ಮೂರು ವರ್ಷದ ಪ್ರೀತಿಗೆ ಇಸ್ಲಾಂ ಧರ್ಮ ತ್ಯಜಿಸಿ ಹಿಂದೂ ಧರ್ಮ ಸೇರಿದ ಯುವಕ

ಪ್ರೀತಿ ಕುರುಡು ಪ್ರೀತಿಗೆ ಕಣ್ಣಿಲ್ಲ ಎನ್ನುವ ಮಾತಿದೆ. ಹೀಗಾಗಿ ಈಗಿನ ಕಾಲದ ಯುವಕ ಯುವತಿಯರು ಪ್ರೀತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿದ್ದಾರೆ. ಇಲ್ಲೊಬ್ಬ ಯುವಕನು ತನ್ನ ಪ್ರೇಮಿಗಾಗಿ ಇಸ್ಲಾಂ ಧರ್ಮದಿಂದ ಸನಾತನ ಧರ್ಮಕ್ಕೆ ಮತಾಂತರಗೊಂಡು ತದನಂತರದಲ್ಲಿ ಆಕೆಯ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಹಾಗಾದ್ರೆ ಈ ಘಟನೆಯೂ ನಡೆದದ್ದು ಎಲ್ಲಿ? ಏನಿದು ಪ್ರಕರಣ ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೂರು ವರ್ಷದ ಪ್ರೀತಿಗೆ ಇಸ್ಲಾಂ ಧರ್ಮ ತ್ಯಜಿಸಿ ಹಿಂದೂ ಧರ್ಮ ಸೇರಿದ ಯುವಕ
Sanju And Srusti Marriage
Image Credit source: Twitter

Updated on: May 06, 2025 | 11:22 AM

ಮಧ್ಯಪ್ರದೇಶ, ಮೇ 6: ಪ್ರೀತಿ (love) ಗೆ ಜಾತಿ, ಧರ್ಮ ಭಾಷೆ ಬೇಕಿಲ್ಲ, ಎರಡು ಪರಿಶುದ್ಧ ಮನಸ್ಸು ಬೆರೆತರೆ ಸಾಕು. ಆದರೆ ಈಗಿನ ಕಾಲದಲ್ಲಿ ಪ್ರಾಮಾಣಿಕವಾಗಿ ಪ್ರೀತಿ ಮಾಡುವವರುಸಿಗುವುದೇ ಕಡಿಮೆ. ಕೆಲವರು ಪ್ರೀತಿಯ ಬಲೆ ಬೀಸಿ ಮೋಸ ಮಾಡುವುದನ್ನು ನೋಡಿರಬಹುದು. ಇದೀಗ ಇದಕ್ಕೆ ತದ್ವಿರುದ್ಧ ಎನ್ನುವಂತೆ ಪ್ರೀತಿಗಾಗಿ ಯುವಕನೊಬ್ಬನು ಇಸ್ಲಾಂ (islam) ಧರ್ಮ ವನ್ನು ತ್ಯಜಿಸಿ ಹಿಂದೂ ಧರ್ಮಕ್ಕೆ ಸೇರಿಕೊಂಡು ಮನಸಾರೆ ಪ್ರೀತಿಸುತ್ತಿದ್ದ ಯುವತಿಯನ್ನು ವರಿಸಿದ್ದಾನೆ. ಹೌದು, ಮಧ್ಯಪ್ರದೇಶದ ಜಬಲ್ಪುರ (madhya pradesh of jabalpur ) ದಲ್ಲಿ ಈ ಘಟನೆಯೂ ನಡೆದಿದ್ದು, ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಅನ್ ಮೊಹಮ್ಮದ್ ಕಳೆದ ಮೂರು ವರ್ಷಗಳಿಂದ ಸೃಷ್ಟಿ ಎನ್ನುವ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದನು. ಮದುವೆಯಾಗಲು ಬಯಸಿದ್ದ ಇವನ ಪ್ರೀತಿಗೆ ಕುಟುಂಬದಿಂದ ಸಂಪೂರ್ಣ ವಿರೋಧವಿತ್ತು. ಆದರೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಮೊಹಮ್ಮದ್ ಗಟ್ಟಿ ನಿರ್ಧಾರ ಮಾಡಿದ್ದಾನೆ. ಹೌದು ಇಸ್ಲಾಂ ಧರ್ಮವನ್ನು ತ್ಯಜಿಸುವ ನಿರ್ಧಾರ ಮಾಡಿದ್ದು ಈ ಬಗ್ಗೆ ತನ್ನ ಪ್ರೇಯಸಿ ಸೃಷ್ಟಿಗೂ ತಿಳಿಸಿದ್ದಾನೆ. ಹೌದು, ಆಕೆಯು ಈ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದ್ದು, ಕೊನೆಗೂ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ : ಸತತ 27 ಪ್ರಕರಣಗಳನ್ನು ಗೆದ್ದ ನಕಲಿ ವಕೀಲ, ಇಲ್ಲಿದೆ ಕುತೂಹಲಕಾರಿ ಮಾಹಿತಿ

ಇದನ್ನೂ ಓದಿ
ಮದುವೆಯ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ ಹೃದಯಾಘಾತದಿಂದ ವಧು ಸಾವು
ಐಸ್ ಕ್ರೀಂ ಮೇಲೆ ಗರಿಗರಿಯಾದ ಆಲೂಗಡ್ಡೆ ಫ್ರೈಸ್
ಡ್ರೀಮ್ 11 ನಲ್ಲಿ 39 ರೂ ಹೂಡಿಕೆ,ಯುವಕನಿಗೆ ಬಂತು ನೋಡಿ ನಾಲ್ಕು ಕೋಟಿ
ಕುದುರೆ ಮೇಲೇರಿ ಮದುವೆ ಮಂಟಪಕ್ಕೆ ಬಂದ ವರನಿಗೆ ಮಳೆಯಿಂದ ಸ್ವಾಗತ

ಅಂದಹಾಗೆ ಅನ್ ಮೊಹಮ್ಮದ್ ಹಾಗೂ ಸೃಷ್ಟಿ ಪ್ರೀತಿ ಚಿಗುರಿದ್ದು ಮೂರು ವರ್ಷಗಳ ಹಿಂದೆ. ಅಂದಹಾಗೆ, ಅನ್ ಮೊಹಮ್ಮದ್ ಹೊಲಿಗೆ ಯಂತ್ರ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅದೇ ಅಂಗಡಿಗೆ ಸೃಷ್ಟಿ ಹಲ್ದಾರ್ ಹೊಲಿಗೆ ಕಲಿಯಲು ಬರುತ್ತಿದ್ದಳು. ಇವರಿಬ್ಬರ ನಡುವೆ ಶುರುವಾದ ಪರಿಚಯವು ತದನಂತರದಲ್ಲಿ ಪ್ರೀತಿಗೆ ತಿರುಗಿದೆ. ಆದರೆ ಇದೀಗ ತನ್ನ ಪ್ರೀತಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಆನ್ ಮೊಹಮ್ಮದ್ ತನ್ನ ಹೆಸರನ್ನು ಸಂಜುವಾಗಿ ಬದಲಾಯಿಸಿಕೊಂಡಿದ್ದಾನೆ. ಹೌದು, ರಾಮಮಂದಿರದ ಅರ್ಚಕರು ಶಾಸ್ತ್ರ ಬದ್ಧವಾಗಿ ಈ ಯುವಕನನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿದ್ದು, ಆನ್ ಮೊಹಮ್ಮದ್ ಗೆ ಗಂಗಾ ಜಲ ಮತ್ತು ನರ್ಮದಾ ಜಲವನ್ನು ನೀಡಿದ್ದಾರೆ. ಹೆಸರನ್ನು ಸಂಜುವಾಗಿ ಬದಲಾಯಿಸಿಕೊಂಡ ಯುವಕನು ಸೃಷ್ಟಿ ಜೊತೆಗೆ ಹಿಂದೂ ಧರ್ಮದ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:20 am, Tue, 6 May 25