ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೊ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಹೆಚ್ಚು ಇಷ್ಟವಾಗುತ್ತವೆ. ಪದೇ ಪದೇ ವಿಡಿಯೊ ನೋಡಬೇಕು ಅನ್ನುವಷ್ಟು ಮನಸ್ಸಿಗೆ ಹಿಡಿಸಿಬಿಡುತ್ತದೆ. ಇದೀಗ ವೈರಲ್ ಆದ ವಿಡಿಯೊ ಕೂಡಾ ಅಂಥದ್ದೇ! ಮುದ್ದಾಗ ಮಗುವೊಂದು ಮಂಗನ ಜೊತೆ ಜಗಳವಾಡುತ್ತಿರುವ ವಿಡಿಯೊವೊಂದು ಫುಲ್ ವೈರಲ್ ಆಗಿದೆ. ಈ ವಿಡಿಯೊವನ್ನು ಇತ್ತೀಚಿಗೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ಇದುವರೆಗೆ 1.5 ಲಕ್ಷ ಲೈಕ್ಸ್ಗಳನ್ನು ಗಳಿಸಿಕೊಂಡಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.
ಮನೆಯ ಹೊರಗೆ ಕುಳಿತಿರುವ ಮಗು ಮೊಬೈಲ್ ಫೋನ್ ಹಿಡಿದುಕೊಂಡಿದೆ. ಮೊಬೈಲ್ ನೋಡಿ ಅಲ್ಲೇ ಪಕ್ಕದಲ್ಲಿ ಕುಳಿತ ಕೋತಿಗೂ ಮೊಬೈಲ್ ಮೇಲೆ ಆಸೆಯಾಗಿದೆ. ಹಾಗಾಗಿ ಮಗುವಿನ ಕೈಯಲ್ಲಿದ್ದ ಮೊಬೈಲ್ಅನ್ನು ಕಿತ್ತುಕೊಂಡಿದೆ. ಮಗುವಿಗೆ ಸಿಟ್ಟು ಬಂದು ಕೋತಿಯ ಬಳಿ ಇದ್ದ ಮೊಬೈಲ್ಅನ್ನು ಕಸಿದುಕೊಂಡಿದೆ. ಇವರಿಬ್ಬರ ಕಿತ್ತಾಟದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಕತ್ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ ಬಳಕೆದಾರರು ನಗುವ ಎಮೋಜಿಗಳ ಜೊತೆ ವಿಡಿಯೊ ಪೋಸ್ಟ್ ಮಾಡಿದ್ದಾರೆ. ಕೆಲವರು ಕೋತಿಯ ಜೊತೆ ಆ ಮುದ್ದಾದ ಮಗುವನ್ನು ಬಿಡಬಾರದಿತ್ತು ಎಂದು ಹೇಳಿದ್ದಾರೆ. ಇನ್ನು ಕೆಲವರು ಸಾಕಿದ ಕೋತಿಯಿರಬಹುದು ಮಗುವಿನೊಂದಿಗೆ ಆಟವಾಡುತ್ತಿದೆ ಎಂದು ಹೇಳಿದ್ದಾರೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಇದೀಗ ಸಕತ್ ವೈರಲ್ ಆಗಿದೆ.
ಇದನ್ನೂ ಓದಿ:
Viral Video: ಮುದ್ದಾದ ಪುಟ್ಟ ನಾಯಿ ಮರಿಯೊಂದಿಗೆ ನೃತ್ಯ ಮಾಡಿದ ಯುವಕ! ಕ್ಯೂಟ್ ವಿಡಿಯೊ ನೀವೂ ನೋಡಿ
Viral Video: ದೈತ್ಯ ಹೆಬ್ಬಾವು ಮರ ಏರುತ್ತಿರುವ ಭಯಾನಕ ದೃಶ್ಯ ವೈರಲ್; ವಿಡಿಯೊ ನೋಡಿ