Viral: ತಂಗಿಯೊಂದಿಗೆ ಮಾತನಾಡಿದನೆಂದು ಅಪ್ರಾಪ್ತ ಬಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಅಣ್ಣಂದಿರು; ವಿಡಿಯೋ ವೈರಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 28, 2025 | 1:16 PM

ಸಹಪಾಠಿಗಳು ಮತ್ತು ಫ್ರೆಂಡ್ಸ್‌ ಹೀಗೆ ಯಾರಾದ್ರೂ ಎಲ್ಲಾದ್ರೂ ಸಿಕ್ಕಿದ್ರೆ ಅಥವಾ ಫೋನಿನಲ್ಲಿ ಮಾತನಾಡೋದು ಸಾಮಾನ್ಯ ಅಲ್ವಾ. ಆದ್ರೆ ಇಲ್ಲೊಬ್ಬ ಹುಡುಗನಿಗೆ ಇದುವೇ ಕಂಟಕವಾಗಿ ಪರಿಣಿಮಿಸಿದೆ. ಹೌದು ತಮ್ಮ ತಂಗಿಯೊಂದಿಗೆ ಮಾತನಾಡಿದನೆಂದು ಆ ಹುಡುಗನನ್ನು ಕರೆಸಿ ಒಂದಷ್ಟು ಯುವಕರು ಆತನಿಗೆ ಬೆಲ್ಟ್‌ ಮತ್ತು ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಕುರಿತ ಆಘಾತಕಾರಿ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ತಂಗಿಯೊಂದಿಗೆ ಮಾತನಾಡಿದನೆಂದು ಅಪ್ರಾಪ್ತ ಬಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಅಣ್ಣಂದಿರು; ವಿಡಿಯೋ ವೈರಲ್
ವೈರಲ್​ ವಿಡಿಯೋ
Follow us on

ಫ್ರೆಂಡ್ಸ್‌ ಅಥವಾ ಸಹಪಾಠಿಗಳು ಎಲ್ಲಾದ್ರೂ ಸಿಕ್ಕಿದ್ರೆ ಅಥವಾ ಫೋನಿನಲ್ಲಿ ಸ್ವಲ್ಪ ಹೊತ್ತು ಹೀಗೆ ಸುಮ್ನೆ ಮಾತಾಡ್ತಾರೆ ಅಲ್ವಾ. ಆದ್ರೆ ಇಲ್ಲೊಬ್ಬ ಅಪ್ರಾಪ್ತ ಹುಡುಗ ಹೀಗೆ ತನ್ನ ಪರಿಚಯದ ಹುಡುಗಿಯೊಂದಿಗೆ ಮಾತನಾಡಲು ಹೋಗಿ ಪಜೀತಿಗೆ ಸಿಲುಕಿದ್ದಾನೆ. ಹೌದು ಆತ ತನ್ನ ಪರಿಚಯದ ಹುಡುಗಿಯೊಂದಿಗೆ ಮಾತನಾಡಿದ್ದು, ಈ ವಿಷಯ ಆ ಹುಡುಗಿಯ ಅಣ್ಣಂದಿರಿಗೆ ಗೊತ್ತಾಗಿ ಅವರು ಆ ಹುಡುಗನನ್ನು ಕರೆಸಿ ನಮ್ಮ ತಂಗಿಯೊಂದಿಗೆ ಮಾತನಾಡಲು ನಿನಗೆಷ್ಟು ಧೈರ್ಯ ಎಂದು ಹೇಳಿ ಬೆಲ್ಟ್‌ ಮತ್ತು ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದ್ದು, ಯುವಕರ ಗುಂಪೊಂದು 10 ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಬೆಲ್ಟ್‌ ಮತ್ತು ಚಪ್ಪಲಿಯಿಂದ ಹೊಡೆದಿದ್ದಾರೆ. ಆ ಬಾಲಕ ತಮ್ಮ ತಂಗಿಯೊಂದಿಗೆ ಮಾತನಾಡಿದನೆಂದು, ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ನೇಹಿತನ ಮೂಲಕ ಕರೆ ಮಾಡಿಸಿ, ಆ ಅಪ್ರಾಪ್ತ ಬಾಲಕನನ್ನು ಕರೆಸಿ, ನೀನೇ ಅಲ್ವಾ ನಮ್ಮ ತಂಗಿಯೊಂದಿಗೆ ಫೋನ್‌ನಲ್ಲಿ ಮಾತನಾಡೋದು ಎಂದು ಆರೋಪಿಸಿ ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಾನು ನಿಮ್ಮ ತಂಗಿಯೊಂದಿಗೆ ಮಾತನಾಡಿಲ್ಲ ಎಂದು ಹುಡುಗ ಎಷ್ಟೇ ಹೇಳಿದ್ರೂ ಹುಡುಗಿಯ ಅಣ್ಣಂದಿರು ಆತನಿಗೆ ಬೆಲ್ಟ್‌ ಮತ್ತು ಚಪ್ಪಲಿಯಿಂದ ಮನಬಂದಂತೆ ಥಳಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:

FreePressMP ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಮ್ಮ ತಂಗಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದನೆಂದು ಅಪ್ರಾಪ್ತ ಹುಡುಗನಿಗೆ ಯುವಕರ ತಂಡವೊಂದು ಚಪ್ಪಲಿ ಮತ್ತು ಬೆಲ್ಟ್‌ನಿಂದ ಹೊಡೆಯುವಂತಹ ಆಘಾತಕಾರಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಅಶೋಕ ಚಕ್ರದ ಬದಲು ರಾಷ್ಟ್ರಧ್ವಜದ ರಂಗೋಲಿಯಲ್ಲಿ ಕರ್ನಾಟಕ ನಕ್ಷೆ ಬಿಡಿಸಿದ ವಿದ್ಯಾರ್ಥಿಗಳು; ಫೋಟೋ ವೈರಲ್

ಈ ಬಗ್ಗೆ ದಾಬ್ರಾ ದೇಹತ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳು, ಸಂತ್ರಸ್ತ ಎಲ್ಲರೂ ಅಪ್ರಾಪ್ತರು ಎಂದು ಪೊಲೀಸರು ತಿಳಿಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ