ಕಾಡಿನಿಂದ ದಾರಿ ತಪ್ಪಿ ಬಂದ ಚಿರತೆ ಸುಮಾರು 10 ಅಡಿ ಆಳದ ಬಾವಿಯಲ್ಲಿ ಬಿದ್ದಿದೆ. ಚಿರತೆಯನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ದೈತ್ಯಾಕಾರದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟು ರಕ್ಷಿಸಿದ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ. ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ವೈಲ್ಡ್ಲೈಫ್ ಟ್ವಿಟರ್ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ಬಾವಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಚಿರತೆಯನ್ನು ರಕ್ಷಿಸಿದ ರೀತಿಯನ್ನು ಇದೀಗ ವಿಡಿಯೊದಲ್ಲಿ ನೋಡಬಹುದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಚಿರತೆಯೊಂದು ಬಾವಿಯಲ್ಲಿ ಬಿದ್ದು ಮೇಲೇರಲು ಸಾಧ್ಯವಾಗದೇ ಕೈಕಾಲನ್ನು ನಿರಂತರವಾಗಿ ಬಡಿಯುತ್ತಿತ್ತು. ಶತಪ್ರಯತ್ನ ಪಟ್ಟರೂ ಕೂಡಾ ಬಾವಿಯಿಂದ ಮೇಲೇಳಲು ಸಾಧ್ಯವಾಗುತ್ತಿರಲಿಲ್ಲ. ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ತಿಳಿಸುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಚಿರತೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಬಾವಿಯ ಸುತ್ತ ಸೇರಿದ್ದ ಜನರನ್ನು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡ ಚಿರತೆ ಘರ್ಜಿಸಲು ಪ್ರಾರಂಭಿಸಿದೆ. ಆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ನಂತರ ಚಿರತೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ.
A #leopard was rescued after falling into an open well in #Maharashtra. The big cat was paddling to stay afloat and was at the risk of drowning in 10-feet-deep water. Concerned for its life, a farmer alerted the authorities & the leopard was rescued by #WildlifeSOS & Forest Dept. pic.twitter.com/CB8jttbTGA
— Wildlife SOS (@WildlifeSOS) October 25, 2021
ಇದನ್ನೂ ಓದಿ:
Viral Video: ಸಹೋದ್ಯೋಗಿಗಳ ಜೊತೆ ಡ್ಯಾನ್ಸ್ ಮಾಡಿದ ಪೇಟಿಎಂ ಸಂಸ್ಥಾಪಕ! ವಿಡಿಯೋ ನೋಡಿ
Viral Video: ಹೊಟೆಲ್ನಲ್ಲಿ ಪಾತ್ರೆ ತೊಳೆದ ಕೋತಿ ನೋಡಿ; ವಿಡಿಯೊ ವೈರಲ್
Published On - 1:01 pm, Tue, 26 October 21