ಕೆಲವು ಹಾಡುಗಳು ಮನಸ್ಸಿಗೆ ತುಂಬಾ ಇಷ್ಟವಾಗಿ ಬಿಡುತ್ತವೆ. ಇಷ್ಟವಾದ ಹಾಡನ್ನು ಪದೇ ಪದೇ ಗುನುಗುತ್ತಿರುತ್ತೇವೆ. ಅವುಗಳಲ್ಲಿ ಇತ್ತೀಚೆಗೆ ಸದ್ದು ಮಾಡಿದ ಮನಿಕೆ ಮಗೆ ಹಿತೆ ಹಾಡು ಕೂಡಾ ಒಂದು. ಶ್ರೀಲಂಕಾದ ಗಾಯಕಿ ಯೋಹಾನಿ ಡಿ ಸಿಲ್ವಾ ಹಾಡಿದ ಮನಿಕೆ ಮಗೆ ಹಿತೆ ಹಾಡು ಸಕತ್ ಸೌಂಡ್ ಮಾಡಿದೆ. ಕೆಲವರು ಹಾಡು ಹೇಳಿ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಹಾಡಿಗೆ ನೃತ್ಯ (Dance) ಮಾಡುತ್ತಾ ವಿಡಿಯೊ ಹರಿಬಿಡುತ್ತಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರೂ ಸಹ ಈ ಹಾಡನ್ನು ಇಷ್ಟ ಪಡುತ್ತಿದ್ದಾರೆ ಅನ್ನೋದಕ್ಕೆ ಸೋಷಿಯಲ್ ಮೀಡಿಯಾದಲ್ಲಿ (Social media) ಹರಿದಾಡುತ್ತಿರುವ ವಿಡಿಯೊಗಳೇ ಸಾಕ್ಷಿ. ಈ ಹಿಂದೆ ವಯಸ್ಕರೋರ್ವರು ಮನಿಕೆ ಮಗೆ ಹಿತೆ ಹಾಡನ್ನು (Manike Mage Hithe Song) ಹಾಡಲು ಪ್ರಯತ್ನಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿತ್ತು, ಇದೀಗ ಪುಟ್ಟ ಬಾಲಕಿಯು ನೃತ್ಯ ಮಾಡುತ್ತಿರುವ ವಿಡಿಯೊ ಫುಲ್ ವೈರಲ್ (Viral Video) ಆಗಿದೆ.
ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. 8 ವರ್ಷದ ಬಾಲಕಿ ಮನಿಕೆ ಮಗೆ ಹಿತೆ ಹಾಡನ್ನು ಆನಂದಿಸುತ್ತಾ ಸುಂದರವಾಗಿ ನೃತ್ಯ ಮಾಡುತ್ತಿದ್ದಾಳೆ. ಮನಿಕೆ ಮಗೆ ಹಿತೆ ಹಾಡಿನ ಸಾಹಿತ್ಯವನ್ನು ಗುನುಗುತ್ತಾ ಸಕತ್ ಸ್ಟೆಪ್ ಹಾಕಿದ್ದಾಳೆ. ನೆಟ್ಟಿಗರು ಬಾಲಕಿಯ ನೃತ್ಯವನ್ನು ಇಷ್ಪಟ್ಟಿದ್ದು ಕಾಮೆಂಟ್ ವಿಭಾಗದಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಪುಟ್ಟ ಬಾಲಕಿ ಸುಂದರವಾಗಿ ನೃತ್ಯ ಮಾಡುತ್ತಾಳೆ ಎಂದು ತಿಳಿಸಿದ್ದಾರೆ. ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.
ನೆಟ್ಟಿಗರು ಹೃದಯ ಮತ್ತು ಪ್ರೀತಿಯ ಎಮೋಜಿಗಳನ್ನು ಕಳುಹಿಸುವ ಮೂಲಕ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ವಾವ್! ರಾಕ್ಸ್ಟಾರ್ ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ. ಪುಟ್ಟ ಬಾಲಕಿಯ ಅದ್ಭುತ ಪ್ರತಿಭೆ ಎಂದು ಮತ್ತೋರ್ವರು ಹೇಳಿದ್ದಾರೆ. ಹೀಗೆ ನಾನಾ ರೀತಿಯ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ಈ ಹಿಂದೆ ಕೂಡಾ ಅನೇಕರು ಮನಿಕೆ ಮಗೆ ಹಿತೆ ಹಾಡಿಗೆ ನೃತ್ಯ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹಲವರು ಹಾಡು ಹೇಳುವ ಮೂಲಕ ವಿಡಿಯೊ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ:
‘ಮನಿಕೆ ಮಗೆ ಹಿತೆ’ ರೀಲ್ಸ್ ಮಾಡುವಂತೆ ದುಂಬಾಲು ಬಿದ್ದ ಅಭಿಮಾನಿಗಳ ಆಸೆ ನೆರವೇರಿಸಿದ ನಟಿ; ವಿಡಿಯೋ ನೋಡಿ
Viral Video: ಘಟಂ ತಾಳವಾದ್ಯದ ಜೊತೆ ಮನಿಕೆ ಮಗೆ ಹಿತೆ ಹಾಡು; ವೈರಲ್ ಆಯ್ತು ವಿಡಿಯೊ
Published On - 9:42 am, Wed, 24 November 21