Malala Yousafzai: ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಇನ್ಸ್ಟಾಗ್ರಾಂನ ಖಾತೆಯಲ್ಲಿ ತಮ್ಮ ವೈಯಕ್ತಿಕ ಫೋಟೋಗಳನ್ನೂ ಪೋಸ್ಟ್ ಮಾಡುತ್ತಿರುತ್ತಾರೆ. ಕಳೆದ ಬಾರಿ ಗಂಡ ಅಸ್ಸರ್ ಮಲಿಕ್ರೊಂದಿಗೆ ಬಾರ್ಬಿ ಸಿನೆಮಾ ನೋಡಲು ಹೋದ ಫೋಟೋ ಪೋಸ್ಟ್ ಮಾಡಿದ್ದರು. ಇದೀಗ ಅಸ್ಸರ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟ್ ಮಾಡಿದ್ದಾರೆ; ‘ಜಗತ್ತಿನ ನನ್ನ ನೆಚ್ಚಿನ ವ್ಯಕ್ತಿ ಅಸ್ಸರ್ (Asser Malik) ಮಲಿಕ್ಗೆ ಪ್ರೀತಿಯ ಹುಟ್ಟುಹಬ್ಬದ ಶುಭಾಶಯಗಳು. ನೀನು ಕೆಂಟ್ಗಿಂತ ನನಗೆ ಹೆಚ್ಚು ಪ್ರಿಯ. ನಿಜಕ್ಕೂ ಒಳ್ಳೆಯ ಸಂಗಾತಿ. ಪ್ರೋತ್ಸಾಹಿಸುವ, ಕಾಳಜಿ ವಹಿಸುವ ಮತ್ತು ಕರುಣೆಯಿಂದ ನೋಡುವ ಇಂಥ ಸಂಗಾತಿಯನ್ನು ಪಡೆಯಲು ಅದೃಷ್ಟವಂತರಾಗಿರಬೇಕು. ನಾವು ಒಟ್ಟಿಗೆ ಪ್ರತೀ ದಿನವೂ ಒಂದು ಸಾಹಸವನ್ನು ಮಾಡುತ್ತಲೇ ಇರುತ್ತೇವೆ. ಭವಿಷ್ಯದಲ್ಲಿ ಇನ್ನೇನೆಲ್ಲ ಅನ್ವೇಷಿಸಲಿದ್ದೇವೆ ಎಂಬುದರ ಬಗ್ಗೆ ನಾನು ಉತ್ಸುಕಳಾಗಿದ್ದೇನೆ. ನಿಮ್ಮ ಜನ್ಮದಿನದಂದು ಗಾಲ್ಫ್ನಲ್ಲಿ ಗೆಲ್ಲಲು ಅವಕಾಶ ಕೊಡುತ್ತೇನೆ’
ಇದನ್ನೂ ಓದಿ : Viral Optical Illusion: ನೀವು ನಿಜಕ್ಕೂ ಬೆಕ್ಕುಪ್ರೇಮಿಯಾ? ಹಾಗಿದ್ದರೆ 5 ಸೆಕೆಂಡಿನಲ್ಲಿ ಬೆಕ್ಕಿನಮರಿ ಹುಡುಕಬಹುದೆ?
17 ಗಂಟೆಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಅನ್ನು ಈತನಕ ಸುಮಾರು 1.4 ಲಕ್ಷ ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ ಅಸ್ಸರ್ಗೆ ಶುಭಹಾರೈಸಿದ್ದಾರೆ. ತುಂಬಾ ಮುದ್ದಾದ ಜೋಡಿ, ನಿಮ್ಮ ದಾಂಪತ್ಯ ಸುಖಮಯವಾಗಿರಲಿ, ನೀವು ಮಲಾಲಾಗೆ ಹೀಗೇ ಪ್ರೋತ್ಸಾಹಿಸಿ… ಅಂತೆಲ್ಲ ಶುಭ ಹಾರೈಸಿದ್ದಾರೆ ಅನೇಕರು.
ಹುಟ್ಟುಹಬ್ಬದ ನಿಮಿತ್ತ ಮಲಾಲಾ ಮತ್ತು ಅಸ್ಸರ್ ಪ್ರವಾಸದಲ್ಲಿದ್ದಾರೆ ಎನ್ನುವುದನ್ನು ಫೋಟೋಗಳ ಮೂಲಕ ತಿಳಿಯಬಹುದು. ನದಿ ತೀರ, ಸರೋವರದ ತಟ, ಗಾಲ್ಫ್ ಮೈದಾನ ಮತ್ತು ನೀಲಾಕಾಶದ ಹಿನ್ನೆಲೆಯಲ್ಲಿ ಇಬ್ಬರ ಫೋಟೋಗಳು ಆಕರ್ಷಕವಾಗಿ ಬಂದಿವೆ. ನೆಟ್ಟಿಗರನೇಕರು ಈ ಜೋಡಿ ಮತ್ತಷ್ಟು ಸಮಾಜೋಪಯೋಗಿ ಕಾರ್ಯಗಳನ್ನು ಮಾಡಲಿಲ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ : Viral Video: ಹೊಗೆ ಹೊಮ್ಮಿಸುವ ಶಿಲೀಂಧ್ರ? ನೆಟ್ಟಿಗರಲ್ಲಿ ಕುತೂಹಲ ಕೆರಳಿಸಿದ ಈ ವಿಡಿಯೋ
ನಿಮ್ಮಿಬ್ಬರ ಜೋಡಿ ಅನುರೂಪವಾಗಿದೆ. ಪರಸ್ಪರ ಗೌರವ ಪ್ರೀತಿಯಿಂದ ನೀವು ಅಂದುಕೊಂಡ ಗುರಿಗಳನ್ನು ತಲುಪುತ್ತೀರಿ ಎಂಬ ಭರವಸೆ ಇದೆ ಎಂದಿದ್ದಾರೆ ನೆಟ್ಟಿಗರು. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ