Viral Post: 1 ಕೋಟಿ ರೂ. ಖರ್ಚು ಮಾಡಿ ಮುಖದ ಚಹರೆಯನ್ನೇ ಬದಲಾಯಿಸಿಕೊಂಡ ಯುವತಿ

ಮುಖದ ಅಂದ ಹೆಚ್ಚಿಸಿಕೊಳ್ಳಲು ಈ ಯುವತಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಇದಕ್ಕಾಗಿ ಈಕೆ ಬರೋಬ್ಬರಿ 20 ಮಿಲಿಯನ್ ಯೆನ್ ಅಂದರೆ 1 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾಳೆ. ಇದೀಗ ಈ ಯುವತಿಯ ಹಿಂದಿನ ಮತ್ತು ಈಗಿನ ಬದಲಾದ ಮುಖದ ಫೋಟೋಗಳು ಎಲ್ಲೆಡೆ ವೈರಲ್​​ ಆಗುತ್ತಿದೆ.

Viral Post: 1 ಕೋಟಿ ರೂ. ಖರ್ಚು ಮಾಡಿ ಮುಖದ ಚಹರೆಯನ್ನೇ ಬದಲಾಯಿಸಿಕೊಂಡ ಯುವತಿ
Plastic Surgery
Follow us
ಅಕ್ಷತಾ ವರ್ಕಾಡಿ
|

Updated on:Sep 14, 2024 | 5:25 PM

ಜಪಾನ್‌ನ ಹಿರೇಸ್ ಎರಿ ಎಂಬ ಯುವತಿ ಸೋಶಿಯಲ್​ ಮೀಡಿಯಾಗಳಲ್ಲಿ ಇದೀಗ ಭಾರೀ ಸುದ್ದಿಯಲ್ಲಿದ್ದಾಳೆ. ಮುಖದ ಅಂದ ಹೆಚ್ಚಿಸಿಕೊಳ್ಳಲು ಈ ಯುವತಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಇದಕ್ಕಾಗಿ ಈಕೆ ಬರೋಬ್ಬರಿ 20 ಮಿಲಿಯನ್ ಯೆನ್ ಅಂದರೆ 1 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾಳೆ.

ಇದೀಗ ಈ ಯುವತಿಯ ಹಿಂದಿನ ಮತ್ತು ಈಗಿನ ಬದಲಾದ ಮುಖದ ಫೋಟೋಗಳು ಎಲ್ಲೆಡೆ ವೈರಲ್​​ ಆಗುತ್ತಿದೆ. ಈ ಚಿತ್ರ ನೋಡಿದ್ರೆ ನೀವು ಬೆಚ್ಚಿ ಬೀಳುವುದಂತೂ ಖಂಡಿತಾ. ಶಸ್ತ್ರಚಿಕಿತ್ಸೆಯ ಬಳಿಕ ನನ್ನ ಸೌಂದರ್ಯ ಹೆಚ್ಚಾಗಿದೆ ಮತ್ತು ಕಳೆದು ಹೋದ ಆತ್ಮವಿಶ್ವಾಸವನ್ನೂ ಮರಳಿ ತಂದಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಪೊಲೀಸ್​​ ಕೆಲಸ ಬಿಟ್ಟು, ಹುಡುಗಿಯರನ್ನು ಹೇಗೆ ಪಟಾಯಿಸುವುದು ಎಂದು ಹೇಳಿ ಕೊಡ್ತಾರೆ ಈ ಅಧಿಕಾರಿ

ನಾನು ಚಿಕ್ಕವಳಿದ್ದಾಗ, ಜನರು ನನ್ನನ್ನು ಹೀಯಾಳಿಸುತ್ತಿದ್ದರು. ಆದರೆ ಕೆಲವೇ ತಿಂಗಳುಗಳ ಹಿಂದೆ, ಯೂಟ್ಯೂಬ್‌ನಲ್ಲಿ ಶಸ್ತ್ರಚಿಕಿತ್ಸೆಯ ವಿಡಿಯೋ ಹಂಚಿಕೊಂಡಾಗ ನನ್ನ ಸಂಬಂಧಿಕರು ಬೆರಗಾಗಿ ಹೋಗಿದ್ದಾರೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಆದರೆ, ಇಲ್ಲಿಯವರೆಗೆ ಎಷ್ಟು ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ ಎಂಬುದು ಆಕೆಗೆ ತಿಳಿದಿಲ್ಲ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Sat, 14 September 24