Viral: ಅಂಟಾರ್ಟಿಕಾ ಮ್ಯಾರಥಾನ್​ನಲ್ಲಿ ದಾಖಲೆ ನಿರ್ಮಿಸಿದ ಮಹಿಳೆ: ವಿವಿಧ ದೇಶಗಳಿಂದ ಅಭಿನಂದನೆಗಳ ಮಹಾಪೂರ

| Updated By: Pavitra Bhat Jigalemane

Updated on: Dec 22, 2021 | 5:52 PM

ಲಾಟ್ವಿಯಾದ ಎವಿಜಾ ಎನ್ನುವ 30 ವರ್ಷದ ಮಹಿಳೆ ಈ ಸಾಧನೆ ಮಾಡಿದ್ದಾರೆ. ಡಿಸೆಂಬರ್ 17ರಂದು ಈ ಮ್ಯಾರಥಾನ್​ ಸ್ಪರ್ಧೆ ನಡೆದಿತ್ತು.

Viral: ಅಂಟಾರ್ಟಿಕಾ ಮ್ಯಾರಥಾನ್​ನಲ್ಲಿ ದಾಖಲೆ ನಿರ್ಮಿಸಿದ ಮಹಿಳೆ: ವಿವಿಧ ದೇಶಗಳಿಂದ ಅಭಿನಂದನೆಗಳ ಮಹಾಪೂರ
ಎವಿಜಾ
Follow us on

ಯುನಿಯನ್​ ಗ್ಲೇಸಿಯರ್​ನಲ್ಲಿ ನಡೆದ ಅಂಟಾರ್ಟಿಕಾ ಮ್ಯಾರಥಾನ್​ ರೇಸ್​ನಲ್ಲಿ ಮಹಿಳೆಯೊಬ್ಬರು 4 ಗಂಟೆಗಳಲ್ಲಿ ಮ್ಯಾರಥಾನ್ ಪೂರೈಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಲಾಟ್ವಿಯಾದ ಎವಿಜಾ ಎನ್ನುವ 30 ವರ್ಷದ ಮಹಿಳೆ ಈ ಸಾಧನೆ ಮಾಡಿದ್ದಾರೆ. ಡಿಸೆಂಬರ್ 17ರಂದು ಈ ಮ್ಯಾರಥಾನ್​ ಸ್ಪರ್ಧೆ ನಡೆದಿತ್ತು2013ರಲ್ಲಿ ಯುಕೆ ಮೂಲದ ಪಿಯೋನ ಓಕ್ಸ್​ ಅವರು 4ಗಂಟೆ 20ನಿಮಿಷ 2 ಸೆಕೆಂಡ್​ಗಳಲ್ಲಿ ಮ್ಯಾರಥಾನ್ ಓಟ ಮುಗಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಎವಿಜಾ ಅವರು 4 ಗಂಟೆ 6ನಿಮಿಷ 17 ಸೆಕೆಂಡ್​ಗಳಲ್ಲಿ ಮ್ಯಾರಥಾನ್​ ಮುಗಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಯುಎಸ್​ಎಯ ಗ್ರೇಸ್​ ಯಾ ಎನ್ನುವವರು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಯುಕೆಯ ಜುಲಿಯಾ ಹಂಟರ್​ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಸದ್ಯ ಎವಿಜಾ ಅವರ ಸಾಧನೆಗೆ ಜಗತ್ತಿನ ವಿವಿಧೆಡೆಯಿಂದ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಕುರಿತು ರಾಯಿಟರ್ಸ್​ ಸುದ್ದಿ ಸಂಸ್ಥೆ ವೀಡಿಯೋವನ್ನು ಹಂಚಿಕೊಂಡಿದೆ. ಮ್ಯಾರಥಾನ್​ ಓಟದಲ್ಲಿ ಹಿಮತುಂಬಿದ ದಾರಿಯಲ್ಲಿ ಸಾಗಬೇಕು. ಓಟ ಮುಗಿಸಿ ಬಂದ ಎವಿಜಾ ಈಗ ನಾನು ಆಹಾರವನ್ನು ತಿನ್ನಬೇಕು ಎಂದು ನೆರೆದವರನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 60 ಸಾವಿರಕ್ಕೂ ಮಂದಿ ವೀಡಿಯೋ ವೀಕ್ಷಿಸಿದ್ದು, ಎವಿಜಾ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

Published On - 5:51 pm, Wed, 22 December 21