ಕೋಲ್ಕತ್ತಾ ಮೂಲದ ಲೆಸ್ಬಿಯನ್ ದಂಪತಿಗಳು ಸೋಮವಾರ ಸಾಂಪ್ರದಾಯಿಕವಾಗಿ ದೇವಾಸ್ಥಾನದಲ್ಲಿ ವಿವಾಹವಾಗಿದ್ದು, ಇದೀಗಾ ಎಲ್ಲೆಡೆ ಭಾರೀ ವೈರಲ್ ಆಗಿದೆ. ಸುಪ್ರೀಂ ಕೋರ್ಟಿನಲ್ಲಿ ಸಲಿಂಗ ವಿವಾಹದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಕೋಲ್ಕತ್ತಾದ ಬಾಗುಯಾಟಿ ನಿವಾಸಿ ಮೌಸುಮಿ ದತ್ತಾ ಅವರು ಮೌಮಿತಾ ಮಜುಂದಾರ್ ಅವರನ್ನು ಸ್ಥಳೀಯ ದೇವಸ್ಥಾನದಲ್ಲಿ ಸೋಮವಾರ (ಮೇ 22) ಸಪ್ತಪದಿ ತುಳಿದಿದ್ದು, ಇವರ ಪೋಟೋಗಳು ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
LGBTQ ಸಮುದಾಯದ ಭರವಸೆಯ ದಾರಿದೀಪವಾಗಿ ನಾವು ವಿವಾಹವಾಗಿದ್ದೇವೆ, ವಿವಾಹ ಎಂಬುದು ಪ್ರತಿಯೊಬ್ಬರ ಜೀವನದ ಉದ್ದಕ್ಕೂ ಮುಖ್ಯವಾಗಿರುವುದರಿಂದ ಯಾವುದೇ ಒತ್ತಡಗಳಿಲ್ಲದೇ, ಸ್ವತಂತ್ರ್ಯವಾಗಿ ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ. ಪ್ರೀತಿ ಇರುವಲ್ಲಿ ತಾರತಮ್ಯ ಇರಬಾರದು. ಅವರು ಹೇಗೆ ಸಂತೋಷವಾಗಿರುತ್ತಾರೆ ಮತ್ತು ಯಾರೊಂದಿಗೆ ತಮ್ಮ ಜೀವನವನ್ನು ಕಳೆಯಲು ಬಯಸುತ್ತಾರೆ ಎಂಬುದರ ಕುರಿತು ಒಬ್ಬರು ಯೋಚಿಸಬೇಕು, ಎಂದು ಮೌಸುಮಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಆ 3 ಪದವೀಧರರು ಕಾರು ಕದ್ದರು! ಆದರೆ ಕದ್ದ ಮೇಲೆ ಗೊತ್ತಾಯ್ತು ತಮಗೆ ಡ್ರೈವಿಂಗೇ ಬರೋಲ್ಲ ಅಂತಾ! ಆ ಮೇಲೆ ಎನು ಮಾಡಿದರು ಗೊತ್ತಾ?
ಕೋಲ್ಕತ್ತಾದಲ್ಲಿ ಇಂತಹ ಮದುವೆ ಇದೇ ಮೊದಲೇನಲ್ಲಾ, 2018 ರಲ್ಲಿ ಸುಚಂದ್ರ ದಾಸ್ ಮತ್ತು ಶ್ರೀ ಮುಖರ್ಜಿ ವಿವಾಹವಾಗಿದ್ದರು. ಭಾರತದಲ್ಲಿ ಸಲಿಂಗ ವಿವಾಹವು ಇನ್ನೂ “ಕಾನೂನುಬಾಹಿರ” ವಾಗಿಯೇ ಉಳಿದಿದೆ. ಮೌಸುಮಿ ಹಾಗೂ ಮೌಮಿತಾ ದಂಪತಿಗಳು ಕೋಲ್ಕತ್ತಾದ ಅರಿಟೋಲಾ ಪ್ರದೇಶದ ಭೂತನಾಥ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ದಂಪತಿಗಳು ಪ್ರಸ್ತುತ ಉತ್ತರ ಕೋಲ್ಕತ್ತಾದ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ, ಸಮಾಜದ ಸಂಶಯದ ಕಣ್ಣುಗಳನ್ನು ಗಮನದಲ್ಲಿಟ್ಟುಕೊಂಡು ಅವರಿರುವ ಸ್ಥಳವನ್ನು ಇನ್ನೂ ಬಹಿರಂಗಪಡಿಸಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: