ಒಂದು ಕೋಟಿ ಲಾಟರಿ ಗೆದ್ದವನನ್ನ ಡೋಲು ಬಾರಿಸಿ ಹುಡುಕುತ್ತಿದ್ದಾರೆ ಇಲ್ಲಿ
ಅದೃಷ್ಟ ಯಾವಾಗ, ಯಾರಿಗೆ, ಹೇಗೆ ಒಲಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಲಾಟರಿ ರೂಪದಲ್ಲಿ ಅದೃಷ್ಟ ಒಲಿಯುತ್ತದೆ. ಹೀಗೆ ಲಾಟರಿ ಗೆದ್ದು ಕೋಟ್ಯಾಧಿಪತಿಗಳಾದವರ ಕಥೆಗಳನ್ನು ನೀವು ಸಹ ನೋಡಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೂಡ ಒಂದು ಕೋಟಿ ರೂಪಾಯಿ ಬಂಪರ್ ಲಾಟರಿ ಗೆದ್ದಿದ್ದು, ಲಾಟರಿ ಗೆದ್ದವನ್ಯಾರು, ಆತನ ಹೆಸರೇನು ಎಂಬುದು ಗೊತ್ತಿಲ್ಲದ ಕಾರಣ ಅಂಗಡಿ ಮಾಲೀಕರು ಡೋಲು ಬಾರಿಸಿ ಆ ಅದೃಷ್ಟವಂತ ವ್ಯಕ್ತಿಯನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಅಗುತ್ತಿದೆ.

ಈ ಅದೃಷ್ಟ ಎನ್ನುವಂತಹದ್ದು, ಯಾರಿಗೆ, ಹೇಗೆ, ಯಾವ ರೂಪದಲ್ಲಿ ಒಲಿಯುತ್ತದೆ ಎಂಬುದನ್ನು ಯಾರಿಂದಲೂ ಊಹೆ ಮಾಡಲು ಸಾಧ್ಯವಿಲ್ಲ. ಅದೃಷ್ಟಲಕ್ಷ್ಮೀ ಒಲಿದರೆ ಬಡವನು ಕೂಡ ಸಿರಿವಂತನಾಗುತ್ತಾನೆ. ಅದೆಷ್ಟೋ ಮಂದಿ ಲಾಟರಿಯಲ್ಲಿ (lottery) ಅದೃಷ್ಟ ಲಭಿಸಿ, ಕೋಟಿ ಕೋಟಿ ಗೆದ್ದು ಸಿರಿವಂತರಾಗಿದ್ದಾರೆ. ಇದಕ್ಕೆ ಉದಾಹರಣೆಯೆಂಬಂತೆ ಇತ್ತೀಚಿಗಷ್ಟೇ ತೆಲಂಗಾಣದ ಯುವಕನೊಬ್ಬ ಯುಎಇಯಲ್ಲಿ ಲಾಟರಿ ಖರೀದಿಸಿ 240 ಕೋಟಿ ರೂ. ಗೆದ್ದು ಕೋಟ್ಯಾಧಿಪತಿಯಾಗಿದ್ದಾನೆ. ಅದೇ ರೀತಿ ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬ ಲಾಟರಿ ಟಿಕೆಟ್ ಖರೀದಿಸಿ 1 ಕೋಟಿ ರೂ. ಬಂಪರ್ ಲಾಟರಿ ಗೆದ್ದಿದ್ದು, ಈ ಲಾಟರಿ ಗೆದ್ದ ನಿಗೂಢ ಅದೃಷ್ಟವಂತ ವ್ಯಕ್ತಿ ಯಾರೆಂದು ತಿಳಿಯದೆ ಲಾಟರಿ ಅಂಗಡಿಯವರು ಡೋಲು ಬಾರಿಸಿ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಡೋಲು ಬಾರಿಸಿ ಲಾಟರಿ ಗೆದ್ದವನನ್ನು ಹುಡುಕುತ್ತಿದ್ದಾರೆ ಅಂಗಡಿ ಮಾಲೀಕರು:
ಈ ಘಟನೆ ಪಂಜಾಬ್‌ನ ಲುಧಿಯಾನದಲ್ಲಿ ನಡೆದಿದ್ದು, ಲಾಟರಿ ಗೆದ್ದವನಿಗಾಗಿ ಡೋಲು ಬಾರಿಸುತ್ತಾ ಅಂಗಡಿಯವರು ಹುಡುಕಾಟ ನಡೆಸಿದ್ದಾರೆ. ಇಲ್ಲಿನ ಓಂಕಾರ್ ಲಾಟರಿ ಅಂಗಡಿಯಲ್ಲಿ ವ್ಯಕ್ತಿಯೊಬ್ಬ 2 ರೂ. ಗೆ 7565 ನಂಬರ್‌ನ ಲಾಟರಿ ಟಿಕೆಟ್ ಖರೀದಿಸಿದ್ದನು. ಆದರೆ ಟಿಕೆಟ್ ಖರೀದಿಸುವ ವೇಳೆ ತನ್ನ ಹೆಸರು ಮತ್ತು ಫೋನ್ ನಂಬರ್ ನಿಗೂಢವಾಗಿ ಇಟ್ಟಿದ್ದನು. ಇದೀಗ ಆತ ಒಂದು ಕೋಟಿ ರೂ. ಲಾಟರಿ ಹಣವನ್ನು ಗೆದ್ದಿದ್ದು, ಗೆದ್ದ ವ್ಯಕ್ತಿ ಯಾರು ಎಂಬುದು ತಿಳಿಯದೆ ಅಂಗಡಿ ಮಾಲೀಕರು ಡೋಲು ಬಾರಿಸಿ ಆತನ ಹುಡುಕಾಟವನ್ನು ನಡೆಸುತ್ತಿದ್ದಾರೆ.
ನಗರದಲ್ಲೆಲ್ಲಾ ಆತನ ಲಾಟರಿ ಸಂಖ್ಯೆಯನ್ನು ಘೋಷಿಸುತ್ತಾ, ಡೋಲು ಬಾರಿಸುತ್ತಾ, 7565 ಸಂಖ್ಯೆಯನ್ನು ಹೊಂದಿರುವವರು 1 ಕೋಟಿ ರೂಪಾಯಿಗಳ ಬಂಪರ್ ಬಹುಮಾನವನ್ನು ಗೆದ್ದಿದ್ದಾರೆ ಎಂದು ಕೂಗುತ್ತಾ ಆ ಅದೃಷ್ಟವಂತ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ਲੁਧਿਆਣਾ ਵਿੱਚ ਲਾਟਰੀ ਵਿੱਚੋਂ ਨਿਕਲਿਆ 1 ਕਰੋੜ ਦਾ ਇਨਾਮ, ਜਿੱਤਣ ਵਾਲੇ ਨੂੰ ਲੱਭ ਰਹੇ ਨੇ ਦੁਕਾਨਦਾਰ pic.twitter.com/Kq5cB8qQA0
— JARNAIL (@N_JARNAIL) November 10, 2025
ಇದನ್ನೂ ಓದಿ: ವೇಯ್ಟರ್ ಮೇಲೆ ಬಿಸಿ ಬಿಸಿ ಕಾಫಿ ಎರಚಿದ ಮಹಿಳೆ, ಅಷ್ಟಕ್ಕೂ ಆತ ಮಾಡಿದ ತಪ್ಪೇನು?
ಈ ಟಿಕೆಟ್ ಖರೀಸಿದ ವ್ಯಕ್ತಿ ತನ್ನ ಹೆಸರನ್ನು ರಹಸ್ಯವಾಗಿ ಇಟ್ಟಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಲಾಟರಿ ವಿಜೇತನನ್ನು ಹುಡುಕಲು ತುಂಬಾ ಕಷ್ಟವಾಗುತ್ತಿದೆ. ಆತನನ್ನು ಹುಡುಕುವ ಪ್ರಯತ್ನವೂ ನಡೆಯುತ್ತಿದೆ. ಒಂದು ತಿಂಗಳೊಳಗೆ ಲಾಟರಿಯನ್ನು ಕ್ಲೈಮ್ ಮಾಡದಿದ್ದರೆ, ಅದನ್ನು ರದ್ದುಗೊಳಿಸಲಾಗುವುದು ಮತ್ತು ಅದಕ್ಕೆ ಯಾವುದೇ ಕ್ಲೈಮ್ ಇರುವುದಿಲ್ಲ ಎಂದು ಅಂಗಡಿ ಮಾಲೀಕರು ಹೇಳುತ್ತಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




