ಹೊಸ ಸ್ಕೂಟಿ ನಂಬರ್ ಪ್ಲೇಟ್​ನಲ್ಲಿ ಸೆಕ್ಸ್ ಪದ ಬಳಕೆ; ಅಚ್ಚರಿಗೊಂಡ ಯುವತಿ ಮಾಡಿದ್ದೇನು ಗೊತ್ತಾ?

ನಿಗದಿಪಡಿಸಿದ ಸಂಖ್ಯೆಯನ್ನು ಬದಲಾಯಿಸಲು ಯಾವುದೇ ನಿಬಂಧನೆ ಇಲ್ಲ. ಅದರಲ್ಲೂ ಒಮ್ಮೆ ವಾಹನದ ಸಂಖ್ಯೆಯನ್ನು ನಿಗದಿಪಡಿಸಿದ ನಂತರ, ಅದನ್ನು ಬದಲಾಯಿಸಲು ಯಾವುದೇ ಅವಕಾಶವಿಲ್ಲ, ಏಕೆಂದರೆ ಇಡೀ ಪ್ರಕ್ರಿಯೆಯು ಇದೇ ನಿಯಮಾನುಸಾರವಾಗಿ ನಡೆಯುತ್ತದೆ ಎಂದು ದೆಹಲಿ ಸಾರಿಗೆ ಆಯುಕ್ತ ಕೆ.ಕೆ. ದಹಿಯಾ ಆಜ್ ತಾ ತಿಳಿಸಿದ್ದಾರೆ.

ಹೊಸ ಸ್ಕೂಟಿ ನಂಬರ್ ಪ್ಲೇಟ್​ನಲ್ಲಿ ಸೆಕ್ಸ್ ಪದ ಬಳಕೆ; ಅಚ್ಚರಿಗೊಂಡ ಯುವತಿ ಮಾಡಿದ್ದೇನು ಗೊತ್ತಾ?
ಪ್ರಾತಿನಿಧಿಕ ಚಿತ್ರ

ದೆಹಲಿ: ಇತ್ತೀಚೆಗೆ ಹೊಸ ಸ್ಕೂಟಿ ಖರೀದಿಸಿದ್ದ ದೆಹಲಿ ಯುವತಿಯೊಬ್ಬಳು ತನ್ನ ದ್ವಿಚಕ್ರ ವಾಹನಕ್ಕೆ ಅಸಾಮಾನ್ಯ ನೋಂದಣಿ ಸಂಖ್ಯೆಯನ್ನು ಪಡೆದಿದ್ದರಿಂದ ಮುಜುಗರಕ್ಕೊಳಗಾಗಿದ್ದಾಳೆ. ದೆಹಲಿಯ ಪ್ರಾದೇಶಿಕ ಸಾರಿಗೆ ಕಚೇರಿ (RTO) ಸ್ಕೂಟಿಗೆ DL 3 SEX **** ನೋಂದಣಿ ಸಂಖ್ಯೆಯನ್ನು ನಿಗದಿಪಡಿಸಿದೆ. ಇದು ಈ ಯುವತಿಯನ್ನು ಮುಜುಗರಕ್ಕೀಡು ಮಾಡಿದೆ. ನೋಂದಣಿ ಫಲಕವನ್ನು ಪಡೆದು ಮೂರು ವಾರಗಳು ಕಳೆದಿವೆ. ಆದರೆ ಯುವತಿ ಒಮ್ಮೆಯೂ ದ್ವಿಚಕ್ರ ವಾಹನವನ್ನು ಹೊರಗೆ ತೆಗೆದುಕೊಂಡು ಹೋಗಿಲ್ಲ. ಏಕೆಂದರೆ ಅದರಲ್ಲಿ ಸೆಕ್ಸ್ ಎಂಬ ಪದವಿದೆ.

ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿನಿಯಾಗಿರುವ ಯುವತಿ ಜನಕಪುರಿಯಿಂದ ನೋಯ್ಡಾಕ್ಕೆ ಮೆಟ್ರೋ ಮೂಲಕ ಪ್ರಯಾಣಿಸುತ್ತಿದ್ದಳು. ಕಿಕ್ಕಿರಿದ ಮೆಟ್ರೋದಲ್ಲಿ ದೂರ ಪ್ರಯಾಣ ಕಷ್ಟವಾದ ಕಾರಣ ತನಗೆ ಸ್ಕೂಟಿ ಕೊಡಿಸಿ ಎಂದು ತನ್ನ ತಂದೆಯನ್ನು ಕೇಳಿದ್ದಳು. ನಿರಂತರವಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಆಕೆಯ ತಂದೆಗೆ ವಿನಂತಿಸಿದ ನಂತರ ಅವರು ಅಂತಿಮವಾಗಿ ಇದೇ ವರ್ಷದ ದೀಪಾವಳಿಯಂದು ಆಕೆಗೆ ಉಡುಗೊರೆಯಾಗಿ ತಂದೆ ಸ್ಕೂಟಿ ಕೊಡಿಸಿದ್ದಾರೆ. ಅದರಂತೆ ಸ್ಕೂಟಿಗೆ ನೋಂದಣಿ ಸಂಖ್ಯೆ ಕೂಡ ಸಿಕ್ಕಿದೆ. ಆದರೆ ಸ್ಕೂಟಿ ನಂಬರ್ ಪ್ಲೇಟ್‌ನಲ್ಲಿ ಸೆಕ್ಸ್ ಪದವನ್ನು ಕಂಡು ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ.

ನನ್ನ ನೆರೆಹೊರೆಯವರು ನಾಚಿಕೆಯಿಲ್ಲದವಳು ಎಂದು ನನಗೆ ಕರೆಯುತ್ತಿದ್ದಾರೆ. ನನ್ನ ಸುತ್ತಲಿನ ಎಲ್ಲರೂ ನನ್ನನ್ನು ಬೆದರಿಸುತ್ತಿದ್ದಾರೆ ಎಂದು ಯುವತಿ ಬೇಸರ ವ್ಯಕ್ತಪಡಿಸಿದ್ದಾಳೆ. ಮಗಳ ಮೇಲಿನ ಅಪಹಾಸ್ಯದ ನಂತರ ಆಕೆಯ ತಂದೆ ದ್ವಿಚಕ್ರ ವಾಹನ ಮಾರಾಟಗಾರನನ್ನು ನಂಬರ್ ಬದಲಾಯಿಸಲು ವಿನಂತಿಸಿದರು, ಆದರೆ ಮಾರಾಟಗಾರರು ಈ ವಿನಂತಿಯನ್ನು ನಿರಾಕರಿಸಿದರು ಹೀಗಾಗಿ ಸ್ಕೂಟಿ ಬಳಸದೆ ಮನೆಯಲ್ಲೇ ನಿಲ್ಲಿಸುವಂತಾಗಿದೆ.

ನಿಗದಿಪಡಿಸಿದ ಸಂಖ್ಯೆಯನ್ನು ಬದಲಾಯಿಸಲು ಯಾವುದೇ ನಿಬಂಧನೆ ಇಲ್ಲ. ಅದರಲ್ಲೂ ಒಮ್ಮೆ ವಾಹನದ ಸಂಖ್ಯೆಯನ್ನು ನಿಗದಿಪಡಿಸಿದ ನಂತರ, ಅದನ್ನು ಬದಲಾಯಿಸಲು ಯಾವುದೇ ಅವಕಾಶವಿಲ್ಲ, ಏಕೆಂದರೆ ಇಡೀ ಪ್ರಕ್ರಿಯೆಯು ಇದೇ ನಿಯಮಾನುಸಾರವಾಗಿ ನಡೆಯುತ್ತದೆ ಎಂದು ದೆಹಲಿ ಸಾರಿಗೆ ಆಯುಕ್ತ ಕೆ.ಕೆ. ದಹಿಯಾ ಆಜ್ ತಾ ತಿಳಿಸಿದ್ದಾರೆ.

ದ್ವಿಚಕ್ರ ವಾಹನಗಳನ್ನು ದೆಹಲಿಯಲ್ಲಿ ‘ಎಸ್’ ಅಕ್ಷರದಿಂದ ಸೂಚಿಸಲಾಗುತ್ತದೆ ಮತ್ತು ಪ್ರಸ್ತುತ ದ್ವಿಚಕ್ರ ವಾಹನಗಳ ನೋಂದಣಿಗಾಗಿ ‘ಇ ಮತ್ತು ‘ಎಕ್ಸ್​’ ಎಂಬ ಎರಡು ಅಕ್ಷರಗಳು ಚಲಾವಣೆಯಲ್ಲಿವೆ. ಹೀಗಾಗಿ ಹೊಸ ಸ್ಕೂಟಿಯ ನಂಬರ್ ಪ್ಲೇಟ್‌ನಲ್ಲಿ ಅನಿವಾರ್ಯವಾಗಿ ಸೆಕ್ಸ್ ಪದ ಬಳಕೆಯಲ್ಲಿದೆ.

ಇದನ್ನೂ ಓದಿ: ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್​ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್​

Viral Video: ಹೇರ್ ಡ್ರೈಯರ್ ಬದಲು ಕುಕ್ಕರ್​ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!

Click on your DTH Provider to Add TV9 Kannada