ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದಲ್ಲಿ ಹಲವಾರು ದೇವಾಲಯಗಳು ಕಾಣಸಿಗುತ್ತವೆ. ಈ ಪ್ರಖ್ಯಾತ ದೇವಸ್ಥಾನಗಳ ಪೈಕಿ ಅಂಬಲಪುಳ ಕೃಷ್ಣ ದೇವಾಲಯವೂ ಒಂದು. ಇಲ್ಲಿ ಪಾರ್ಥಸಾರಥಿಯ ರೂಪದಲ್ಲಿ ಒಂದು ಕೈಯಲ್ಲಿ ಶಂಖ ಹಾಗೂ ಮತ್ತೊಂದು ಕೈಯಲ್ಲಿ ಚವಟಿಯನ್ನು ಹಿಡಿದಿರುವ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನದ ಮತ್ತೊಂದು ವಿಶೇಷವೆಂದರೆ ಪಾಲ್ಪಾಯಸಂ. ಹಾಲು, ಅಕ್ಕಿ ಹಾಗೂ ಸಕ್ಕರೆಯಿಂದ ತಯಾರಿಸಿದ ಶ್ರೀ ಕೃಷ್ಣನಿಗೆ ಪ್ರಿಯವಾದ ಈ ನೈವೇದ್ಯವನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ಈ ನೈವೇದ್ಯದ ಇನ್ನೊಂದು ವಿಶೇಷವೆಂದರೆ, ಪ್ರತಿದಿನ ಇಲ್ಲಿ ನೈವೇದ್ಯಕ್ಕೆ ಸಕ್ಕರೆಯನ್ನು ಸೇರಿಸುವ ಮೊದಲು ಅಡುಗೆ ಭಟ್ಟರು ಕೃಷ್ಣನ ಅನುಮತಿಯನ್ನು ಪಡೆಯಲು ವಾಸುದೇವೋ ಎಂದು ಜೋರಾಗಿ ಕೂಗುತ್ತಾರೆ. ಈ ಕುರಿತ ಸುಂದರ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಅಂಬಲಪುಳ ಕೃಷ್ಣ ಈ ದೇವಾಲಯವು ಆಧ್ಯಾತ್ಮಿಕ ಮಹತ್ವದ ಜೊತೆಗೆ ಭಕ್ತರಿಗೆ ವಿತರಿಸುವ ರುಚಿಕರವಾದ ಪ್ರಸಾದಕ್ಕೂ ಹೆಸರುವಾಸಿಯಾಗಿದೆ. ಹೌದು ಈ ದೇವಾಲಯವು ಅಕ್ಕಿ, ಹಾಲು ಮತ್ತು ಸಕ್ಕರೆಯಿಂದ ತಯಾರಿಸಿದ ಪಲ್ಪಾಯಸಂ ಎಂಬ ವಿಶೇಷ ಪ್ರಸಾದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರತಿದಿನ 100 ಲೀ ಗಳಷ್ಟು ಪ್ರಸಾದವನ್ನು ತಯಾರಿಸಲಾಗುತ್ತದೆ. ಹಳೆಯ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿರುವ ಈ ದೇವಾಲಯದಲ್ಲಿ ನೈವೇದ್ಯ ತಯಾರಿಸುವಾಗ ಕೊನೆಯಲ್ಲಿ ಆ ಪ್ರಸಾದಕ್ಕೆ ಸಕ್ಕರೆಯನ್ನು ಸೇರಿಸುವ ಸಂದರ್ಭದಲ್ಲಿ ಬಾಗಿಲ ಬಳಿ ನಿಂತು ಅಡುಗೆ ಭಟ್ಟರು “ವಾಸುದೇವೋ” ಎಂದು ಜೋರಾಗಿ ಕೂಗುವ ಮೂಲಕ ಶ್ರೀ ಕೃಷ್ಣನ ಅನುಮತಿಯನ್ನು ಪಡೆಯುತ್ತಾರೆ.
ಈ ಕುರಿತ ಪೋಸ್ಟ್ ಒಂದನ್ನು Team Hindu United ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ದೇವಾಲಯದ ಬಾಗಿಲ ಬಳಿ ನಿಂತು ಅರ್ಚಕರೊಬ್ಬರು ವಾಸುದೇವೋ…… ಎಂದು ಕೂಗಿ ಹೇಳುವ ರೋಮಾಂಚನಕಾರಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ; ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ದೇವರಂತೆ ಬಂದು ಆಕೆಯನ್ನು ಕಾಪಾಡಿದ ಬೀದಿ ನಾಯಿ
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ಈ ದೃಶ್ಯ ನಿಜಕ್ಕೂ ರೋಮಾಂಚನಕಾರಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Mon, 8 July 24