
ಪುಟಾಣಿಗಳು (Little kids) ಏನು ಮಾಡಿದ್ರು ಕೂಡ ಚೆಂದನೇ. ಈ ಪುಟಾಣಿಗಳು ಗೊತ್ತಿಲ್ಲದೇ ಮಾಡುವ ಮುಗ್ಧ ಕೆಲಸಗಳನ್ನು ಕಂಡಾಗ ಅಪ್ಪಿ ಮುದ್ದಾಡಬೇಕು ಎನಿಸುತ್ತದೆ. ಅಂಗಡಿ ನುಗ್ಗಿದ ಕಳ್ಳನು (thief) ಕೂಡ ಪುಟಾಣಿಯನ್ನು ಅಪ್ಪಿ ಮುದ್ದಾಡಿದ್ದಾನೆ. ಕಳ್ಳರು ಈ ರೀತಿನೂ ಇರ್ತಾರಾ ಎಂದೆನಿಸಬಹುದು. ಇದಕ್ಕೆ ಕಾರಣವಾಗಿದ್ದು ಈ ಪುಟಾಣಿಯ ಮುಗ್ಧತೆ. ಕಳ್ಳನೊಬ್ಬನು ಅಂಗಡಿಗೆ ನುಗ್ಗುತ್ತಿದ್ದಂತೆ ಪುಟಾಣಿಯೂ ತನ್ನ ತಂದೆಯೊಂದಿಗೆ ಕುಳಿತು ಆತ ಏನು ಮಾಡುತ್ತಿರುವುದನ್ನು ನೋಡಿದ್ದಾಳೆ. ಈ ಪುಟಾಣಿಯ ತಂದೆ ಅಸಹಾಯಕ ಸ್ಥಿತಿಯಲ್ಲಿದ್ದು ತನ್ನ ಕೈಯಲ್ಲಿದ್ದ ಹಣವೆಲ್ಲವನ್ನೂ ಕಳ್ಳನ ಮುಂದೆ ಇಟ್ಟಿದ್ದಾನೆ. ಇದನ್ನೇ ನೋಡುತ್ತಿದ್ದ ಪುಟಾಣಿ ಮಾಡಿದ ಕೆಲಸದಿಂದ ದೋಚಿದ್ದ ಹಣವನ್ನು ಬಿಟ್ಟು ವಾಪಸ್ಸು ಹೋಗಲು ಮುಂದಾಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಇದಕ್ಕೆ ಉತ್ತರ ಇಲ್ಲಿದೆ.
Abbottabad ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತನ್ನ ತಂದೆಯೊಂದಿಗೆ ಅಂಗಡಿಯ ಕುರ್ಚಿಯನ್ನು ಕುಳಿತುಕೊಂಡಿದ್ದಾಳೆ. ಅಂಗಡಿಯೊಳಗೆ ಮಾಸ್ಕ್ ಹಾಕಿಕೊಂಡು ಕಳ್ಳನೊಬ್ಬನು ನುಗ್ಗುತ್ತಾನೆ. ಡ್ರಾಯರ್‌ನಲ್ಲಿದ್ದ ದುಡ್ಡು ಕೊಡುವಂತೆ ಹೊಡೆದು ವ್ಯಕ್ತಿಗೆ ಬೆದರಿಕೆ ಹಾಕುತ್ತಾನೆ. ಈ ವೇಳೆಯಲ್ಲಿ ಅಂಗಡಿ ಮಾಲಿಕ ಡ್ರಾಯರ್‌ನಲ್ಲಿದ್ದ ದುಡ್ಡನ್ನೆಲ್ಲಾ ಕೊಡುತ್ತಾನೆ. ತನ್ನ ತಂದೆಯನ್ನು ಹೊಡೆಯುವುದನ್ನು ಪುಟಾಣಿಯೂ ಗಮನಿಸಿದ್ದಾಳೆ. ಅಪ್ಪನು ಕಳ್ಳನಿಗೆ ಕೊಡುತ್ತಿದ್ದಂತೆ ತಾನು ತನ್ನ ಕೈಯಲ್ಲಿದ್ದ ಲಾಲಿಪಾಪ್ ಕಳ್ಳನಿಗೆ ನೀಡುತ್ತಾಳೆ. ಈ ಪುಟಾಣಿ ಮಾಡಿದ ಕೆಲಸ ನೋಡಿದ ಕಳ್ಳನು ಮನಸ್ಸೇ ಬದಲಾಗಿದೆ. ಅಂಗಡಿ ಮಾಲೀಕನಿಂದ ಕಸಿದುಕೊಂಡ ದುಡ್ಡನ್ನು ಟೇಬಲ್ ಮೇಲಿಟ್ಟು ಈ ಪುಟಾಣಿಗೆ ಮುತ್ತು ಕೊಟ್ಟು ಕಳ್ಳನು ಅಲ್ಲಿಂದ ಹೋಗುವುದನ್ನು ನೋಡಬಹುದು.
ಇದನ್ನೂ ಓದಿ:ಈವಾಗ್ಲೇ ಹಿಂಗೇ, ಮುಂದೆ ಹೆಂಗೋ; ನಡು ರಸ್ತೆಯಲ್ಲೇ ಜಗಳಕ್ಕಿಳಿದ ಪುಟಾಣಿಗಳು
ಈ ವಿಡಿಯೋ ಮೂವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮಗಳು ಇದ್ದರೆ ತಂದೆಗೆ ಧೈರ್ಯ ಎಂದಿದ್ದಾರೆ. ಇನ್ನೊಬ್ಬರು, ಮಕ್ಕಳ ಮುಗ್ಧತೆ ತುಂಬಿದ ಕೆಲಸವೇ ಹಾಗೆ, ಬೇಗನೆ ಎಲ್ಲರನ್ನು ಸೆಳೆದು ಬಿಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಕಳ್ಳನು ಇನ್ನೆಂದು ಕಳ್ಳತನ ಮಾಡಲ್ಲ ಕಾಣಿಸುತ್ತೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ