ವ್ಹಾರೆ ವ್ಹಾ ಏನ್​​​ ಬರಹ, ‘ಪ್ರೇಮವೇ ಜೀವನ,ಆದ್ರೆ ಎಲ್ಲಾ ಪ್ರೇಮಿಯು ಜೀವನ ಸಂಗಾತಿಯಲ್ಲ’

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 27, 2024 | 4:15 PM

ನೀವು ಟ್ರಾಫಿಕ್​​ ನಡುವೆ ಸಿಲುಕಿ ಕಾದು ಕಾದು ಮುಖ ಸಪ್ಪಗಾಗಿರುವಾಗ ಆಟೋಗಳ ಹಿಂದೆ ಬರೆದಿರುವ ಸಾಲುಗಳು ನಿಮ್ಮ ಮುಖದಲ್ಲಿ ನಗು ಮೂಡಿಸಿರುವ ಅದೆಷ್ಟೋ ನೆನಪುಗಳು ನಿಮ್ಮೊಂದಿರಬಹುದು. ಇದೀಗ ಇಂತದ್ದೇ ಒಂದು ಸಾಲು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​​ ಆಗಿದೆ.

ವ್ಹಾರೆ ವ್ಹಾ ಏನ್​​​ ಬರಹ, ಪ್ರೇಮವೇ ಜೀವನ,ಆದ್ರೆ ಎಲ್ಲಾ ಪ್ರೇಮಿಯು ಜೀವನ ಸಂಗಾತಿಯಲ್ಲ
'love is life but lover is not wife'
Image Credit source: Twitter
Follow us on

ಶಂಕರ್‌ನಾಗ್ ಅವರ ‘ಆಟೋರಾಜ’ ಸಿನಿಮಾದ ನಂತರ ಬಹುತೇಕ ಆಟೋ ಚಾಲಕರಿಗೆ ತಮ್ಮ ಕೆಲಸದ ಬಗ್ಗೆ ಗೌರವ ಆತ್ಮವಿಶ್ವಾಸ ಹೆಚ್ಚಿತು ಎಂದು ಹೇಳಿದರೆ ತಪ್ಪಾಗಲಾರದು. ಜೊತೆಗೆ ಆಟೋ ರಿಕ್ಷಾ ಹಿಂದೆ ಬರೆಯಲ್ಪಟ್ಟ ಬಹುತೇಕ ಸಾಲುಗಳು ವಿಶೇಷವಾಗಿ ಪ್ರೇಮ ಬರಹಗಳು ಪ್ರತಿನಿತ್ಯ ಗಮನ ಸೆಳೆಯುತ್ತಿರುತ್ತದೆ. ತಮ್ಮ ಆಟೋವನ್ನು ಅಂಬಾರಿಯಂತೆ ಪೂಜಿಸುವ ಆಟೋ ಚಾಲಕರು ತಮ್ಮ ಅಭಿರುಚಿಗೆ ತಕ್ಕಂತೆ ಕ್ರಿಯಾತ್ಮಕ ಸಾಲುಗಳನ್ನು ರಿಕ್ಷಾ ಹಿಂದೆ ಬರೆಸಿರುತ್ತಾರೆ. ನೀವು ಟ್ರಾಫಿಕ್​​ ನಡುವೆ ಸಿಲುಕಿ ಕಾದು ಕಾದು ಮುಖ ಸಪ್ಪಗಾಗಿರುವಾಗ ಆಟೋಗಳ ಹಿಂದೆ ಬರೆದಿರುವ ಸಾಲುಗಳು ನಿಮ್ಮ ಮುಖದಲ್ಲಿ ನಗು ಮೂಡಿಸಿರುವ ಅದೆಷ್ಟೋ ನೆನಪುಗಳು ನಿಮ್ಮೊಂದಿರಬಹುದು. ಇದೀಗ ಇಂತದ್ದೇ ಒಂದು ಸಾಲು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​​ ಆಗಿದೆ.

ಬೆಂಗಳೂರಿನ ಆಟೋ ರಿಕ್ಷಾವೊಂದರ ಹಿಂದೆ ಬರೆದಿರುವ ಸಾಲೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ. ‘Love is life but lover is not wife’(ಪ್ರೀತಿಯೇ ಜೀವನ ಆದರೆ ಪ್ರೇಮಿ ಹೆಂಡತಿಯಲ್ಲ) ಎಂದು ರಿಕ್ಷಾ ಒಂದರ ಹಿಂದೆ ಬರೆದಿರುವ ಸಾಲುಗಳು ಸಾಕಷ್ಟು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ಕಂಡು ಬೆಕ್ಕಿನ ರಿಯಾಕ್ಷನ್​​​​ ಹೇಗಿತ್ತು ನೋಡಿ

ರಿಷಿಕಾ ಗುಪ್ತಾ ಎಂಬ ಟ್ವಿಟರ್​​ ಬಳಕೆದಾರರು ಈ ಫೋಟೋ ಹಂಚಿಕೊಂಡಿದ್ದು, ಎಲ್ಲೆಡೆ ಭಾರೀ ವೈರಲ್​​ ಆಗಿದೆ. ಸಾಕಷ್ಟು ನೆಟ್ಟಿಗರು ನೆಟ್ಟಿಗರು ಹಾಸ್ಯಮಯವಾಗಿ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ರಿಕ್ಷಾ ಚಾಲಕನಿಗಿರುವ ಆ ವಿಶ್ವಾಸ ನನಗೆ ಬೇಕು’ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ