ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲಯನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಮದುವೆ ಸಮಾರಂಭದ ಕಾರ್ಯ ಭರದಿಂದ ಸಾಗಿದೆ. ಕೋಟಿ ಕೋಟಿ ಹಣ ಸುರಿದು ಎರಡು ವಿವಾಹ ಪೂರ್ವ ಕಾರ್ಯಕ್ರಮಗಳು ನಡೆದ ಬಳಿಕ ಇದೀಗ ಜುಲೈ 12ರಂದು ವಿವಾಹ ನಡೆಯಲಿದೆ. ಈಗಾಗಲೇ ಮದುವೆ ಸಂಬಂಧಿಸಿದ ವಿವಿಧ ಶಾಸ್ತ್ರಗಳು ಪ್ರಾರಂಭವಾಗಿದ್ದು, ಸೆಲೆಬ್ರೆಟಿಗಳು ಸೇರಿದಂತೆ ಸಾಕಷ್ಟು ಉದ್ಯಮಿಗಳು ಭಾಗಿಯಾಗಿದ್ದಾರೆ. ಇದೀಗ ಅಂಬಾನಿ ಮನೆಯ ಶುಭ ಸಮಾರಂಭಗಳಲ್ಲಿ ಫೋಟೋ ಕ್ಲಿಕ್ಕಿಸುವ ಫೋಟೋಗ್ರಾಫರ್ ಭಾರೀ ಸುದ್ದಿಯಲ್ಲಿದ್ದಾರೆ. ಈ ಫೋಟೋಗ್ರಾಫರ್ ಯಾರು? ಇವರು ಒಂದು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಜೋಸೆಫ್ ರಾಧಿಕ್ ಸೆಲೆಬ್ರೆಟಿ ಫೋಟೋಗ್ರಾಫರ್ ಆಗಿದ್ದು, ಬಾಲಿವುಡ್ನ ಸಾಕಷ್ಟು ಸೆಲೆಬ್ರೆಟಿಗಳ ಮದುವೆಯ ಸುಂದರ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಿದ್ದಾರೆ. ವಿರಾಟ್- ಅನುಷ್ಕಾ, ಕತ್ರಿನಾ ಕೈಫ್-ವಿಕ್ಕಿ ಕೌಶಲ್,ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಹಾಗೂ ಸಾಕಷ್ಟು ಸೆಲೆಬ್ರೆಟಿಗಳ ಮದುವೆಯಲ್ಲಿ ಫೋಟೋಗ್ರಾಫರ್ ಆಗಿ ಮಿಂಚಿರುವ ಜೋಸೆಫ್ ರಾಧಿಕ್, ಇದೀಗ ಮುಖೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆಯಲ್ಲೂ ಫೋಟೋಗ್ರಾಫರ್ ಆಗಿ ನೇಮಕಗೊಂಡಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕ ಮರ್ಚೆಂಟ್ ಅವರ ವಿವಾಗ ಪೂರ್ವ ಸಮಾರಂಭದಲ್ಲೂ ಜೋಸೆಫ್ ರಾಧಿಕ್ ಫೋಟೋಗ್ರಾಫರ್ ಆಗಿದ್ದರು.
ಇದನ್ನೂ ಓದಿ: Stag Beetle: ವಿಶ್ವದ ಅತ್ಯಂತ ದುಬಾರಿ ಕೀಟ; ಇದರ ಬೆಲೆ Audi carಗಿಂತಲೂ ಹೆಚ್ಚು
ಫೋಟೋಗ್ರಾಫರ್ ಜೋಸೆಫ್ ರಾಧಿಕ್ ಪ್ರಯಾಣ ಮತ್ತು ವಾಸ್ತವ್ಯದ ವೆಚ್ಚಗಳ ಹೊರತಾಗಿ ಒಂದು ದಿನಕ್ಕೆ 1.25 ಲಕ್ಷದಿಂದ ₹ 1.50 ಲಕ್ಷದವರೆಗೆ ಸಂಭಾವಣೆಯನ್ನು ಪಡೆಯುತ್ತಾರೆ ಎಂದು ಡಿಎನ್‌ಎ ವರದಿ ಮಾಡಿದೆ. 3 ವರ್ಷಗಳ ಕಾಲ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡಿದ್ದ ಜೋಸೆಫ್ ರಾಧಿಕ್ 2010 ರಲ್ಲಿ, ತನ್ನ ಕಾರ್ಪೊರೇಟ್ ಉದ್ಯೋಗವನ್ನು ತೊರೆದು ಫೋಟೋಗ್ರಾಫರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ