AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಸುಂದರ ದೃಶ್ಯ ನೋಡಿದ ಮರುಕ್ಷಣವೇ ನಾನು ಕಳೆದು ಹೋದೆ, ಹೇಗಿದೆ ನೋಡಿ ಮಯೂರಿ ನೃತ್ಯ

ನವಿಲುಗಳು ಸೌಂದರ್ಯಕ್ಕೆ ಮಾತ್ರವಲ್ಲದೆ ನಾಟ್ಯಕ್ಕೂ ಹೆಸರಾದ ಪಕ್ಷಿ. ಇಂತಹ ನವಿಲುಗಳ ನಾಟ್ಯವನ್ನು ನೋಡಲು ಎರಡು ಕಣ್ಣು ಸಾಲದು. ಆದರೆ ನವಿಲುಗಳ ನಾಟ್ಯ ಪ್ರದರ್ಶನ ಕಾಣಸಿಗುವುದು ಬಹಳ ಅಪರೂಪ. ಹಾಗಿರುವಾಗ ಇದೀಗ ಇಲ್ಲೊಂದು ಮಯೂರನ ನಾಟ್ಯದ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನವಿಲಿನ ಅದ್ಭುತ ನಾಟ್ಯವನ್ನು ಕಂಡು ನೋಡುಗರ ಮನ ಸೋತಿದ್ದಾರೆ.

Viral Video: ಈ ಸುಂದರ ದೃಶ್ಯ ನೋಡಿದ ಮರುಕ್ಷಣವೇ ನಾನು ಕಳೆದು ಹೋದೆ, ಹೇಗಿದೆ ನೋಡಿ ಮಯೂರಿ ನೃತ್ಯ
ವೈರಲ್​​ ಸ್ಟೋರಿ
ಮಾಲಾಶ್ರೀ ಅಂಚನ್​
| Edited By: |

Updated on:Feb 19, 2024 | 10:38 AM

Share

ಪಕ್ಷಿ ಪ್ರಪಂಚದಲ್ಲಿಯೇ ನವಿಲುಗಳು ಅತ್ಯಂತ ಸುಂದರ ಪಕ್ಷಿ. ಅವುಗಳು ಗರಿಬಿಚ್ಚಿ ಕುಣಿದರಂತೂ ಅವುಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಹೀಗಾಗಿಯೇ ಸುಂದರ ಹೆಣ್ಣಿನ ವಯ್ಯಾರವನ್ನು ನವಿಲಿನ ನೃತ್ಯಕ್ಕೆ ಕವಿ ಹೋಲಿಸುತ್ತಾನೆ. ಆದರೆ ಇತ್ತೀಚಿನ ದಿನಗಳಲ್ಲಿ ನವಿಲುಗಳು ಗರಿ ಬಿಚ್ಚಿ ಕುಣಿಯೋದು ಬಿಡಿ, ಅವುಗಳೇ ಕಾಣಸಿಗುವುದು ಅಪರೂಪವಾಗಿಬಿಟ್ಟಿದೆ. ಪ್ರತಿಯೊಬ್ಬರೂ ಒಂದು ಬಾರಿಯಾದರೂ ನವಿಲಿನ ನೃತ್ಯವನ್ನು ನೋಡಬೇಕು ಎಂದು ಬಯಸುತ್ತಾರೆ. ನಿಮಗೂ ಮಯೂರನ ಸುಂದರ ನೃತ್ಯವನ್ನು ನೋಡುವ ಬಯಕೆಯಿದೆಯೇ? ಹಾಗಿದ್ದರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದು, ನೋಡುಗರನ್ನು ಸೆಳೆಯುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯ ವಿಶೇಷ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಗಂಡು ನವಿಲೊಂದು ತನ್ನ ಸುಂದರ ಗರಿಗಳನ್ನು ಬಿಚ್ಚಿ ನೃತ್ಯ ಮಾಡುತ್ತಿರುವಂತಹ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ವೈಲ್ಡ್ ಲೈಫ್ ಫಿಲ್ಮ್ ಮೇಕರ್ ಆಲಿವರ್ ಗೊಯೆಟ್ಜ್ಲ್ (OLIVER GOETZL) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ಅರಣ್ಯ ಪ್ರದೇಶದಲ್ಲಿ ಸುಂದರವಾದ ಗಂಡು ನವಿಲೊಂದು ತನ್ನ ರೆಕ್ಕೆಗಳನ್ನು ಬಿಚ್ಚಿ ಸೊಗಸಾಗಿ ನಾಟ್ಯವಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಇದು ವರನ ದಿಬ್ಬಣದ ವಾಹನವೋ ಅಥವಾ ಪೆಟ್ಟಿ ಅಂಗಡಿಯೋ.. ಫುಲ್ ಕನ್ಫ್ಯೂಸ್ ಆದ ನೆಟ್ಟಿಗರು

ಕೆಲ ಸಮಯಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಹಾಗೂ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಈ ಸುಂದರ ದೃಶ್ಯವನ್ನು ನೋಡಿದ ಮರುಕ್ಷಣವೇ ನಾನು ಕಳೆದು ಹೋದೆನುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನವಿಲಿನ ನಾಟ್ಯ ಬಹಳ ಸೊಗಸಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೋಡಿ ಮಾಡುವಂತಹ ನೃತ್ಯ ಪ್ರದರ್ಶನʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯ ಸುಂದರವಾಗಿದೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:37 am, Mon, 19 February 24