ಮನುಷ್ಯನ ಸ್ವಾರ್ಥದಿಂದ ಕಾಡು (forest) ಸಂಪೂರ್ಣವಾಗಿ ನಾಶವಾಗಿದೆ. ಈ ಕಾಡಿನ ವಿನಾಶದಿಂದ ಅರಣ್ಯದಲ್ಲಿನ ಪ್ರಾಣಿಗಳೆಲ್ಲಾ ಆಹಾರವನ್ನರಸುತ್ತಾ ನಾಡಿನ ಕಡೆಗೆ ಬರುವುದು ಹೊಸದೇನಲ್ಲ. ಹೀಗೆ ಆಹಾರವನ್ನರಸುತ್ತಾ ಬರುವ ಈ ಪ್ರಾಣಿಗಳು ಜನರು, ಶ್ವಾನ ಮತ್ತು ದನಕರುಗಳ ಮೇಲೆ ದಾಳಿ ಮಾಡುತ್ತವೆ. ಆದರೆ ಇದೀಗ ಎದೆ ಝಲ್ ಎನಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದ್ದು, ಪುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನ ಪಕ್ಕದಲ್ಲೇ ರಾಜಾರೋಷವಾಗಿ ಸಿಂಹಿಣಿಯೊಂದು ನಡೆದುಕೊಂಡು ಹೋಗಿದೆ. ಈ ಬಗ್ಗೆ ಅರಿವಿಲ್ಲದೇ ವ್ಯಕ್ತಿಯೂ ಗಾಢ ನಿದ್ರೆಯಲ್ಲಿ ಮುಳುಗಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
@KreatelyMedia ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಪುಟ್ ಪಾತ್ ನಲ್ಲಿ ವ್ಯಕ್ತಿಯೊಬ್ಬನು ಮಲಗಿರುವುದನ್ನು ಕಾಣಬಹುದು. ಆದರೆ ಇತ್ತ ಸಿಂಹಿಣಿಯೊಂದು ಅವನ ಪಕ್ಕದಲ್ಲೇ ನಡೆದುಕೊಂಡು ಹೋಗಿದ್ದು, ಆದರೆ ಇದ್ಯಾವುದರ ಪರಿವೇ ಇಲ್ಲದೇ ಆತನು ಗಡದ್ದಾಗಿ ನಿದ್ದೆ ಮಾಡುತ್ತಿದ್ದಾನೆ.
ಇದನ್ನೂ ಓದಿ :Viral: ಕೊಳದಲ್ಲಿ ಬಿದ್ದ ಚಿಂಕಾರವನ್ನು ರಕ್ಷಿಸಿದ ಆನೆ; ಗಜರಾಜನ ಒಳ್ಳೆಯತನಕ್ಕೆ ಒಂದು ಮೆಚ್ಚುಗೆ ಇರಲಿ
What location bhai, what location?
Who is this guy?
— Kreately.in (@KreatelyMedia) June 7, 2025
ಜೂನ್ 7 ರಂದು ಶೇರ್ ಮಾಡಲಾದ ಈ ವಿಡಿಯೋ 1.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ಇದು ಎಐನಿಂದ ರಚಿಸಲಾದ ವಿಡಿಯೋ ಎಂದಿದ್ದಾರೆ. ಮತ್ತೊಬ್ಬರು, ಆ ವ್ಯಕ್ತಿಯೂ ಈ ವಿಡಿಯೋ ನೋಡಿದರೆ ಇನ್ನು ಜನ್ಮದಲ್ಲಿಯೂ ಈ ಪುಟ್ ಪಾತ್ ನಲ್ಲಿ ಮಲಗುವ ಸಾಹಸಕ್ಕೆ ಕೈ ಹಾಕಲ್ಲ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ಸ್ಥಳ ಗುಜರಾತ್ ಆಗಿರಬೇಕು, ಅಲ್ಲಿ ಇಂತಹ ದೃಶ್ಯಗಳು ಆಗಾಗ ಕಾಣಸಿಗುತ್ತದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ