ಭೋಪಾಲ್: ಮಹಿಳೆಯೊಬ್ಬಳು ತನ್ನ 8ವರ್ಷದ ಮಗುವಿನೊಂದಿಗೆ ಭಿಕ್ಷಾಟನೆ ಮಾಡಿ ಕೇವಲ 45 ದಿನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಹಣ ಗಳಿಸಿದ್ದಾಳೆ. ಇದಲ್ಲದೇ ಭಿಕ್ಷಾಟನೆಯಿಂದಲೇ ತನ್ನ ತವರೂರಿನಲ್ಲಿ ಮನೆ ಹಾಗೂ ವ್ಯವಸಾಯ ಮಾಡಲು ಜಾಮೀನು ಖರೀದಿಸಿದ್ದಾಳೆ. ಇದೀಗಾ ಹಣ ಸಂಪಾದನೆಯ ಆಸೆಗಾಗಿ ಸ್ವಂತ ಮಕ್ಕಳನ್ನೇ ಭಿಕ್ಷಾಟನೆಯಲ್ಲಿ ತೊಡಗಿಸಿದ್ದುದರ ಆಧಾರದ ಮೇಲೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಇಂದಿರಾ ಬಾಯಿ ಎಂದು ಗುರುತಿಸಲಾದ ಭಿಕ್ಷುಕಿ ಮಹಿಳೆಯನ್ನು ಫೆಬ್ರವರಿ 12 ರಂದು ನಗರದ ಲವ- ಕುಶ ವೃತ್ತದಲ್ಲಿ ಬಂಧಿಸಲಾಗಿದೆ. ವಿವರಗಳ ಪ್ರಕಾರ, ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಇಂದೋರ್ ಪ್ರದೇಶಕ್ಕೆ ಭೇಟಿ ನೀಡಿದಾಗ ಮಹಿಳೆಯನ್ನು ಗುರುತಿಸಲಾಗಿದೆ. ಮಗುವಿನೊಂದಿಗೆ ಭಿಕ್ಷೆ ಬೇಡುತ್ತಿದ್ದಾಗ ಸಂಘಟನೆಯ ಸದಸ್ಯರು ಆಕೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಈಕೆಗೆ 5 ಮಕ್ಕಳಿದ್ದು, ತನ್ನ ಇಬ್ಬರು ಮಕ್ಕಳು ರಾಜಸ್ಥಾನದಲ್ಲಿ ವಾಸಿಸುವುದಾಗಿ ಬಹಿರಂಗಪಡಿಸಿದ್ದಾಳೆ. ಇದಲ್ಲದೆ ತನ್ನ ಉಳಿದ ಮೂರು ಮಕ್ಕಳು ಕುಟುಂಬದ ಇತರ ಸದಸ್ಯರೊಂದಿಗೆ ಇಂದೋರ್‌ನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಹೇಳಿದ್ದಾಳೆ.
ಇದನ್ನೂ ಓದಿ: ಮೋದಿ ಕಟೌಟ್ ತಬ್ಬಿಕೊಂಡು, ಸೊಂಟ ಬಳುಕಿಸುತ್ತಾ ರೀಲ್ಸ್ ಮಾಡಿದ ಮಹಿಳೆ
ಭಿಕ್ಷಾಟನೆಯ ಮೂಲಕ ಏಳು ದಿನಗಳಲ್ಲಿ 19,000 ರೂ.ಗಿಂತ ಹೆಚ್ಚು ಸಂಪಾದಿಸಿದ್ದನ್ನು ಮಹಿಳೆ ತನಿಖೆಯ ವೇಳೆ ಬಹಿರಂಗಪಡಿಸಿದ್ದಾಳೆ.
ತನಗೆ ಒಂದು ಕಾಂಕ್ರೀಟ್ ಮನೆ,ಬೈಕು ಮತ್ತು ಹಳ್ಳಿಯಲ್ಲಿ ಜಮೀನು ಇದೆ. ಭಿಕ್ಷಾಟನೆಯ ಮೂಲಕ ತನ್ನ ದಿನದ ಆದಾಯವು ಸುಮಾರು 3,000 ರೂಪಾಯಿ. 45 ದಿನಗಳಲ್ಲಿ ತಾನು 2.5 ಲಕ್ಷ ರೂ.ಗಿಂತ ಹಣ ಹೆಚ್ಚು ಸಂಪಾದಿಸಿದ್ದು, ಅದರಲ್ಲಿ 1 ಲಕ್ಷ ರೂ.ಗಳನ್ನು ತನ್ನ ಅತ್ತೆಗೆ ವರ್ಗಾಯಿಸಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾಳೆ.
ಭಿಕ್ಷುಕಿ ತನ್ನ ಹೆಸರಿನಲ್ಲಿ 50,000 ರೂ.ಗಳನ್ನು ಮತ್ತು ತನ್ನ ಮಗುವಿನ ಹೆಸರಿನಲ್ಲಿ 50,000 ರೂ.ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಮಹಿಳೆಯನ್ನು ಬಂಧಿಸಲಾಗಿದೆ. ಇದೇ ವೇಳೆ ಆಕೆಯ 8 ವರ್ಷದ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ಹಸ್ತಾಂತರಿಸಲಾಗಿದೆ. ಕೇಸು ದಾಖಲಾಗುತ್ತಿದ್ದಂತೆ ಮಹಿಳೆಯ ಪತಿ ಮೂವರು ಮಕ್ಕಳು ಹಾಗೂ ಕುಟುಂಬಸ್ಥರು ತಲೆ ಮರೆಸಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ