ್ಟೋ ಹುಡುಗರು ಹೇಳಿರುವುದನ್ನು ನೀವು ಕೇಳಿರಬಹುದು. ಇದೀಗ ಇಲ್ಲೊಬ್ಬ ಯುವಕ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಲು ತನಗೆ ಗರ್ಲ್ ಫ್ರೆಂಡ್ ಇಲ್ಲವೆಂದು ಬಟ್ಟೆ ಅಂಗಡಿಯಲ್ಲಿರೋ ಗೊಂಬೆಯನ್ನು ಬೈಕ್ ಅಲ್ಲಿ ಕೂರಿಸಿಕೊಂಡು ಜಾಲಿ ರೈಡ್ ಹೋಗಿದ್ದಾನೆ. ಈ ಫನ್ನಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

Viral Video: ಇದು ಸಿಂಗಲ್ಸ್ ಕಷ್ಟ, ಗರ್ಲ್ ಫ್ರೆಂಡ್ ಇಲ್ಲ ಅದಕ್ಕೆ ಬಟ್ಟೆ ಅಂಗಡಿಯ ಗೊಂಬೆ ಜೊತೆ ಬೈಕ್ ರೈಡ್​​ 
ವೈರಲ್​​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 19, 2024 | 12:38 PM

ಮೊನ್ನೆಯಷ್ಟೆ ಫೆಬ್ರವರಿ 14 ರಂದು ಜೋಡಿ ಹಕ್ಕಿಗಳು ಪ್ರೇಮಿಗಳ ದಿನವನ್ನು ಬಹಳ ವಿಶೇಷವಾಗಿ ಹಾಗೇನೆ  ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಆದರೆ ಈ ಕೆಲವೊಂದಷ್ಟು ಸಿಂಗಲ್ ಯುವಕರು ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಲು ನಮಗೆ ಒಂದೂ ಕೂಡಾ ಹುಡುಗಿ ಇಲ್ವೇ ಅಂತ   ಸಪ್ಪೆ ಮೋರೆ ಹಾಕಿ ಕುಳಿತಿದ್ದರು. ಅದೇ ರೀತಿ ಇಲ್ಲೊಬ್ಬ ಯುವಕ ಗರ್ಲ್ ಫ್ರೆಂಡ್ ಇಲ್ಲವೆಂದು ಬೇಸತ್ತು  ಕೊನೆಗೆ ಬಟ್ಟೆ ಅಂಗಡಿಯಲ್ಲಿರೋ ಗೊಂಬೆಯನ್ನು ಬೈಕ್ ಅಲ್ಲಿ ಕೂರಿಸಿಕೊಂಡು ಜಾಲಿ ರೈಡ್ ಹೋಗಿದ್ದಾನೆ. ಈ ಫನ್ನಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸಿಂಗಲ್ ಹುಡುಗರಿಗೆ ಸಂಬಂಧಿಸಿದ ಮೇಮ್ಸ್,  ಟ್ರೋಲ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಹರಿದಾಡುತ್ತಿರುತ್ತವೆ. ಇದೀಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಮೊನ್ನೆ ಪ್ರೇಮಿಗಳ ದಿನದಂದು ಯುವಕನೊಬ್ಬ ಗರ್ಲ್ ಫ್ರೆಂಡ್ ಇಲ್ಲವೆಂದು ಬಟ್ಟೆ ಅಂಗಡಿಯಲ್ಲಿನ ಗೊಂಬೆಯನ್ನೇ  ಬೈಕ್ ಅಲ್ಲಿ ಕೂರಿಸಿಕೊಂಡು ಊರಿಡಿ ಸವಾರಿ ಮಾಡಿದ್ದಾನೆ. ಈ ವಿಡಿಯೋವನ್ನು @indorigram_ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಮಧ್ಯಪ್ರದೇಶದ ಇಂದೋರ್ ನಗರದ ಯುವಕನೊಬ್ಬ ಈ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ವೈರಲ್ ವಿಡಿಯೋದಲ್ಲಿ ಆತ ಬಟ್ಟೆ ಅಂಗಡಿಯಲ್ಲಿರುವ ಗೊಂಬೆಯನ್ನು ಕೂರಿಸಿಕೊಂಡು ನಗರದ ಬೀದಿಗಳಲ್ಲಿ ಬೈಕ್ ಸವಾರಿ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈತನ ಹುಚ್ಚು ಸಾಹಸವನ್ನು ಕಂಡು ಅಲ್ಲಿ ನೆರೆದಿದ್ದ ಸಾರ್ವಜನಿಕರು ಇದ್ಯಾವುದಪ್ಪಾ ಹೊಸ ಪ್ರತಿಭೆ ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಇದನ್ನೂ ಓದಿ: ಈ ಸುಂದರ ದೃಶ್ಯ ನೋಡಿದ ಮರುಕ್ಷಣವೇ ನಾನು ಕಳೆದು ಹೋದೆ, ಹೇಗಿದೆ ನೋಡಿ ಮಯೂರಿ ನೃತ್ಯ

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು     ಹಾಗೂ 8 ಸಾವಿಕರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ತರಹೇವಾರಿ ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಇದು ಸಿಂಗಲ್ ಹುಡುಗರ ಲಾಸ್ಟ್  ಆಪ್ಷನ್ʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವಿಡಿಯೋ ತುಂಬಾ ಮುದ್ದಾಗಿದೆ ಕಣ್ರಿʼ ಅಂತ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ರೀತಿಯ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್ ನಾನು ಈ ಮೊದಲು ಎಂದೂ ನೋಡಿರಲಿಲ್ಲʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಈ ವಿಡಿಯೋ ತುಂಬಾ ತಮಾಷೆಯಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ