
ಚಿರತೆಯೊಂದು ಮನೆಯೊಂದರ ಗೇಟಿನ ಒಳಗೆ ನುಗ್ಗಿ ಸಾಕು ನಾಯಿಯನ್ನು ಎಳೆದೊಯ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಚಿರತೆ ಗೇಟಿನ ಮೇಲೆ ಜಿಗಿದು ನಾಯಿಯನ್ನು ಎಳೆದೊಯ್ಯುವ ವಿಡಿಯೋ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ನೋಡಿ ನೆಟ್ಟಿಗರು ಆತಂಕಕೊಂಡಿದ್ದಾರೆ. ಮನೆಗ ಎತ್ತರದ ಗೇಟನ್ನು ಅಳವಡಿಸಿದ್ದರೂ ಕಾಡು ಪ್ರಾಣಿಗಳು ನುಗ್ಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಐಎಫ್ಎಸ್ ಅಧಿಕಾರಿ ಪರ್ವೀಣ್ ಕಸ್ವಾನ್ ಎನ್ನುವವರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಟ್ವಿಟರ್ನಲ್ಲಿ ಹಂಚಿಕೊಂಡಿರುವ ಈ ವೀಡಿಯೋ 16 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ನೆಟ್ಟಿಗರು ತಾವು ನೋಡಿದ ಹಲವು ಘಟನೆಗಳ ಬಗ್ಗೆ ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ಮೊದಲು ನಾಯಿಯೊಂದು ಗೇಟಿನ ಬಳಿ ಬಂದು ಕೂಗುತ್ತಿರುವುದನ್ನು ಕಾಣಬಹುದು. ನಂತರ ತಕ್ಷಣ ನಾಯಿ ದೂರ ಓಡಿಹೋಗುತ್ತದೆ. ಆದರೆ ಗೇಟಿನ ಮೇಲೆ ಹತ್ತಿ ಜಿಗಿದ ಚಿರತೆ ನಾಯಿಯನ್ನು ಬಾಯಲ್ಲಿ ಕಚ್ಚಿಕೊಂಡು ಮತ್ತೆ ಕಾಂಪೌಡ್ ಹಾರಿ ಹೋಗುತ್ತದೆ. ಈ ಭಯಾನಕ ವೀಡಿಯೋ ನೋಡಿ ನೆಟ್ಟಿಗರು ನಾಯಿಯ ಅಸಹಾಯಕತೆಯ ಬಗ್ಗೆ ಮರುಗಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಎಂತಹವರನ್ನೂ ಒಂದು ಕ್ಷಣ ಬೆಚ್ಚಿ ಬೀಳಿಸುವಂತಿದೆ.
ಇದನ್ನೂ ಓದಿ:
Viral Video: ಕಿಟ್ಕ್ಯಾಟ್ ಚಾಕೋಲೇಟ್ನಿಂದ ಟೊಮ್ಯಾಟೋ ಕಟ್ ಮಾಡಿದ ಮಹರಾಯ; ಈ ವಿಡಿಯೋ ಮಿಸ್ ಮಾಡಬೇಡಿ!
Published On - 9:38 am, Sat, 25 December 21