ಗರಿಗರಿ ಚಿಪ್ಸ್​ ಮಾಡುವ ವಿಧಾನ ಹೇಳಿಕೊಟ್ಟ ಆ ಪುಟ್ಟ ಬಾಲಕ; ಅವನ ಮಾತು ಕೇಳಿದ್ರೆ ಚಿಪ್ಸ್​ ಮಾಡದೇ ಇರ್ತೀರಾ? ವಿಡಿಯೋ ವೈರಲ್

ಮನೆಯಲ್ಲಿಯೇ ಗರಿಗರಿಯಾದ ಪೊಟಾಟೊ(ಆಲೂಗಡ್ಡೆ) ಲೇಸ್​ ಅಥವಾ ಚಿಪ್ಸ್ ಮಾಡುವ ವಿಧಾನ ಹೇಗೆ ಎಂಬುದನ್ನು ಕೇರಳ ಮೂಲದ ಬಾಲಕ ಶಂಕರ್​ ವಿವರಿಸುತ್ತಾನೆ. ಇತ್ತೀಚೆಗೆ ಶಂಕರ್​ ವ್ಲಾಗ್ಸ್ ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹರಿ ಬಿಟ್ಟಿದ್ದಾನೆ. ಚಿಪ್ಸ್​ ತಯಾರಿಸುವ ವಿಡಿಯೋ ಸುಮಾರು 5 ಲಕ್ಷ ವೀಕ್ಷಣೆಯನ್ನು ಗಳಿಸಿಕೊಂಡಿದೆ.

ಗರಿಗರಿ ಚಿಪ್ಸ್​ ಮಾಡುವ ವಿಧಾನ ಹೇಳಿಕೊಟ್ಟ ಆ ಪುಟ್ಟ ಬಾಲಕ; ಅವನ ಮಾತು ಕೇಳಿದ್ರೆ ಚಿಪ್ಸ್​ ಮಾಡದೇ ಇರ್ತೀರಾ? ವಿಡಿಯೋ ವೈರಲ್
ಗರಿಗರಿ ಚಿಪ್ಸ್​ ಮಾಡುವ ವಿಧಾನ ಹೇಳಿಕೊಟ್ಟ ಪುಟ್ಟ ಬಾಲಕ

Updated on: May 31, 2021 | 11:19 AM

ಕೊರೊನಾ ವೈರಸ್​ ಹರಡುತ್ತಿದ್ದಂತೆಯೇ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಯಿತು, ಲಾಕ್​ಡೌನ್​ ಕೂಡಾ ಜಾರಿಯಲ್ಲಿದೆ. ಈ ಮಧ್ಯೆ ಮನೆಯಲ್ಲಿ ಕೂತು ಸಮಯವೇ ಸಾಗುತ್ತಿಲ್ಲ ಎನ್ನುತ್ತಿರುವವರು ಒಂದು ಕಡೆ, ಅಮ್ಮಾ ಹಸಿವು… ಎಂಬ ಮಕ್ಕಳ ಕೂಗು ಇನ್ನೊಂದು ಕಡೆ. ತಿಂಡಿ ತಿನಿಸುಗಳನ್ನು ಅಂಗಡಿಗಳಿಂದ ತರೋಣ ಎಂದರೆ ಹೊರಗಡೆ ಕಾಲಿಡುವಂತಿಲ್ಲ. ಅಗತ್ಯವಾದ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿರುವುದಿಂದ ಮಕ್ಕಳಿಗಿಷ್ಟವಾದ ಗರಿಗರಿ ಚಿಪ್ಸ್​ಗಳು ಸಿಗುತ್ತಿಲ್ಲ. ಹೀಗಿರುವಾಗ ಮನೆಯಲ್ಲೇ ಚಿಪ್ಸ್​ ಮಾಡುವುದು ಹೇಗೆ ಎಂಬುದನ್ನು ಆ ಪುಟ್ಟ ಬಾಲಕ ಹೇಳುತ್ತಾನೆ. ಚಟ್​ಪಟ್​ ಅಂತ ಮಾಡನಾಡುತ್ತಲೇ ಚಿಪ್ಸ್​ ತಯಾರಿಸಿ ಸವಿದೇ ಬಿಡುತ್ತಾನೆ. ಇದೀಗ ಕೇರಳದ ಆ ಪುಟ್ಟ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸದ್ದು ಮಾಡುತ್ತಿದೆ. ಬಾಲಕನ ಮಾತಿಗೆ ನೆಟ್ಟಿಗರು ಫುಲ್​ ಫಿದಾ ಆಗಿದ್ದಂತೂ ಸತ್ಯ.

ಮನೆಯಲ್ಲಿಯೇ ಗರಿಗರಿಯಾದ ಪೊಟಾಟೊ(ಆಲೂಗಡ್ಡೆ) ಲೇಸ್​ ಅಥವಾ ಚಿಪ್ಸ್ ಮಾಡುವ ವಿಧಾನ ಹೇಗೆ ಎಂಬುದನ್ನು ಕೇರಳ ಮೂಲದ ಬಾಲಕ ಶಂಕರ್​ ವಿವರಿಸುತ್ತಾನೆ. ಇತ್ತೀಚೆಗೆ ಶಂಕರ್​ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹರಿ ಬಿಟ್ಟಿದ್ದಾನೆ. ಚಿಪ್ಸ್​ ತಯಾರಿಸುವ ವಿಡಿಯೋ ಸುಮಾರು 5 ಲಕ್ಷ ವೀಕ್ಷಣೆಯನ್ನು ಗಳಿಸಿಕೊಂಡಿದೆ.

ಲಾಕ್​ಡೌನ್​ ಸಮಯದಲ್ಲಿ ಶಾಲೆ ಮುಚ್ಚಲ್ಪಟ್ಟಾಗ ಶಂಕರ್​ ಹೆಚ್ಚು ಉತ್ಸುಕನಾಗಿದ್ದನು. ಆದರೆ ನಂತರ ತನ್ನ ಸ್ನೇಹಿತರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ಆತನಿಗೆ ಕಾಡತೊಡಗಿತು. ಹಾಗಾಗಿ ಯೂಟ್ಯೂಬ್​ ಚಾನೆಲ್​ ತೆರಯಬೇಕು ಎಂಬ ಆಸೆ ಹೊತ್ತು ತನ್ನದೇ ಹೆಸರಿನ ಯುಟ್ಯೂಬ್​ ಚಾನೆಲ್​ ಅನ್ನು ತೆರೆದಿದ್ದಾನೆ. ಆತನ ಚಟ್​ಪಟ್​ ಮಾತು ಜತೆಗೆ ಗರಿಗರಿಯಾದ ಚಿಪ್ಸ್​ ತಯಾರಿಸುವ ವಿಧಾನ ಇದೀಗ ನೆಟ್ಟಿಗರ ಮನಸೆಳೆದಿದೆ.

ಬಾಲಕ ಶಂಕರ್​ ಗರಿಗರಿಯಾದ ಪೊಟಾಟೊ ಚಿಪ್ಸ್ಅನ್ನು ಸರಳ ವಿಧಾನದಲ್ಲಿ​ ತಯಾರಿಸುವುದು ಹೇಗೆ ಎಂಬುದನ್ನು ತನ್ನ ಯುಟ್ಯೂಬ್​ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೋ ಇಲ್ಲಿದೆ ನೋಡಿ..

ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್​
ಟೊಮ್ಯಾಟೊ
ಗರಂ ಮಸಾಲಾ
ಸಕ್ಕರೆ
ಮೆಣಸಿನ ಪುಡಿ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ
ಟೊಮ್ಯಾಟೋನಿಂದ ಸಾಸ್​ ತಯಾರಿಸಿಕೊಳ್ಳಿ. ಮನೆಯಲ್ಲಿರುವ ಆಲೂಗಡ್ಡೆಯ ಸಿಪ್ಪೆ ತೆಗೆದು ತೆಳುವಾಗಿ ಕತ್ತರಿಸಿಕೊಳ್ಳಿ. ಪ್ಯಾನ್​ಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಕಾದ ಬಳಿಕ ತೆಳುವಾಗು ಕತ್ತರಿಸಿದ ಆಲೂಗಡ್ಡೆಯನ್ನು ಫ್ರೈ ಮಾಡಿ. ಬಳಿಕ ಗರಿಗರಿಯಾದ ಕತ್ತರಿಸಿದ ಆಲೂ ಸಿದ್ಧವಾಗುತ್ತದೆ. ಅದಕ್ಕೆ ತಯಾರಿಸಿಕೊಂಡ ಗರಂ ಮಸಾಲಾ ಹಾಕಿ ಮಿಕ್ಸ್​ ಮಾಡಿದರೆ ಪೊಟಾಟೊ ಚಿಪ್ಸ್​ ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ: 

ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್​ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್

ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​; ಹೇಗಿದ್ರು ನೋಡಿ ನ್ಯಾಷನಲ್​ ಕ್ರಶ್

Published On - 11:03 am, Mon, 31 May 21