ಎಲ್ಲಿಯವರೆಗೂ ಕರುಣೆ, ದಯೆ ಅಥವಾ ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣ ನಮ್ಮಲ್ಲಿರುತ್ತದೆಯೋ ಅಲ್ಲಿಯವರೆಗೂ ಈ ಜಗತ್ತು ಹೆಚ್ಚು ಸುಂದರವಾಗಿರುತ್ತದೆ. ನಮ್ಮ ಮೊಗದಲ್ಲಿರುವ ಖುಷಿಯನ್ನು ನಾವು ಇನ್ನೊಬ್ಬರೊಂದಿಗೂ ಕೂಡ ಹಂಚಿಕೊಳ್ಳಬೇಕು. ಆಗ ಮಾತ್ರ ನೆಮ್ಮದಿ ಸಾಧ್ಯ ಎನ್ನುವ ಮಾತಿದೆ ಮತ್ತು ಇಂತಹ ಕಾರ್ಯಗಳಿಂದ ನಮ್ಮ ಮನಸ್ಸಿಗೆ ಕೂಡ ಹೆಚ್ಚು ಖುಷಿ ಸಿಗುತ್ತದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ರಸ್ತೆಗಳಲ್ಲಿ ಆಭರಣಗಳನ್ನು ಮಾರಾಟ ಮಾಡುವ ಇಬ್ಬರು ಪುಟಾಣಿ ಮಕ್ಕಳಿಗೆ ಚಾಕಲೇಟ್ (chocolate) ನೀಡಿದ್ದು, ಆ ಮುಗ್ದ ಮನಸ್ಸುಗಳ ಮೊಗದಲ್ಲಿ ಮಂದಹಾಸ ಉಂಟುಮಾಡಿದೆ. ಸದ್ಯ ಈ ದೃಶ್ಯವನ್ನು ಕಂಡ ನೆಟ್ಟಿಗರು ಕೂಡ ಮೆಚ್ಚಿಕೊಂಡಿದ್ದಾರೆ.
ಚೀಸ್ ಅಡಿಕ್ಟ್ (the Cheese Addict) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಇಬ್ಬರು ಚಿಕ್ಕ ಹುಡುಗರು ತಮ್ಮ ಕುತ್ತಿಗೆಗೆ ನೇತಾಡುವ ಪ್ಲಾಸ್ಟಿಕ್ ಬುಟ್ಟಿಯನ್ನು ಹಾಕಿಕೊಂಡು ನಿತ್ಯ ಬಳಸುವ ಕೃತಕ ಆಭರಣಗಳ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ಇದನ್ನು ಕಂಡ ವ್ಯಕ್ತಿಯೊಬ್ಬರು ಇಬ್ಬರಿಗೂ ಚಾಕಲೇಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಸ್ವೀಕರಿಸಿದ ನಂತರ ಆ ಮಕ್ಕಳ ಮುಖದಲ್ಲಿ ಅರಳಿದ ನಗು ಸದ್ಯ ಎಲ್ಲರನ್ನು ಆಕರ್ಷಿಸಿದೆ.
ಈ ರೀತಿಯ ಅನುಭವವನ್ನು ನಾನು ಎಂದಿಗೂ ಪಡೆದಿಲ್ಲ. ಹೀಗೆ ಉತ್ತಮ ಕಾರ್ಯಗಳನ್ನು ಮಾಡಲು ನಾನು ನಿಮಗೂ ಈ ಮೂಲಕ ಕೇಳುತ್ತಿದ್ದೇನೆ. ಚಿಕ್ಕದಾಗಿರಬಹುದು ಅಥವಾ ದೊಡ್ಡ ಮಟ್ಟದಲ್ಲಾಗಿರಬಹುದು ಆದಷ್ಟು ಇತರರಿಗೆ ನೆರವಾಗಿ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ವಿಡಿಯೋ ವೈರಲ್ ಆಗಿದ್ದು, 8.3 ಮಿಲಿಯನ್ ವಿವ್ಸ್ ಪಡೆದಿದೆ. ನೆಟ್ಟಿಗರು ಕಮೆಂಟ್ ಮೂಲಕ ಶ್ಲಾಘಿಸಿದ್ದಾರೆ. ಅವರ ಅಮೂಲ್ಯವಾದ ನಗುವನ್ನು ನೋಡಿದ ನಂತರ, ಕಣ್ಣುಗಳಿಂದ ಕಣ್ಣೀರು ಹರಿಯುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
Samantha: ಡಿವೋರ್ಸ್ ಬಳಿಕ ಸಮಂತಾ ಗುಡ್ ನ್ಯೂಸ್; ಇಂಗ್ಲಿಷ್ ಸಿನಿಮಾ ನಿರ್ದೇಶಕನನ್ನು ತಬ್ಬಿಕೊಂಡ ಫೋಟೋ ವೈರಲ್
Viral Video: ಹೇರ್ ಡ್ರೈಯರ್ ಬದಲು ಕುಕ್ಕರ್ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!