Viral: ‘ಅಯ್ಯೋ, ಮಳೆ ಇದೆ ಬಾ ಇಲ್ಲಿ ಕೊಡೆಯೊಳಗೆ’

|

Updated on: Aug 12, 2022 | 10:31 AM

Dog Love : ಮಳೆ ಬಂದರೆ ಮೊದಲು ಎಲ್ಲಿ ನಿಲ್ಲಲು ಆಶ್ರಯ ಸಿಕ್ಕೀತು ಎಂದು ಜಾಗ ಹುಡುಕುತ್ತೇವೆ, ಅದಕ್ಕೆ ನಾವು ‘ದೊಡ್ಡವರು’. ಆದರೆ ಮಕ್ಕಳು? ಈ ವಿಡಿಯೋ ನೋಡಿ.

Viral: ‘ಅಯ್ಯೋ, ಮಳೆ ಇದೆ ಬಾ ಇಲ್ಲಿ ಕೊಡೆಯೊಳಗೆ’
‘ಶೀತ ಆಗತ್ತೆ ನೆನೀಬಾರದು ಬಾ ಇಲ್ಲಿ‘
Follow us on

Viral : ಮಕ್ಕಳ ಮನಸೇ ಹಾಗೆ. ಪ್ರೀತಿ, ಕಾಳಜಿ, ಅಂತಃಕರಣ, ಬೆರಗು, ಮುಗ್ಧತೆ ಬಿಟ್ಟರೆ ಬೇರೇನೂ ಅಲ್ಲಿನ್ನೂ ಮೊಳೆತಿರುವುದಿಲ್ಲ. ತಮಗನಿಸಿದ್ದನ್ನು ಮಾಡಲು ಯಾರ ಅನುಮತಿಯನ್ನೂ ಕೇಳುವುದಿಲ್ಲ. ಈಗಿಲ್ಲಿ ನೋಡಿ ರಾತ್ರಿ ಮಳೆ ಸುರಿಯುತ್ತಿದೆ. ರೇನ್​ಕೋಟ್ ಹಾಕಿಕೊಂಡ ಈ ಪುಟ್ಟ ಹುಡುಗಿಯೊಬ್ಬಳು ನಾಯಿಯೊಂದಕ್ಕೆ ತನ್ನ ಕೊಡೆ ಹಿಡಿದು ಮಳೆಯಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದಾಳೆ. ಹೃದಯಸ್ಪರ್ಶಿಯಾದ ಈ ವಿಡಿಯೋ 6.2 ಮಿಲಿಯನ್​ ನೆಟ್ಟಿಗರ ಮನಸ್ಸನ್ನು ಕದ್ದಿದೆ.  4.3ಸಾವಿರ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡವರು ತನ್ಸು ಎಗೆನ್​ ಎಂಬ ಟ್ವಿಟರ್ ಖಾತೆದಾರರು. ಆಗಾಗ ಇವರು ಇಂಥ ಅಪರೂಪದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವುದನ್ನು ಗಮನಿಸಿರಬಹುದು.

‘ಹಣದ ವ್ಯಾಮೋಹ, ದುರಾಸೆ, ದ್ವೇಷ, ಸಾಮಾಜಿಕ ಕಟ್ಟಳೆಗಳು, ಗಡಿಗಳು ಇಲ್ಲದಲ್ಲಿ ಹೇಗೆ ಪ್ರೀತಿ ಮತ್ತು ಸ್ವಾತಂತ್ರ್ಯ ಅರಳುತ್ತದೆ ನೋಡಿ, ಜಗತ್ತು ಇರಬೇಕಾದದ್ದು ಹೀಗೆ’ ಆನಂದ ಎನ್ನುವ ಟ್ವಿಟರ್ ಖಾತೆದಾರರು ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದೈನಂದಿನ ಜಂಜಡಗಳಲ್ಲಿ ಮತ್ತು ಸ್ವಕೇಂದ್ರಿತ ಮನಸ್ಥಿತಿಗಳಲ್ಲಿ ಕಳೆದುಹೋಗುವವರನ್ನು ಹಿಡಿದು ನಿಲ್ಲಿಸಿ ಕ್ಷಣಮಾತ್ರವಾದರೂ ಪ್ರೀತಿ, ಮಾನವೀಯತೆಯ ಬಗ್ಗೆ ಯೋಚಿಸುವಂತೆ ಮಾಡುತ್ತವೆ ಮಕ್ಕಳ, ಪ್ರಾಣಿಗಳ ಇಂಥ ವಿಡಿಯೋಗಳು.

ಮತ್ತಷ್ಟು ಇಂಥ ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ