Viral Video: ಸಾರ್ವಜನಿಕ ಶೌಚಾಲಯದಿಂದ ಹೊರಬರುತ್ತಿರುವ ದೈತ್ಯ ಸಿಂಹವನ್ನು ನೋಡಿ ಬೆಚ್ಚಿಬಿದ್ದ ನೆಟ್ಟಿಗರು; ವಿಡಿಯೋ ವೈರಲ್​

ಸಾರ್ವಜನಿಕ ಶೌಚಾಲಯದ ಒಳಗಿದ್ದ ದೈತ್ಯ ಸಿಂಹವೊಂದು ಹೊರಬರುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕ ಶೌಚಾಲಯವನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದಿರಿ ಎಂಬ ಸಂದೇಶದೊಂದಿಗೆ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

Viral Video: ಸಾರ್ವಜನಿಕ ಶೌಚಾಲಯದಿಂದ ಹೊರಬರುತ್ತಿರುವ ದೈತ್ಯ ಸಿಂಹವನ್ನು ನೋಡಿ ಬೆಚ್ಚಿಬಿದ್ದ ನೆಟ್ಟಿಗರು; ವಿಡಿಯೋ ವೈರಲ್​
ಸಾರ್ವಜನಿಕ ಶೌಚಾಲಯದಿಂದ ಸಿಂಹವೊಂದು ಹೊರಬರುತ್ತಿರುವ ದೃಶ್ಯ
Edited By:

Updated on: Oct 04, 2021 | 11:47 AM

ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ತಮಾಷೆಯ ದೃಶ್ಯಗಳು ಹೆಚ್ಚು ಮನ ಗೆದ್ದಿದದರೂ ಸಹ ಎಚ್ಚರಿಕೆಯ ಸಂದೇಶ ಸಾರುವ ಕೆಲವು ದೃಶ್ಯಗಳು ಫುಲ್ ವೈರಲ್ ಆಗುತ್ತವೆ. ಜನರನ್ನು ಬೆಚ್ಚಿ ಬೀಳಿಸುವ ಕೆಲವು ವಿಡಿಯೋಗಳು ಕೆಲವು ಬಾರಿ ಆಶ್ಚರ್ಯವನ್ನುಂಟು ಮಾಡುತ್ತವೆ. ಅಂತಹುದೇ ಒಂದು ವಿಡಿಯೋ ಇದಾಗಿದ್ದು, ಸಾರ್ವಜನಿಕ ಶೌಚಾಲಯದ ಒಳಗಿದ್ದ ದೈತ್ಯ ಸಿಂಹವೊಂದು ಹೊರಬರುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕ ಶೌಚಾಲಯವನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದಿರಿ ಎಂಬ ಸಂದೇಶದೊಂದಿಗೆ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ವೈಲ್ಡ್​ಲೈನ್ಸ್​ ಇಕೋ ಫೌಂಡೇಶನ್ ವಿಡಿಯೋವನ್ನು ಹಂಚಿಕೊಂಡಿದೆ. ಸಾರ್ವಜನಿಕ ಶೌಚಾಲಯವನ್ನು ಬಳಸುವಾಗ ಜಾಗರೂಕರಾಗಿರಿ ಎಂಬ ಸಂದೇಶವನ್ನು ಸಾರುವ ದೃಷ್ಟಿಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ಶೌಚಾಲಯದಿಂದ ಹೊರ ಬಂದ ದೈತ್ಯ ಸಿಂಹವು ಒಮ್ಮೆಲೆ ಸುತ್ತ ಮುತ್ತಲೂ ನೋಡುತ್ತದೆ. ಬಳಿಕ ನಿಧಾನವಾಗಿ ಹೊರಬಂದು ದಾರಿಯಲ್ಲಿ ಸಾಗುತ್ತದೆ. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಸಂತಾ ನಂದ ಅವರು ಸಹ ಹಂಚಿಕೊಂಡಿದ್ದಾರೆ.

ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗಿನಿಂದ ಕೆಲವರು ಈ ಘಟನೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವರು ವಿಡಿಯೋ ನೋಡಿ ಆಶ್ವರ್ಯಗೊಂಡಿದ್ದಾರೆ. ಇನ್ನು ಕೆಲವರು ತಮಾಷೆ ಮಾಡುತ್ತಾ ಕಾಮೆಂಟ್ ವಿಭಾಗದಲ್ಲಿ ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ:

Viral Video: ಆನೆಗಳೊಂದಿಗೆ ಹುಡುಗಿಯ ಸಕತ್ ಡಾನ್ಸ್; ವೈರಲ್​ ಆಯ್ತು ವಿಡಿಯೊ

Viral Video: ಕೊಳದ ದಡದಲ್ಲಿ ಅಡ್ಡಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದ ಸಿಂಹ; ಆಮೇಲೇನಾಯ್ತು? ವಿಡಿಯೊ ನೋಡಿ