
ಭಾರತದ ವಿಭಜನೆಗೆ ಕಾರಣಕರ್ತರಾಗಿದ್ದ ಹಾಗೂ ಪಾಕಿಸ್ತಾನದ ಉಗಮಕ್ಕೆ ಅಡಿಪಾಯ ಹಾಕಿದ್ದ ಮುಹಮ್ಮದ್ ಅಲಿ ಜಿನ್ನಾ ಅವರ ಮರಿಮೊಮ್ಮಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದಾರೆ. ಇದೀಗ ಜಿನ್ನಾ ಅವರ ಮರಿಮೊಮ್ಮಗಳು ಎಲ್ಲಾ ವಾಡಿಯಾ (Ella Wadia) ಪಾಕಿಸ್ತಾನದ ಪ್ರತಿಕೆ ಹಾಗೂ ಟಿವಿ ಚಾನಲ್ಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಎಲ್ಲಾ ವಾಡಿಯಾ ಇತ್ತೀಚೆಗೆ ಪ್ಯಾರಿಸ್‌ನಲ್ಲಿ ನಡೆದ ವಿಶ್ವದ ಅತ್ಯಂತ ಪ್ರತಿಷ್ಠಿತ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಒಂದಾದ ಲೆ ಬಾಲ್ ಡೆಸ್ ಡೆಬ್ಯುಟಾಂಟೆಸ್ 2025ರಲ್ಲಿ ಭಾಗವಹಿಸಿದ್ದಾರೆ. ಈ ಫ್ಯಾಷನ್ ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ಗಣ್ಯರ ಮಧ್ಯೆ ಎಲ್ಲಾ ವಾಡಿಯಾ ಕೂಡ ಮಿಂಚಿದ್ದಾರೆ.
ಈ ಫ್ಯಾಷನ್ ಬಾಲ್ ಪ್ರತಿ ವರ್ಷ ಪ್ಯಾರಿಸ್‌ನ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ನಡೆಯುತ್ತದೆ, ಇದು ಒಂದು ಕಾಲದಲ್ಲಿ ಪ್ರಿನ್ಸ್ ರೋಲ್ಯಾಂಡ್ ಬೊನಪಾರ್ಟೆ ಅವರ ನಿವಾಸವಾಗಿತ್ತು. ಈ ವರ್ಷದ ಕಾರ್ಯಕ್ರಮವು ನವೆಂಬರ್ 29ರಂದು ನಡೆಯಿತು. ಈ ಫ್ಯಾಷನ್ ಬಾಲ್ 25 ವರ್ಷ ತುಂಬಿದ ಯುವತಿಯರನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ರಾಜಮನೆತನದ ಹೆಣ್ಣುಮಕ್ಕಳು, ಪ್ರಮುಖ ರಾಜಕೀಯ ವ್ಯಕ್ತಿಗಳ ಮಕ್ಕಳು, ಹಾಲಿವುಡ್ ತಾರೆಯರ ಮಕ್ಕಳು ಭಾಗವಹಿಸಿದರು. ಎಲ್ಲಾ ವಾಡಿಯಾ ಕೂಡ ಇದರಲ್ಲಿ ಸೇರಿಕೊಂಡಿದ್ದರು. ಎಲ್ಲಾ ವಾಡಿಯಾ ಸ್ಟ್ರಾಪ್‌ಲೆಸ್ ಎಲೀ ಸಾಬ್ ಗೌನ್ ಧರಿಸಿಕೊಂಡು ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದರು.
ಎಲ್ಲಾ ವಾಡಿಯಾ ಭಾರತದ ಅತ್ಯಂತ ಗೌರವಾನ್ವಿತ ವ್ಯಾಪಾರ ಕುಟುಂಬದಿಂದ ಬಂದವರು. ಉದ್ಯಮಿ ಜೆಹಾಂಗೀರ್ ವಾಡಿಯಾ ಮತ್ತು ಫ್ಯಾಷನ್ ಡಿಸೈನರ್ ಸೆಲೀನಾ ವಾಡಿಯಾ ಅವರ ಪುತ್ರಿ. ಪೋಷಕರ ಜತೆ ಸೇರಿಕೊಂಡು ಸಿ ಫೆಮ್ಮೆ ಎಂಬ ಫ್ಯಾಷನ್ ಬ್ರ್ಯಾಂಡ್ ಅನ್ನು ನಡೆಸುತ್ತಿದ್ದಾರೆ. ತಂದೆ ಜೆಹಾಂಗೀರ್ ವಾಡಿಯಾ, ಬಾಂಬೆ ಡೈಯಿಂಗ್, ಬಾಂಬೆ ರಿಯಾಲ್ಟಿ ಮತ್ತು ಗೋ ಫಸ್ಟ್‌ನಂತಹ ಪ್ರಮುಖ ಬ್ರಾಂಡ್ ಕಂಪನಿಗಳ ಜತೆಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದಾರೆ. ಅವರ ತಾಯಿ ಕೂಡ ಫ್ಯಾಷನ್ ಮತ್ತು ಜೀವನಶೈಲಿ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.
ಇದನ್ನೂ ಓದಿ: ‘ಕ್ಷಮಿಸಿ, ನಾನು ಕೂಡ ಮನೆಗೆ ಹೋಗಬೇಕು” ಇಂಡಿಗೋ ವಿಮಾನದ ಪೈಲಟ್ ವಿಡಿಯೋ ವೈರಲ್
ಎಲ್ಲಾ ವಾಡಿಯಾ ಮತ್ತು ಜಿನ್ನಾ ಅವರ ಕುಟುಂಬ ಸಂಬಂಧ ಮೂರು ತಲೆಮಾರುಗಳಿಂದ ಬಂದಿದೆ. ಮುಹಮ್ಮದ್ ಅಲಿ ಜಿನ್ನಾ ಅವರ ಎರಡನೇ ಪತ್ನಿ ರಟ್ಟನ್‌ಬಾಯಿ ಪೆಟಿಟ್. ಅವರಿಗೆ ದಿನಾ ಜಿನ್ನಾ ಎಂಬ ಮಗಳು ಇದ್ದರು. ದಿನಾ ಅವರು ಉದ್ಯಮಿ ನೆವಿಲ್ಲೆ ವಾಡಿಯಾ ಅವರನ್ನು ವಿವಾಹವಾದರು. ನಂತರ ಅವರಿಗೆ ಜನಿಸಿದ ಮಗ ನುಸ್ಲಿ ವಾಡಿಯಾ, ಇವರು ದೇಶದ ಪ್ರಮುಖ ಕೈಗಾರಿಕೋದ್ಯಮಿಯಾಗಿದ್ದರು, ನುಸ್ಲಿ ವಾಡಿಯಾ ಅವರಿಗೆ ನೆಸ್ ವಾಡಿಯಾ ಮತ್ತು ಜೆಹಾಂಗೀರ್ ವಾಡಿಯಾ ಎಂಬ ಇಬ್ಬರು ಗಂಡು ಮಕ್ಕಳು. ಜೆಹಾಂಗೀರ್ ವಾಡಿಯಾ ಅವರ ಮಗಳು ಈ ಎಲ್ಲಾ ವಾಡಿಯಾ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Mon, 8 December 25