ಪತ್ನಿಯ ಮರಣದ 70ರ ವೃದ್ಧರೊಬ್ಬರು ಕಳೆದ ಕೆಲ ವರ್ಷಗಳಿಂದ ಒಬ್ಬಂಟಿಯಾಗಿದ್ದಾರೆ. ಇದೀಗ ತನಗೊಂದು ಉತ್ತಮವಾದ ಸಂಗಾತಿಯನ್ನು ಪಡೆಯಲು ಲಕ್ಷ ಲಕ್ಷ ಕೊಟ್ಟು ಜಾಹೀರಾತು ನೀಡಿದ್ದಾರೆ. ಈ ವ್ಯಕ್ತಿಯ ಹೆಸರು ಅಲ್ ಗಿಲ್ಬರ್ಟಿ, ಒಂಟಿತನದಿಂದ ಬೇಸತ್ತಿದ್ದೇನೆ ಮತ್ತು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸ್ವಾರಸ್ಯಕರ ಸಂಗತಿಯೆಂದರೆ ಇವರು ತನ್ನದೇ ಜಾಹಿರಾತುಗಳ ಮೂಲಕ ಹುಡುಗಿಯನ್ನು ಹುಡುಕುತ್ತಿದ್ದು, ಜಾಹೀರಾತಿಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ.
ಮಿರರ್ ವರದಿಯ ಪ್ರಕಾರ, ಗಿಲ್ಬರ್ಟಿ ಅವರ ಫೋಟೋವನ್ನು ರಸ್ತೆಬದಿಯಲ್ಲಿ 20 ಅಡಿ ಎತ್ತರದ ಜಾಹೀರಾತು ಫಲಕದಲ್ಲಿ ಹಾಕಲಾಗಿದೆ, ಅದರ ಮೇಲೆ ಮದುವೆಯಾಗಲು ವಧುವನ್ನು ಹುಡುಕುವುದಾಗಿ ಬರೆಯಲಾಗಿದೆ. ಆದರೆ ಈ ಜಾಹೀರಾತು ನೀಡಿದ ಕೇವಲ ಎರಡು ವಾರಗಳಲ್ಲಿ, ಅವರು 400 ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಇದಲ್ಲದೇ 40-50 ಇಮೇಲ್ಗಳು ಕೂಡ ಬಂದಿದೆ. ಅದರಲ್ಲಿರುವ ಹುಡುಗಿಯರ ಪೈಕಿ ಒಬ್ಬರನ್ನು ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ.
ಗಿಲ್ಬರ್ಟಿ ಅವರು ನಿಷ್ಠಾವಂತ ಮತ್ತು ಪ್ರಾಮಾಣಿಕ ಮತ್ತು ಸರಿಯಾದ ಸಂಗಾತಿಯನ್ನು ಕಂಡುಕೊಂಡರೆ, ಅವರು ಅವಳಿಗಾಗಿ ಅಮೆರಿಕದಲ್ಲಿ ಎಲ್ಲಿಯಾದರೂ ಹೋಗುತ್ತಾರೆ ಎಂದು ಹೇಳುತ್ತಾರೆ. ಅವರು ತಮ್ಮ ಜೀವನದ ಪ್ರೀತಿಯನ್ನು ಕಂಡುಕೊಂಡರೆ, ಅವರು ಬ್ರಿಟನ್‌ಗೆ ಹೋಗುವುದಾಗಿಯೂ ಹೇಳುತ್ತಾರೆ.
ಇದನ್ನೂ ಓದಿ: ಇನ್ಸ್ಟಾಗ್ರಾಮ್ ರೀಲ್ಸ್ ವಿಚಾರವಾಗಿ ನಡು ಬೀದಿಯಲ್ಲೇ ಹೆಣ್ಮಕ್ಕಳ ಬಿಗ್ ಫೈಟ್; ವಿಡಿಯೋ ವೈರಲ್
ಗಿಲ್ಬರ್ಟಿ ಹೇಳುವಂತೆ ನನಗೆ ಸ್ಲಿಮ್, ಬುದ್ಧಿವಂತ, ನಿಷ್ಠಾವಂತ ಮತ್ತು ಪ್ರಾಮಾಣಿಕ ಸಂಗಾತಿ ಬೇಕು. ಆಕೆ ನನ್ನ ಮಾತು ನೋವುಗಳನ್ನು ಕೇಳುವ ಮತ್ತು ಮುಕ್ತ ಮನಸ್ಸಿನಿಂದ ಮಾತನ್ನು ಕೇಳುವ ಸಂಗಾತಿಯನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ. ಸ್ವತಃ ವಿವರಿಸುತ್ತಾ, ನಿವೃತ್ತಿಯ ಆದಾಯವಿದೆ, ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನನ್ನ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಭರವಸೆಯನ್ನು ನೀಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಗಿಲ್ಬರ್ಟಿ ಜಾಹೀರಾತು ಫಲಕದ ಜಾಹೀರಾತುಗಳಿಗಾಗಿ ವಾರದಲ್ಲಿ 320 ಪೌಂಡ್‌ಗಳನ್ನು ಅಂದರೆ ಸುಮಾರು 33 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದರ ಪ್ರಕಾರ ಜಾಹೀರಾತಿಗೆ ಮಾತ್ರ ತಿಂಗಳಿಗೆ ಅಂದಾಜು 1.25 ಲಕ್ಷ ರೂ. ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ