AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಫಾರಿಗೆ ಹೋದಾಗ ಸಿಂಹವನ್ನು ಕೆಣಕಿದ ವ್ಯಕ್ತಿ; ಆಮೇಲೇನಾಯ್ತು? ವಿಡಿಯೋ ನೋಡಿ

Trending: ಸಫಾರಿಗೆ ತೆರಳಿದಾಗ ಸಿಂಹವನ್ನು ಕೆಣಕುವ ವ್ಯಕ್ತಿಯ ವಿಡಿಯೋವೊಂದು ವೈರಲ್ ಆಗಿದೆ. ನಂತರ ಏನಾಯ್ತು? ವಿಡಿಯೋ ನೋಡಿ.

Viral Video: ಸಫಾರಿಗೆ ಹೋದಾಗ ಸಿಂಹವನ್ನು ಕೆಣಕಿದ ವ್ಯಕ್ತಿ; ಆಮೇಲೇನಾಯ್ತು? ವಿಡಿಯೋ ನೋಡಿ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: shivaprasad.hs

Updated on: Nov 14, 2021 | 5:00 PM

ಸಾಮಾನ್ಯವಾಗಿ ಹೊಸ ಜಾಗಗಳನ್ನು, ಹೊಸ ಜನರನ್ನು ತಿಳಿದುಕೊಳ್ಳಲು ಪ್ರವಾಸ ಹೋಗಲಾಗುತ್ತದೆ. ಹಾಗೆಯೇ ಸಾಹಸದ ದೃಷ್ಟಿಯಿಂದ, ಅಡ್ವೆಂಚರ್ ಯಾತ್ರೆಗಳನ್ನೂ ಜನರು ಕೈಗೊಳ್ಳುತ್ತಾರೆ. ಇದರ ಭಾಗವಾಗಿ ಹೆಚ್ಚಾಗಿ ಖ್ಯಾತ ವನ್ಯಜೀವಿ ತಾಣಗಳಿಗೆ ತೆರಳಿ, ಸಫಾರಿ ಮಾಡುತ್ತಾರೆ. ಅಲ್ಲಿ ನೆಲೆಸಿರುವ, ಅಪರೂಪದ ಪ್ರಾಣಿಗಳನ್ನು, ಜೀವ ವೈವಿಧ್ಯವನ್ನು ನೋಡಿ ಪುಳಕಿತಗೊಳ್ಳುತ್ತಾರೆ. ಆದರೆ ಕೆಲವರು ಇಂತಹ ಜಾಗಗಳಿಗೆ ಹೋದಾಗ ತಮ್ಮ ಪುಂಡಾಟ ತೋರಿಸುತ್ತಾರೆ. ಪ್ರಾಣಿಗಳನ್ನು ಕೆಣಕಿ ವಿಕೃತ ಸಂತೋಷ ಪಡುತ್ತಾರೆ. ತಾಳ್ಮೆಯಿಂದಿರುವ ಪ್ರಾಣಿಗಳು ಸಹನೆಯ ಹಂತ ಮೀರಿದಾಗ, ಗದರಿಸಿ ಕೀಟಲೆ ಮಾಡಿದವರ ಬಾಯ್ಮುಚ್ಚಿಸುತ್ತವೆ. ಇಂಥದ್ದೇ ಒಂದು ವಿಡಿಯೋ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಸಫಾರಿಗೆ ತೆರಳಿದ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ ಮಾಡುತ್ತಿರುತ್ತಾರೆ, ಜೊತೆಗೆ ಬೇರೆ ಬೇರೆ ಕ್ಯಾಮೆರಾಗಳೂ ಆತನ ಚಲನವಲನವನ್ನು ಸೆರೆಹಿಡಿಯುತ್ತಿರುತ್ತವೆ. ಕಿಟಕಿಯ ಪಕ್ಕದಲ್ಲೇ ಸಿಂಹ ನಿಂತಿರುತ್ತದೆ. ಅದನ್ನು ಹತ್ತಿರದಿಂದ ನೋಡಿ, ಸಂತಸಪಡುವ ಬದಲು, ಅದನ್ನು ಕೆಣಕುತ್ತಾನೆ. ಒಮ್ಮೆಯಲ್ಲದೇ, ಪುನು ಪುನ ಕೆಣಕಿದಾಗ, ಸಿಂಹ ಕುಪಿತಗೊಳ್ಳುತ್ತದೆ. ಆಮೇಲೇನಾಯ್ತು? ವಿಡಿಯೋ ನೋಡಿ.

ವಿಡಿಯೋ ಇಲ್ಲಿದೆ:

ತನ್ನನ್ನು ಕೆಣಕಿದ ವ್ಯಕ್ತಿಗೆ ಗದರಿಸಿದ ಸಿಂಹದ ನಡೆಯನ್ನು ನೆಟ್ಟಿಗರು ಸಮರ್ಥಿಸಿಕೊಂಡಿದ್ದು, ಕೆಣಕಿದಾತನನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಹಲವರು ಗೈಡ್​ಗಳು ಇಂತಹ ನಡೆಯ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕು ಮತ್ತು ಎಚ್ಚರಿಕೆ ವಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರ ಕೆಲವು ಅಭಿಪ್ರಾಯಗಳು ಇಲ್ಲಿವೆ:

Lion viral video comments

ವಿಡಿಯೋಗೆ ಬಂದಿರುವ ಪ್ರತಿಕ್ರಿಯೆಗಳು

ಕೆಲವು ನೆಟ್ಟಿಗರು ಈ ವಿಡಿಯೋಕ್ಕೆ ತಮಾಷೆಯಾಗಿಯೂ ಪ್ರತಿಕ್ರಿಯಿಸಿದ್ದು, ವ್ಯಂಗ್ಯವಾಗಿ ಪ್ರವಾಸಿಗನ ನಡೆಯನ್ನು ಟೀಕಿಸಿದ್ದಾರೆ. ಯೂಟ್ಯೂಬ್​ನಲ್ಲಿ ‘ಮಸಾಯ್ ಸೈಟಿಂಗ್ಸ್’ ಚಾನಲ್​ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ವೈರಲ್ ಆಗಿದೆ. ಇದುವರೆಗೆ ಸುಮಾರು 11 ಲಕ್ಷ ಜನರು ವಿಡಿಯೋ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ನಿಮಗೆ ಏನನ್ನಿಸಿತು?

ಇದನ್ನೂ ಓದಿ:

ಪ್ರಭಾಸ್ ಫ್ಯಾನ್​ ಆತ್ಮಹತ್ಯೆ ಪತ್ರಕ್ಕೆ ಬೆದರಿತಾ ಚಿತ್ರತಂಡ? ‘ರಾಧೆ ಶ್ಯಾಮ್​’​ ಕಡೆಯಿಂದ ಸಿಕ್ತು ಸೂಪರ್​ ಅಪ್​ಡೇಟ್​

National Defence: ಬಸವನಹುಳುವನ್ನು ನಾಚಿಸುತ್ತಿದೆ ಪ್ರಗತಿಯವೇಗ: ಗುಬ್ಬಿಯಲ್ಲಿ ಎಚ್​ಎಎಲ್ ಘಟಕ ಆರಂಭವಾಗುವುದು ಎಂದು?