Viral: ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರು ಗೆದ್ದ

ಗ್ರಾಮೀಣ ಜನರ ಬದುಕಿನೊಂದಿಗೆ ಬೆಸೆದುಕೊಂಡಿದೆ ಈ ಎತ್ತಿನ ಗಾಡಿ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಮನೋರಂಜನೆಯೊಂದಿಗೆ ಹೊಸ ಚೈತನ್ಯ ನೀಡುವ ಈ ಎತ್ತಿನ ಗಾಡಿ ಸ್ಪರ್ಧೆಯನ್ನು ಆಯೊಜಿಸುವುದನ್ನು ನೀವು ನೋಡಿರುತ್ತೀರಿ. ಆದರೆ ವ್ಯಕ್ತಿಯೊಬ್ಬರು ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಫಾರ್ಚೂನರ್ ಕಾರನ್ನು ಗೆದ್ದುಕೊಂಡಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರು ಗೆದ್ದ
ಎತ್ತಿನಗಾಡಿ ಸ್ಪರ್ಧೆ
Image Credit source: Social Media

Updated on: Nov 11, 2025 | 1:08 PM

ಮಹಾರಾಷ್ಟ್ರ, ನವೆಂಬರ್ 11: ಹಳ್ಳಿ ಬದುಕು ನೋಡೋದಕ್ಕೆ ಮಾತ್ರವಲ್ಲ ಅನುಭವಿಸುವುದಕ್ಕೂ ಚಂದ. ಇಲ್ಲಿನ ಆಚಾರ ವಿಚಾರ, ದೇಸಿ ಕ್ರೀಡೆಗಳನ್ನು ಆನಂದಿಸಿದವರೇ ಅದರ ಖುಷಿಯನ್ನು ಬಲ್ಲರು. ಹಳ್ಳಿ ಬದುಕು ಎಂದಾಗ ಎತ್ತಿನ ಗಾಡಿ ಕಣ್ಣ ಮುಂದೇ ಬರುತ್ತದೆ. ಹೌದು, ಮಹಾರಾಷ್ಟ್ರದ ಸಾಂಗ್ಲಿಯ ಬೋರ್ಗಾಂವ್‌ನಲ್ಲಿ (Borgaon, Sangli of Maharashtra) ಇತಿಹಾಸದಲ್ಲಿಯೇ ಅತಿದೊಡ್ಡ ಎತ್ತಿನಗಾಡಿ ಓಟದ (Bullock cart race) ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ವ್ಯಕ್ತಿಯೊಬ್ಬ ಜೋಡಿ ಎತ್ತಿನ ಗಾಡಿಯನ್ನು ಓಡಿಸಿ ಕಾರು ಗೆದ್ದುಕೊಂಡಿದ್ದಾನೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಜೋಡೆತ್ತನ್ನು ಮುನ್ನಡೆಸಿ ಕಾರು ಗೆದ್ದ ವ್ಯಕ್ತಿ

ಡಬಲ್ ಮಹಾರಾಷ್ಟ್ರ ಕೇಸರಿ ಚಂದ್ರಹರ್ ಪಾಟೀಲ್ ಅವರು ದೇಶದ ಅತಿದೊಡ್ಡ ಜೋಡಿ ಎತ್ತಿನಗಾಡಿ ಓಟವನ್ನು ಆಯೋಜಿಸಿದ್ದು, ಪ್ರತಿಷ್ಠಿತ ಫಾರ್ಚೂನರ್ ಗೆಲ್ಲಲು ಸಾವಿರಾರು ಎತ್ತಿನ ಗಾಡಿಗಳು ಬೋರ್ಗಾಂವ್‌ನ ಕೊಡ್ಯದಲ್ಲಿರುವ ಮಲ್ರಾನಾಗೆ ಆಗಮಿಸಿದ್ದವು. ಆದರೆ ಹೆಲಿಕಾಪ್ಟರ್ ಬೈಜ್ಯಾ ಮತ್ತು ಬ್ರೇಕ್ ಫೇಲ್ ಎತ್ತಿನ ಜೋಡಿಯು ಉಳಿದ ಜೋಡಿ ಎತ್ತುಗಳನ್ನು ಸೋಲಿಸಿ ಪ್ರತಿಷ್ಠಿತ ಫಾರ್ಚೂನರ್ ಕಾರನ್ನು ಗೆದ್ದಿದೆ. ಜೋಡಿ ಎತ್ತನ್ನು ಮುನ್ನಡೆಸಿದ್ದು ಶ್ರೀನಾಥ್ ಕೇಸರಿ. ದೇಶದ ಅತಿದೊಡ್ಡ ಜೋಡಿ ಎತ್ತಿನಗಾಡಿ ರೇಸ್‌ನಲ್ಲಿ ಶ್ರೀನಾಥ್ ಕೇಸರಿ ವಿಜೇತರಾಗಿ ಹೊರಹೊಮ್ಮಿದ್ದು, ಫಾರ್ಚೂನರ್ ಕಾರು ಕೈ ಸೇರಿದೆ.

ಇದನ್ನೂ ಓದಿ:ಒಂದು ಕೋಟಿ ಲಾಟರಿ ಗೆದ್ದವನನ್ನ ಡೋಲು ಬಾರಿಸಿ ಹುಡುಕುತ್ತಿದ್ದಾರೆ ಇಲ್ಲಿ

ಪ್ರಮುಖ ಆಕರ್ಷಣೆಯಾಗಿದ್ದ ಮಹಿಳೆಯರ ಎತ್ತಿನಗಾಡಿ ಓಟ

ಈ ಓಟದಲ್ಲಿ ರಾಜ್ಯ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಮಾಜಿ ಶಾಸಕ ಶಹಾಜಿಬಾಪು ಪಾಟೀಲ್ ಸೇರಿದಂತೆ ಇನ್ನಿತ್ತರರು ಉಪಸ್ಥಿತರಿದ್ದರು. ಮಹಿಳೆಯರ ಎತ್ತಿನಗಾಡಿ ಓಟ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಹಸು ತಳಿಯ ಪ್ರಚಾರಕ್ಕಾಗಿ 100 ಮಹಿಳೆಯರಿಗೆ ಹಸುಗಳನ್ನು ನೀಡಲಾಗಿತ್ತು. ವಿಜೇತರಿಗೆ ಥಾರ್, ಫಾರ್ಚೂನರ್, 150 ದ್ವಿಚಕ್ರ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳಂತಹ ಕೋಟ್ಯಂತರ ರೂಪಾಯಿಗಳ ಬಹುಮಾನಗಳನ್ನು ಇಡಲಾಗಿತ್ತು. ಎತ್ತಿನಗಾಡಿ ರೇಸ್ ನಲ್ಲಿ ಬಿಎಂಡಬ್ಲ್ಯು ಕಾರು ಇರುವುದಾಗಿ ಚಂದ್ರಹರ್ ಪಾಟೀಲ್ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:04 pm, Tue, 11 November 25