Viral Vidieo: ಸೀರೆ ಉಟ್ಟು ಸ್ಕೇಟ್‌ಬೋರ್ಡಿಂಗ್ ಮಾಡಿದ ಕೇರಳ ಮಹಿಳೆ: ನೆಟ್ಟಿಗರು ಫುಲ್​ ಫಿದಾ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 22, 2022 | 7:23 AM

ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ 6.8 ಲಕ್ಷ ಹಿಂಬಾಲಕರನ್ನು ಹೊಂದಿರುವ ಬ್ಲಾಗರ್ ಲಾರಿಸ್ಸಾ ಡಿಸಾ ಅವರು ಸೀರೆಯನ್ನು ಧರಿಸಿ ರಸ್ತೆಯಲ್ಲಿ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

Viral Vidieo: ಸೀರೆ ಉಟ್ಟು ಸ್ಕೇಟ್‌ಬೋರ್ಡಿಂಗ್ ಮಾಡಿದ ಕೇರಳ ಮಹಿಳೆ: ನೆಟ್ಟಿಗರು ಫುಲ್​ ಫಿದಾ
ಲಾರಿಸ್ಸಾ ಡಿ'ಸಾ
Follow us on

ನೀವು ಸಾಮಾಜಿಕ ಮಾಧ್ಯಮದಲ್ಲಿ ಅದರಲ್ಲುಯೂ ವಿಶೇಷವಾಗಿ ಇನ್​​ಸ್ಟಾಗ್ರಾಮ್​ನಲ್ಲಿ (Instagram)ನಲ್ಲಿ ಪ್ರಯಾಣ ಮತ್ತು ಜೀವನಶೈಲಿ ವಿಡಿಯೋಗಳನ್ನು ವೀಕ್ಷಿಸಲು ಬಯಸಿದರೆ ನೀವು ಬಹುಶಃ ಲಾರಿಸ್ಸಾ ಡಿ’ಸಾ (Larissa D’Sa) ಎನ್ನುವ ಪ್ರೊಫೈಲ್​ನ್ನು ನೋಡಿರುತ್ತೀರಿ. ಲಾರಿಸ್ಸಾ ಡಿ’ಸಾ ಅವರು ಇತ್ತೀಚೆಗೆ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಸಾಕಷ್ಟು ಜನಪ್ರಿಯವಾಗುವುದರೊಂದಿಗೆ ವೈರಲ್​ ಕೂಡ ಆಗಿದೆ. ಹಾಗಾದರೆ ಅವರು ಹಂಚಿಕೊಂಡ ಆ ವಿಡಿಯೋ ಯಾವುದು ಅಂತೀರಾ. ಮುಂದೆ ಓದಿ. ಕೇರಳ ಮೂಲದ ಟ್ರಾವೆಲ್ ಬ್ಲಾಗರ್ ಆಗಿರುವ ಲಾರಿಸ್ಸಾ ಡಿ’ಸಾ ಸೀರೆ ಉಟ್ಟು ಲೀಲಾಜಾಲವಾಗಿ ಕೇರಳದ ರಸ್ತೆ ಬೀದಿಗಳಲ್ಲಿ  ಸ್ಕೇಟ್‌ಬೋರ್ಡಿಂಗ್ (Skateboard) ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟಿಗರನ್ನು ಬೆರಗುಗೊಳಿಸಿದೆ. ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ 6.8 ಲಕ್ಷ ಹಿಂಬಾಲಕರನ್ನು ಹೊಂದಿರುವ ಬ್ಲಾಗರ್ ಲಾರಿಸ್ಸಾ ಡಿಸಾ ಅವರು ಸೀರೆಯನ್ನು ಧರಿಸಿ ರಸ್ತೆಯಲ್ಲಿ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಹೆಲ್ಮೆಟ್ ಅಥವಾ ಯಾವುದೇ ಇತರೆ ಸುರಕ್ಷಿತ ರಕ್ಷಣಾ ಸಲಕರಣೆಗಳಿಲ್ಲದೆ, ಪ್ರಮುಖವಾಗಿ ಯಾವುದೇ ಅಳುಕಿಲ್ಲದೆ ಸ್ಕೇಟ್‌ಂಗಿ ಮಾಡಿದ್ದಾರೆ. ಲಾರಿಸ್ಸಾ ಕೇರಳ ಸಾಂಪ್ರದಾಯದಂತೆ ಬಿಳಿ ಕಾಟನ್ ಸೀರೆಯನ್ನು ತೊಟ್ಟುರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಸುತ್ತಲು ತಾಳೆ ಮರಗಳು ಮತ್ತು ಹಚ್ಚ ಹಸಿರಿನ ದೃಶ್ಯಾವಳಿಗಳು ವಿಡಿಯೋವನ್ನು ಇನ್ನಷ್ಟು ರಮಣೀಯ ಮತ್ತು ಸೌಂದರ್ಯವನ್ನು ಹೆಚ್ಚಿಸಿವೆ. ಇದು ವಿಡಿಯೋವನ್ನು ಮತ್ತಷ್ಟು ಆಕರ್ಷಕವಾಗಿಸಿದೆ.

ಇದನ್ನೂ ಓದಿ: INR USD Exchange Rate: ಜೂನ್ 21ಕ್ಕೆ ಅಮೆರಿಕ ಡಾಲರ್ ಸೇರಿ ಯಾವ ದೇಶದ ವಿರುದ್ಧ ಭಾರತದ ರೂಪಾಯಿ ಮೌಲ್ಯ ಎಷ್ಟಿದೆ?

ಈ ಸ್ಕೇಟ್‌ಬೋರ್ಡಿಂಗ್​ನ್ನು ನಾನು ಮಾಡಬೇಕಾಗಿತ್ತು. ನಾನು ಇದನ್ನು ಮಾಡುವಾಗ ನನಗೆ ಸಾಕಷ್ಟು ಜನರು ಕೂಡ ಇದ್ದರು. ಕೆಲವರು ಸೆಲ್ಫಿ ತೆಗೆದುಕೊಂಡರು. ನೀವು ಸೀರೆ ಉಟ್ಟಿರುವಾಗ ಲಾಂಗ್‌ಬೋರ್ಡ್ ಮಾಡುವುದು ಸುಲಭವಲ್ಲ ಎಂದು ಅವರು ತಮ್ಮ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಅವರು ಸ್ಕೇಟ್‌ಬೋರ್ಡಿಂಗ್​ ಮಾಡುವಾಗ ಹಾದುಹೋಗುವ ಇತರರನ್ನು ಕೈಬೀಸುವುದು ಅಥವಾ ನಮಸ್ಕರಿಸುವುದನ್ನು ಸಹ ನೋಡಬಹುದು. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ನಂತರ ಸುಮಾರು 250 ಸಾವಿರ ಲೈಕ್‌ಗಳನ್ನು ಗಳಿಸಿದೆ ಮತ್ತು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.