AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಕಾಫಿಯಲ್ಲಿ ಅದ್ದಿ ತಯಾರಿಸಿದ ರಸಗುಲ್ಲಾವನ್ನಾ ಎಂದಾದರೂ ಸವಿದಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ

ಕಾಫಿಯಲ್ಲಿ ಅದ್ದಿ ತಯಾರಿಸಿದ ರಸಗುಲ್ಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಈ ವಿಡಿಯೋ ನೋಡಿದರೆ ರಸಗುಲ್ಲಾ ಪ್ರಿಯರು ಶಾಕ್​​ ಆಗುವುದಂತೂ ಖಂಡಿತಾ. ವೈರಲ್ ಆಗಿರುವ​​ ವಿಡಿಯೋ ಇಲ್ಲಿದೆ ನೋಡಿ.

Video Viral: ಕಾಫಿಯಲ್ಲಿ ಅದ್ದಿ ತಯಾರಿಸಿದ ರಸಗುಲ್ಲಾವನ್ನಾ ಎಂದಾದರೂ ಸವಿದಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ
ಕಾಫಿಯಲ್ಲಿ ಅದ್ದಿ ತಯಾರಿಸಿದ ರಸಗುಲ್ಲಾ
ಅಕ್ಷತಾ ವರ್ಕಾಡಿ
|

Updated on:Jul 10, 2024 | 3:32 PM

Share

ಸಿಹಿಯಾದ ರುಚಿಕರವಾದ ಬೆಂಗಾಲಿ ಆಹಾರದ ವಿಷಯಕ್ಕೆ ಬಂದಾಗ ರಸಗುಲ್ಲಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ಸಕ್ಕರೆ ಪಾಕದಿಂದ ತುಂಬಿದ ಗೋಲಿಗಳಂತಹ ರಸಗುಲ್ಲಾ ಕಂಡಾಗ ಒಂದು ಕ್ಷಣ ಬಾಯಲ್ಲಿ ನೀರೂರುವುದಂತೂ ಖಂಡಿತಾ. ಇದೀಗ ಕಾಫಿಯಲ್ಲಿ ಅದ್ದಿ ತಯಾರಿಸಿದ ರಸಗುಲ್ಲಾದ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ. ಈ ವಿಡಿಯೋ ನೋಡಿದರೆ ರಸಗುಲ್ಲಾ ಪ್ರಿಯರು ಶಾಕ್​​ ಆಗುವುದಂತೂ ಖಂಡಿತಾ.

bombaysweetshope ಎಂಬ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿರುವ ಈ ರಸಗುಲ್ಲಾದ ವಿಡಿಯೋ ಎಲ್ಲೆಡೆ ಭಾರೀ ವೈರಲ್​ ಆಗಿದೆ. 79,837 ಜನರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಕಷ್ಟು ಜನರು “ರುಚಿ ಅದ್ಭುತವಾಗಿದೆ” ಎಂದು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

​​

ಇದನ್ನೂ ಓದಿ: Joseph Radhik: ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ಅವರು ಪಡೆಯುವ ಸಂಭಾವನೆ ಎಷ್ಟು?

ವಿಡಿಯೋ ವೈರಲ್​​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರ ಟೀಕೆಗೂ ಗುರಿಯಾಗಿದೆ. ಸಂಪ್ರದಾಯಿಕ ಸಿಹಿತಿಂಡಿಯಾದ ರಸಗುಲ್ಲಾದ ಜೊತೆಗೆ ಪ್ರಯೋಗ ಬೇಡ ಎಂದು ಕಾಮೆಂಟ್​ ಮಾಡಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಆಹಾರದ ಜೊತೆಗೆ ವಿವಿಧ ಆಹಾರಗಳನ್ನು ಸೇರಿಸಿ ಪ್ರಯೋಗ ಮಾಡುವುದು ಹೆಚ್ಚಾಗಿ ಬಿಟ್ಟಿದೆ” ಎಂದು ಮತ್ತೊಬ್ಬರು ಕಾಮೆಂಟ್​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Wed, 10 July 24