Viral Video: ಶ್ರೀಮಂತರು ಷೋಕಿಗಾಗಿ ನಾಯಿ ಸಾಕುತ್ತಾರೆ, ಅವರು ಪ್ರೀತಿಸುವುದಿಲ್ಲ; ನೆಟ್ಟಿಗರ ಚರ್ಚೆ

|

Updated on: Jul 15, 2023 | 1:08 PM

Dogs : ಉಳ್ಳವರು ತಮ್ಮ ಪ್ರತಿಷ್ಠೆಗೆ, ಮನರಂಜನೆಗೆ ನಾಯಿ ಸಾಕುತ್ತಾರೆ. ಪ್ರೀತಿಯಿಂದ ಸಾಕುವವರು ಉಳಿದವರು ಮಾತ್ರ ಎನ್ನುತ್ತಿರುವ ನೆಟ್ಟಿಗರು, ಸೇವಕಿ, ಸಹಾಯಕಿ, ಮನೆಗೆಲಸದಾಕೆ ಈ ಶಬ್ದಗಳ ಸುತ್ತ ಈ ಚರ್ಚೆ ಹುಟ್ಟುಹಾಕಿದ್ದಾರೆ.

Viral Video: ಶ್ರೀಮಂತರು ಷೋಕಿಗಾಗಿ ನಾಯಿ ಸಾಕುತ್ತಾರೆ, ಅವರು ಪ್ರೀತಿಸುವುದಿಲ್ಲ; ನೆಟ್ಟಿಗರ ಚರ್ಚೆ
ಮನೆಯ ಸಹಾಯಕಿ ರಿಜ್ವಾನಾ ಮೇಲೆ ಏರಿ ಕುಳಿತಿರುವ ಓರಿಯೋ.
Follow us on

Dog Lovers : ನಮ್ಮ ಮನೆಯ ಸಹಾಯಕಿಯನ್ನು ನಾನು ಪ್ರೀತಿಸುತ್ತೇನೆ. ರಿಜ್ವಾನಾ ಅಂಟೀ ಕೆಲಸ ಮಾಡುವಾಗ ಪ್ರತೀ ದಿನ ನನ್ನನ್ನು ಹೀಗೆ ಎತ್ತಿಕೊಂಡಿರುತ್ತಾರೆ- ಓರಿಯೋ ಮಿಶ್ರಾ. ಓರಿಯೋ ಎಂಬ ಸಾಕುನಾಯಿಯ ಹೆಸರಲ್ಲಿ ಅದರ ಪೋಷಕರು ಈ ಇನ್​ಸ್ಟಾಗ್ರಾಂ ಪುಟವನ್ನು ಅಪ್​ಡೇಟ್ ಮಾಡುತ್ತಿರುತ್ತಾರೆ. ನಾಯಿಯ ಚಟುವಟಿಕೆಗಳ ವಿಡಿಯೋ ಫೋಟೋಗಳು ಇಲ್ಲಿರುತ್ತವೆ. ಸುಮಾರು 10,000 ಫಾಲೋವರ್​ಗಳನ್ನು ಈ ಓರಿಯೋ (Oreo) ಹೊಂದಿದೆ. ಇದೀಗ ಸಹಾಯಕಿಯ ಬೆನ್ನ ಮೇಲೆ ಏರಿ ಕುಳಿತಿರುವ ಈ ವಿಡಿಯೋ ಅನ್ನು 6 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈ ಪೋಸ್ಟ್​ನಡಿ ಚರ್ಚೆಗಿಳಿದಿದ್ದಾರೆ. ವಿಷಯ : ಶ್ರೀಮಂತರು, ಮನೆಯ ಸಹಾಯಕಿಯರು ಮತ್ತು ಸಾಕುನಾಯಿಗಳು.

ಶ್ರೀಮಂತರು ಷೋಕಿಗಾಗಿ ಮತ್ತು ಟೈಂಪಾಸ್​​ಗಾಗಿ ನಾಯಿ ಸಾಕುತ್ತಾರೆ. ಏಕೆಂದರೆ ಅವರಿಗೆ ಎಲ್ಲವೂ ಒಂದು ವಸ್ತುವಿದ್ದಂತೆ. ಅಷ್ಟೇ ಅಲ್ಲ ಸ್ವತಃ ಅವರು ಪ್ರಾಣಿಗಳನ್ನು ನೋಡಿಕೊಳ್ಳಲಾರರು. ನಿಜವಾಗಿಯೂ ಅವುಗಳನ್ನು ಪ್ರೀತಿಸುವವರು, ಅವುಗಳ ಬೇಕುಬೇಡಗಳನ್ನು ಪೂರೈಸುವವರು ಅವರ ಮನೆಯ ಸಹಾಯಕರು ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral: ದರೋಡೆಕೋರ ಮೀನು; ಸಮುದ್ರದಾಳದಲ್ಲಿಯೂ ಕಳ್ಳರಿದ್ದಾರೆ ಎಚ್ಚರಿಕೆ!

ನಾನು ನನ್ನ ಕೆಲಸದವರನ್ನು ಸಹಾಯಕಿ ಎಂದು ಕರೆಯುತ್ತೇನೆ ಮೇಡ್ (ಸೇವಕಿ)​ ಎನ್ನುವುದಿಲ್ಲ ಎಂದು ಮತ್ತೊಬ್ಬರು. ಮೇಡ್​ ಎಂದರೆ ತಪ್ಪೇನಿಲ್ಲ, ಭಾರತದಲ್ಲಿರುವ ಕೆಲ ಶ್ರೀಮಂತ ಸ್ನೇಹಿತರ ಕುಟುಂಬಗಳಿಗೆ ಭೇಟಿ ಕೊಟ್ಟಾಗ ನಾಯಿಗಳು ಮಾಲಿಕರಿಗಿಂತ ಹೆಚ್ಚಾಗಿ ಮೇಡ್​ಗಳನ್ನು ಹೆಚ್ಚು ಪ್ರೀತಿಸುತ್ತವೆ. ಒಮ್ಮೆ ಮೇಡ್​ ಒಂದು ವಾರದ ತನಕ ರಜೆ ಮೇಲೆ ಹೋದಾಗ ಎರಡೂ ನಾಯಿಗಳು ದುಃಖಿಸಿದ್ದವು. ಆಕೆ ವಾಪಾಸು ಬಂದ ಮೇಲೆ ಅವುಗಳು ಚೈತನ್ಯ ಪಡೆದುಕೊಂಡವು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಕೋಯೀ ಲಡ್ಕೀ ಹೈ; ಅಜ್ಜನ ಡ್ಯಾನ್ಸ್​ ಗೆ ನೆಟ್ಟಿಗರ ಚಪ್ಪಾಳೆ

ನಮ್ಮ ಮನೆಯ ಸಹಾಯಕಿ ತನ್ನನ್ನು ತಾನೇ ಕೆಲಸದಾಕೆ ಎಂದು ಕರೆದುಕೊಳ್ಳುತ್ತಾರೆ, ಹೀಗಾಗಿ ನಾನು ಮತ್ತು ಅಮ್ಮ ಅವರನ್ನು ಹಾಗೆಯೇ ಕರೆಯುತ್ತೇವೆ ಎಂದಿದ್ದಾರೆ ಮತ್ತೊಬ್ಬರು. ಏನೇ ಆಗಲಿ ಅವರನ್ನು ಮಾನವೀಯತೆಯಿಂದ, ಕೆಲಸಕ್ಕೆ ತಕ್ಕಂತೆ ಸಂಬಳ ಕೊಟ್ಟು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಮಗದೊಬ್ಬರು ಹೇಳಿದ್ದಾರೆ. ಅಂತಃಕರಣ, ಪ್ರೀತಿಯ ಬೆಲೆ ಗೊತ್ತಿರುವುದು ಉಳಿದವರಿಗೆ, ಶ್ರೀಮಂತರಿಗಲ್ಲ. ಶಿಕ್ಷಣ ಮತ್ತು ಸೌಲಭ್ಯದಿಂದ ವಂಚಿತರಾದ ಅವರು ಮನಷ್ಯರಂತೆ ಪ್ರಾಣಿಗಳನ್ನೂ ಪ್ರೀತಿಸುತ್ತಾರೆ ಎನ್ನುವುದನ್ನು ಹಲವಾರು ಜನ ಅನುಮೋದಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ