Viral: ಶುಭ ಕಾರ್ಯಗಳಿಗೆ ಕಪ್ಪು ಬಣ್ಣದ ಬಟ್ಟೆ ಧರಿಸಿ ಹೋಗಬಾರದು ಏಕೆ ಗೊತ್ತಾ? ಇದರ ಹಿಂದಿನ ವೈಜ್ಞಾನಿಕ ಕಾರಣ ತಿಳಿಯಿರಿ

ಕಪ್ಪು ಬಣ್ಣ ಮತ್ತು ಈ ಬಣ್ಣದ ಬಟ್ಟೆ ಅಂದ್ರೆ ಹಲವರಿಗೆ ಬಹಳ ಅಚ್ಚುಮೆಚ್ಚು. ಆದ್ರೆ ಯಾರಾದ್ರೂ ಶುಭ ಸಮಾರಂಭಗಳಿಗೆ ಹೋಗುವಾಗ ಈ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿದರೆ ಹಿರಿಯರು ಹೀಗೆಲ್ಲಾ ಶುಭ ಕಾರ್ಯಗಳಿಗೆ ಕಪ್ಪು ಬಟ್ಟೆ ಧರಿಸಬಾರದು, ಅದು ಅಪಶಕುನ ಎಂದು ಹೇಳಿ ಗದರುತ್ತಾರೆ ಅಲ್ವಾ. ಹಿರಿಯರು ಹೀಗೆ ಹೇಳುವುದರ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಹಾಗಾದ್ರೆ ಶುಭ ಸಮಾರಂಭಗಳಿಗೆ ಏಕೆ ಕಪ್ಪು ಬಟ್ಟೆ ಧರಿಸಿ ಹೋಗಬಾರದು ಎಂಬುದನ್ನು ನೋಡೋಣ ಬನ್ನಿ.

Viral: ಶುಭ ಕಾರ್ಯಗಳಿಗೆ ಕಪ್ಪು ಬಣ್ಣದ ಬಟ್ಟೆ ಧರಿಸಿ ಹೋಗಬಾರದು ಏಕೆ ಗೊತ್ತಾ? ಇದರ ಹಿಂದಿನ ವೈಜ್ಞಾನಿಕ ಕಾರಣ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 27, 2025 | 5:32 PM

ಹೆಚ್ಚಾಗಿ ಯುವ ಜನರು ಕಪ್ಪು ಬಣ್ಣದ ಬಟ್ಟೆಗಳನ್ನು ಸಿಕ್ಕಾಪಟ್ಟೆ ಇಷ್ಟಪಡ್ತಾರೆ. ಅದರಲ್ಲೂ ಕೆಲವರಿಗೆ ಕಪ್ಪು ಬಣ್ಣದ ಬಟ್ಟೆ ಎಷ್ಟು ಪ್ರಿಯವೆಂದರೆ ಪ್ರತಿ ಬಾರಿಯೂ ಬ್ಯ್ಲಾಕ್‌ ಡ್ರೆಸ್‌ಗಳನ್ನೇ ಖರೀದಿ ಮಾಡುತ್ತಿರುತ್ತಾರೆ. ಅಷ್ಟೇ ಯಾಕೆ ಯಾವುದೇ ಕಾರ್ಯಕ್ರಮಗಳಿಗೆ ಹೋಗುವಾಗಲೂ ಕೂಡಾ ಇದೇ ಬಣ್ಣದ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಹೀಗೆ ದೇವಾಲಯಗಳಿಗೆ ಹೋಗುವ ಸಂದರ್ಭದಲ್ಲಿ ಅಥವಾ ಶುಭ ಕಾರ್ಯಗಳಿಗೆ ಹೋಗುವಾಗ ಕಪ್ಪು ಬಟ್ಟೆ ಧರಿಸಿದರೆ ಹಿರಿಯರು ಅಥವಾ ಅಮ್ಮಂದಿರು ಹೀಗೆಲ್ಲಾ ಕಪ್ಪು ಬಟ್ಟೆ ಧರಿಸ್ಬಾರದು ಅದು ಅಪಶಕುನ ಎಂದು ಹೇಳಿ ಗದರುತ್ತಿರುತ್ತಾರೆ. ಹಿರಿಯರು ಹೀಗೆ ಹೇಳುವುದರ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಹಾಗಾದ್ರೆ ಶುಭ ಸಮಾರಂಭಗಳಿಗೆ ಏಕೆ ಕಪ್ಪು ಬಟ್ಟೆ ಧರಿಸಿ ಹೋಗಬಾರದು ಎಂಬುದನ್ನು ನೋಡೋಣ ಬನ್ನಿ.

ಶುಭ ಕಾರ್ಯಗಳಿಗೆ ಕಪ್ಪು ಬಣ್ಣದ ಬಟ್ಟೆಯನ್ನು ಏಕೆ ಧರಿಸಬಾರದು?

ದೇವಾಲಯ ಅಥವಾ ಶುಭ ಕಾರ್ಯಗಳಿಗೆ ಹೋಗುವಾಗ ಕಪ್ಪು ಬಣ್ಣದ ಬಟ್ಟೆ ಧರಿಸುವುದು ನಿಷಿದ್ಧವೆಂದು ಹೇಳಲಾಗುತ್ತದೆ. ಅದರಲ್ಲೂ ಹಿರಿಯರು ಕಪ್ಪು ಬಣ್ಣ ಅಪಶಕುನ, ಆ ಬಣ್ಣದ ಬಟ್ಟೆಯನ್ನು ಧರಿಸಲೇಬಾರದು ಎಂದು ಹೇಳುತ್ತಿರುತ್ತಾರೆ. ಹೀಗೆ ಹೇಳುವುದರ ಹಿಂದೆಯೂ ಹಲವು ಕಾರಣಗಳಿವೆ.

• ಅದೇನೆಂದರೆ ಹಿಂದೂ ಧರ್ಮದಲ್ಲಿ ಕಪ್ಪು ಬಣ್ಣ ದುಷ್ಟ ಮತ್ತು ಕೆಟ್ಟ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆಯಿದೆ. ಇದು ಶುಭ ಸಂದರ್ಭದಲ್ಲಿ ಕೆಟ್ಟ ಪರಿಣಾಮ ಬೀರಬಹುದು ಹಾಗಾಗಿ ಯಾವುದೇ ಶುಭ ಸಮಾರಂಭಕ್ಕೆ ಕಪ್ಪು ಬಟ್ಟೆ ಧರಿಸಿ ಹೋಗಬಾರದು ಎಂದು ಹೇಳುತ್ತಾರೆ.

• ಮೊದಲೇ ಹೇಳಿದಂತೆ ಕಪ್ಪು ನಕರಾತ್ಮಕತೆಯ ಸಂಕೇತವಾಗಿದೆ. ಅಷ್ಟೇ ಅಲ್ಲದೆ ಈ ಬಣ್ಣ ಶನಿ ಮತ್ತು ರಾಹುವಿಗೆ ಇಷ್ಟವಾದ ಬಣ್ಣವಾಗಿದೆ. ಹೀಗಿರುವಾಗ ಶುಭ ಸಂದರ್ಭದಲ್ಲಿ ಕಪ್ಪು ಬಟ್ಟೆ ಧರಿಸಿದೆ ರಾಹು ಕೆಲಸದಲ್ಲಿ ಅಡತಡೆಗಳನ್ನು ಉಂಟು ಮಾಡುತ್ತದೆ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಹಾಗಾಗಿ ಶುಭ ಕಾರ್ಯಗಳಿಗೆ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಎಂದು ಹಿರಿಯರು ಹೇಳೋದು.

• ವಾಸ್ತು ಶಾಸ್ತ್ರದ ಪ್ರಕಾರ, ಕಪ್ಪು ಬಣ್ಣವು ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಮತ್ತು ಶುಭ ಕಾರ್ಯಗಳಲ್ಲಿ ನಾವು ಆದಷ್ಟು ನಕಾರಾತ್ಮಕ ವಿಷಯಗಳಿಂದ ದೂರವಿರಬೇಕು. ಈ ಕಾರಣಕ್ಕಾಗಿಯೇ ಹಿರಿಯರು ಯಾವುದೇ ಶುಭ ಸಮಾರಂಭಗಳಲ್ಲಿ ಕಪ್ಪು ಬಟ್ಟೆ ಧರಿಸ್ಬಾರದು ಅಂತಾರೆ.

ಇದನ್ನೂ ಓದಿ: ಫೋನ್ ತಂದ ಆಪತ್ತು; ಕೀ ಪ್ಯಾಡ್‌ ಮೊಬೈಲ್‌ ನುಂಗಿ ಪ್ರಾಣ ಕಳೆದುಕೊಂಡ ಮಹಿಳೆ

ವೈಜ್ಞಾನಿಕ ಕಾರಣವೇನು?

ಧಾರ್ಮಿಕ ಮಾತ್ರವಲ್ಲ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಎಂದು ಹೇಳುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ವಿಜ್ಞಾನದ ಪ್ರಕಾರ, ಕಪ್ಪು ಒಂದು ಶಾಖ ಹೀರಿಕೊಳ್ಳುವ ವಸ್ತುವಾಗಿದ್ದು, ಇದು ಸುತ್ತಮುತ್ತಲಿನ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿದರೆ, ಅದು ಹೆಚ್ಚಿನ ಶಾಖವನ್ನು ಹೀರಿಕೊಳ್ಳುತ್ತದೆ. ಇದು ಆರೋಗ್ಯ ಮೇಲೆಯೂ ಋಣಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಅದಕ್ಕಾಗಿ ಕಪ್ಪು ಧರಿಸಬಾರದು ಎಂದು ಹೇಳುವುದು. ಮನಃಶಾಸ್ತ್ರದ ಸಂಶೋಧನೆಯ ಪ್ರಕಾರ ಯಾರು ಕಪ್ಪು ಬಣ್ಣವನ್ನು ಇಷ್ಟಪಡುತ್ತಾರೋ ಅವರ ಮನಸ್ಸು ಅಶಾಂತಿಯಿಂದ ಕೂಡಿರುತ್ತದೆಯಂತೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ