Viral Video : ಕೊರಿಯನ್ ತಾಯಿಯೊಬ್ಬಳು ತನ್ನ ಮಗುವಿಗೆ ಭಾರತದ ರಾಷ್ಟ್ರಗೀತೆ ಹಾಡುವುದು ಹೇಗೆ ಎಂದು ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕಿಮ್ ಕೊರಿಯನ್. ಅವರ ಪತಿ ಭಾರತೀಯರು. ಮಗ ಆದಿ ಕೊರಿಯನ್ ಮತ್ತು ಭಾರತೀಯ ಸಂಸ್ಕೃತಿಗಳ ಬಗ್ಗೆ ಕಲಿಯುತ್ತಿರುವ ಚುರುಕುಗಣ್ಣಿನ ಪೋರ. ಈ ವಿಡಿಯೋ 5 ಲಕ್ಷ ವೀಕ್ಷಣೆ ಪಡೆದಿದೆ. ಈ ತಾಯಿಮಗನ ಬಗ್ಗೆ ನೆಟ್ಟಿಗರು ಹೆಮ್ಮೆ ಪಡುತ್ತಿದ್ದಾರೆ. ಒಂದೊಂದೇ ಸಾಲನ್ನು ತಾಯಿ ಹಾಡಿ ತೋರಿಸಿದಂತೆ ಮಗ ಅದನ್ನು ಹಾಡಿ ಒಪ್ಪಿಸುತ್ತಾನೆ.
1,29,000 ಕ್ಕೂ ಹೆಚ್ಚು ಲೈಕ್ಸ್ ಈ ವಿಡಿಯೋ ಪಡೆದಿದೆ. ಇನ್ನೇನು ಪ್ರತಿಕ್ರಿಯಿಸಿದಿವರ ಸಂಖ್ಯೆ 2,000 ತಲುಪಲಿದೆ.
ಪ್ರೇಮ್ ಕಿಮ್ ಫಾರೆವರ್ ಎಂಬ ಇನ್ಸ್ಟಾಗ್ರಾಂ ಖಾತೆಯನ್ನು ಈಕೆ ಹೊಂದಿದ್ದಾರೆ. ಈರುಳ್ಳಿ ಪಕೋಡಾ ಮಾಡುವ ಈ ವಿಡಿಯೋ ಕೂಡ ನೋಡಿ.
ಸಂಸ್ಕೃತಿ ಎಂದಾಗ ಅದರಲ್ಲಿ ಅಡುಗೆ ಉಡುಗೆ ವಿಚಾರ ಆಚಾರ ಮುಂತಾದ ಸಂಗತಿಗಳೂ ಒಳಗೊಳ್ಳುತ್ತದೆಯಲ್ಲವೆ? ಪರಸ್ಪರ ಸ್ವೀಕರಿಸಿ ಅನುಸರಿಸಿದಲ್ಲಿ ಸಂಬಂಧದಲ್ಲಿ ಗೌರವ ಆಪ್ತತೆ ಹೆಚ್ಚಿ ಹರ್ಷದಾಯಕ ವಾತಾವರಣ ಸೃಷ್ಟಿಯಾಗುತ್ತದೆ.
ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:22 am, Fri, 26 August 22