ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಕುರಿತ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಿಗೆ ದೊಡ್ಡ ವೀಕ್ಷಕ ವರ್ಗವೂ ಇದೆ. ಜನರು ಕೂಡ ವಿನೋದಕ್ಕಾಗಿ, ಸಮಯವನ್ನು ಕಳೆಯಲು ಅಂತಹ ವಿಡಿಯೋಗಳನ್ನು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಇದೇ ಕಾರಣದಿಂದ ವನ್ಯಜೀವಿಗಳ ಕುರಿತ ವಿಡಿಯೋಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಕಂಡು ಟ್ರೆಂಡ್ ಆಗುತ್ತವೆ. ಇತ್ತೀಚೆಗೆ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಒಂದು ಸಿಂಹವು ಸಿಂಹಿಣಿಯನ್ನು ಎಮ್ಮೆಗಳ ಹಿಂಡಿನ ದಾಳಿಯಿಂದ ತಪ್ಪಿಸುತ್ತದೆ. ಅಲ್ಲದೇ ಸುರಕ್ಷಿತವಾಗಿ ಸಿಂಹಿಣಿಯು ಸ್ಥಳದಿಂದ ತೆರಳಲು ಅನುವು ಮಾಡಿಕೊಡುತ್ತದೆ. ಅದಕ್ಕಾಗಿ ಸಿಂಹವು ತೆಗೆದುಕೊಂಡ ರಿಸ್ಕ್ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಕಾಡೆಮ್ಮೆಗಳು ಹಿಂಡಿನೊಂದಿಗೆ ಮೇಯುತ್ತವೆ. ಈ ಸಂದರ್ಭದಲ್ಲಿ ಸಿಂಹ ಅಥವಾ ಹುಲಿ ಮೊದಲಾದವುಗಳು ಆಕ್ರಮಣ ಮಾಡುವುದಿದ್ದರು ಬಹಳ ಎಚ್ಚರಿಕೆಯಿಂದ ದಾಳಿ ಮಾಡುತ್ತವೆ. ಕಾರಣ ಗುಂಪಿನಲ್ಲಿ ಎಮ್ಮೆಗಳು ಎಂದಿಗೂ ಶಕ್ತಿಶಾಲಿಗಳು. ಆದರೆ ಈ ವಿಡಿಯೋದಲ್ಲಿ ಅನಾರೋಗ್ಯದಿಂದ ಸಿಂಹಿಣಿಯೊಂದು ಕುಳಿತಿರುತ್ತದೆ. ಅದರ ಮೇಲೆ ಎಮ್ಮೆಗಳು ದಾಳಿಗೆ ಮುಂದಾಗುತ್ತವೆ. ಈ ವೇಳೆ ಸಿಂಹವು ಸಿಂಹಿಣಿಯನ್ನು ಮುಂದೆ ನಿಂತು ರಕ್ಷಿಸುತ್ತದೆ.
ಎಮ್ಮೆಗಳು ಸಿಂಹಕ್ಕೆ ಪ್ರತ್ಯುತ್ತರ ನೀಡಿದರೂ ಕೂಡ ಕೊನೆಗೂ ಸಿಂಹವು ಅವುಗಳನ್ನು ಹಿಮ್ಮೆಟ್ಟಿಸಿ, ಸಿಂಹಿಣಿಯನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮಾಡಲು ಅನುವು ಮಾಡಿಕೊಡುತ್ತದೆ. ಅಂತಿಮವಾಗಿ ಸಿಂಹ ಹಾಗೂ ಸಿಂಹಿಣಿ ಬೇರೊಂದು ಹಾದಿಯ ಮೂಲಕ ಎಮ್ಮೆಗಳ ನಡುವಿನಿಂದ ಪಾರಾಗುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಯುಟ್ಯೂಬ್ನಲ್ಲಿ ನೆಕ್ಸ್ಟ್ವೇ ಎಂಬ ಚಾನಲ್ ಮೂಲಕ ಹಂಚಿಕೊಳ್ಳಲಾಗಿದೆ. ‘ಗಾಯಗೊಂಡಿರುವ ಸಿಂಹಿಣಿಯನ್ನು ಸಿಂಹವು ರಕ್ಷಿಸುತ್ತಿರುವುದು’ ಎಂದು ವಿಡಿಯೋಗೆ ಶೀರ್ಷಿಕೆ ಬರೆಯಲಾಗಿದೆ.
ಇದುವರೆಗೆ ಸುಮಾರು 61 ಲಕ್ಷ ಜನರು ವಿಡಿಯೋ ವೀಕ್ಷಿಸಿದ್ದು, 1.2 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಜನರು ವಿಧವಿಧ ಕಾಮೆಂಟ್ಗಳ ಮೂಲಕ ಪ್ರತಿಕ್ರಿಯಿಸಿದ್ದು, ಸಿಂಹಗಳ ನಡುವಿನ ಪ್ರೀತಿಯನ್ನು ಹೊಗಳಿದ್ದಾರೆ. ‘ಸಿಂಹಗಳ ನಡುವಿನ ಪ್ರೀತಿಯನ್ನು ನೋಡಲು ಎರಡು ಕಣ್ಣು ಸಾಲದು’ ಎಂದು ಓರ್ವರು ಬರೆದಿದ್ದರೆ, ಮತ್ತೋರ್ವರು ‘ಸಿಂಹಿಣಿಯನ್ನು ರಕ್ಷಿಸಲು ಸಿಂಹವು ತನ್ನ ಜೀವವನ್ನೇ ಪಣಕ್ಕಿಟ್ಟಿದೆ’ ಎಂದು ಬರೆದಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?
ಇದನ್ನೂ ಓದಿ: ಒಂದೇ ಸಮನೇ ಕಣ್ಣೀರು ಸುರಿಸಿದ ಹನುಮಂತ; ಅಚ್ಚರಿ ವಿಡಿಯೋ ಇಲ್ಲಿದೆ
Published On - 4:12 pm, Sun, 17 April 22