Viral News: 6 ತಿಂಗಳಲ್ಲಿ 540 ಕೆಜಿಯಿಂದ 60 ಕೆಜಿಗೆ ತೂಕ ಇಳಿಸಿಕೊಂಡ ವ್ಯಕ್ತಿ

|

Updated on: Aug 15, 2024 | 3:24 PM

2013ರಲ್ಲಿ 610 ಕೆಜಿ ತೂಕವಿದ್ದ ವ್ಯಕ್ತಿ ನಡೆದಾಡಲು ಸಾಧ್ಯವಾಗದೇ 3ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರು. ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದ ಈ ವ್ಯಕ್ತಿಯ ಕಥೆಯಿಂದ ಮನನೊಂದ ಸೌದಿ ರಾಜ ಅಬ್ದುಲ್ಲಾ ಅವರು ತೂಕ ಇಳಿಸಿಕೊಳ್ಳಲು ದುಬಾರಿ ವೈದ್ಯಕೀಯ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದರು.

Viral News: 6 ತಿಂಗಳಲ್ಲಿ 540 ಕೆಜಿಯಿಂದ 60 ಕೆಜಿಗೆ ತೂಕ ಇಳಿಸಿಕೊಂಡ ವ್ಯಕ್ತಿ
Follow us on

ಸುಮಾರು 610 ಕೆಜಿ ತೂಕದ ವಿಶ್ವದ ಅತ್ಯಂತ ತೂಕದ ವ್ಯಕ್ತಿ ಎಂದು ಸುದ್ದಿಯಾಗಿದ್ದ ‘ದೈತ್ಯ ಖಾಲಿದ್ ಬಿನ್ ಮೊಹ್ಸೆನ್ ಶಾರಿ’ ಕೇವಲ 6 ತಿಂಗಳಲ್ಲಿ 542 ಕೆಜಿ ತೂಕ ಇಳಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. 610 ಕೆಜಿಯಿಂದ 60 ಕೆಜಿಗೆ ಇಳಿಸಿದ್ದಾರೆ. 2013ರಲ್ಲಿ ಖಾಲಿದ್ ತೂಕ ಅಕ್ಷರಶಃ 610 ಕೆ.ಜಿ. ಇತ್ತು, ಇದರಿಂದಾಗಿ ಮೂರು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರು. ಅಧಿಕ ತೂಕದಿಂದಾಗಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು, ಒಂದು ಹಂತದಲ್ಲಿ ಪ್ರಾಣಾಪಾಯವೂ ಸಂಭವಿಸಿತ್ತು. ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದ ಖಾಲಿದ್‌ನ ಕಥೆಯಿಂದ ಮನನೊಂದ ಸೌದಿ ರಾಜ ಅಬ್ದುಲ್ಲಾ ಅವರ ಜೀವ ಉಳಿಸಲು ಮುಂದಾದರು. ತೂಕ ಇಳಿಸಿಕೊಳ್ಳಲು ದುಬಾರಿ ವೈದ್ಯಕೀಯ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದರು.

ಮೊದಲಿಗೆ, ಖಲೀದ್‌ನನ್ನು ಜಜಾನ್‌ನಲ್ಲಿರುವ ತನ್ನ ಮನೆಯಿಂದ ರಿಯಾದ್‌ನ ಕಿಂಗ್ ಫಹದ್ ಮೆಡಿಕಲ್ ಸಿಟಿಗೆ ಫೋರ್ಕ್‌ಲಿಫ್ಟ್ ಮೂಲಕ ವಿಶೇಷವಾಗಿ ತಯಾರಿಸಿದ ಹಾಸಿಗೆಯನ್ನು ಬಳಸಿ ಸಾಗಿಸಲಾಯಿತು. ಅಲ್ಲಿ, ಸುಧಾರಿತ ವೈದ್ಯಕೀಯ ಚಿಕಿತ್ಸೆ ಮತ್ತು 30 ವೈದ್ಯರು ಕಾಲಕಾಲಕ್ಕೆ ಅವರಿಗೆ ಕಟ್ಟುನಿಟ್ಟಾದ ಆಹಾರಕ್ರಮವನ್ನು ಸಿದ್ಧಪಡಿಸಿದ್ದರು.

ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆ ಮತ್ತು ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು. ದೇಹದಲ್ಲಿ ಚಲನೆಯನ್ನು ಪುನಃಸ್ಥಾಪಿಸಲು ವ್ಯಾಯಾಮಗಳನ್ನು ಮಾಡಿಸಲಾಗುತ್ತಿತ್ತು. ಪರಿಣಾಮ ಆರು ತಿಂಗಳಲ್ಲಿ ಅರ್ಧದಷ್ಟು ತೂಕವನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಪತ್ನಿಗೆ ಫೋನ್‌ನಲ್ಲೇ ತಲಾಖ್ ನೀಡಿ ಪಾಕಿಸ್ತಾನದ ಯುವತಿಯನ್ನು ವರಿಸಿದ ಭಾರತದ ವ್ಯಕ್ತಿ

2023 ರ ಹೊತ್ತಿಗೆ, ಅವರು 542 ಕೆಜಿಯನ್ನು ಕಡಿಮೆ ಮಾಡಿ 63.5 ಕೆಜಿ ತಲುಪಿದ್ದಾರೆ. ಖಾಲಿದ್ ಅವರ ದೇಹದಿಂದ ಹೆಚ್ಚುವರಿ ಚರ್ಮವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕೇವಲ ಆರು ತಿಂಗಳಲ್ಲಿ ದೇಹದ ತೂಕ ಇಳಿಸಿಕೊಂಡು ಸಾಮಾನ್ಯ ವ್ಯಕ್ತಿಯಂತೆ ಆರೋಗ್ಯವಾಗಿದ್ದಾರೆ. ಎಲ್ಲರೂ ಖಲೀದ್ ಅವರನ್ನು ‘ದಿ ಸ್ಮೈಲಿಂಗ್ ಮ್ಯಾನ್’ ಎಂದು ಕರೆಯಲಾರಂಭಿಸಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Thu, 15 August 24