ವೃದ್ಧೆಯ ಬಳಿಯಿದ್ದ ಸ್ಟ್ರಾಬೆರಿ ಹಣ್ಣುಗಳನ್ನು ಖರೀದಿಸಿದ ವ್ಯಕ್ತಿ: ನಂತರ ಆತ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು

| Updated By: Pavitra Bhat Jigalemane

Updated on: Jan 07, 2022 | 5:21 PM

ವ್ಯಕ್ತಿಯೊಬ್ಬ ವೃದ್ಧೆಯ ಬಳಿ ಸ್ಟ್ರಾಬೆರಿ ಹಣ್ಣುಗಳನ್ನು ಕೊಳ್ಳುವ ಸಂದರ್ಭದ ಹೃದಯಸ್ಪರ್ಶಿ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಸದ್ಯ ಎಲ್ಲರ ಗಮನ ಸೆಳೆದಿದೆ.

ವೃದ್ಧೆಯ ಬಳಿಯಿದ್ದ ಸ್ಟ್ರಾಬೆರಿ ಹಣ್ಣುಗಳನ್ನು ಖರೀದಿಸಿದ ವ್ಯಕ್ತಿ: ನಂತರ ಆತ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು
ಸ್ಟ್ರಾಬೆರಿ ಹಣ್ಣುಗಳನ್ನು ಹಿಡಿದ ವೃದ್ಧೆ
Follow us on

ಮಾನವೀಯತೆ ಎನ್ನುವುದು ಪ್ರತೀ ಮನುಷ್ಯನಲ್ಲಿ ಇರಲೇಬೇಕಾದ ಗುಣ. ಬೇರೆಯವರ ಕಷ್ಟಕ್ಕೆ ಸ್ಪಂದಿಸಿ, ಕಷ್ಟದಲ್ಲಿ ನೆರವಾಗಿ ಬದುಕುವುದು ಒಂದು ರೀತಿಯ ನೆಮ್ಮದಿಯ ಜೀವನ. ಅಂತಹ ಬದುಕು ನಿಜಕ್ಕೂ ಅರ್ಥಪೂರ್ಣ ಎನಿಸುತ್ತದೆ. ಕೆಲವರ ವ್ಯಕ್ತಿತ್ವ ಕೂಡ ಅದೇ ರೀತಿ ಇರುತ್ತದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಸಹಾಯಕ್ಕೆ ದೇವರೂ ಮೆಚ್ಚುತ್ತಾನೆ ಎನ್ನುವ ಮಾತಿದೆ. ಅಲ್ಲದೆ ಸಹಾಯ ತೆಗೆದುಕೊಂಡವರ ಮುಖದಲ್ಲಿನ ಖುಷಿಯ ನಗು, ಮುಗ್ಧತೆಯ ಭಾವ ಜೀವನಕ್ಕೆ ಹೊಸ ಹುರುಪು ನೀಡುತ್ತದೆ. ಅಂತಹ ಹೃದಯಸ್ಪರ್ಶಿ ಸನ್ನಿವೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವ್ಯಕ್ತಿಯೊಬ್ಬ ವೃದ್ಧೆಯ ಬಳಿ ಸ್ಟ್ರಾಬೆರಿ ಹಣ್ಣುಗಳನ್ನು ಕೊಳ್ಳುವ ಸಂದರ್ಭದ ಹೃದಯಸ್ಪರ್ಶಿ ವಿಡೀಯೋ ಸದ್ಯ ಎಲ್ಲರ ಗಮನ ಸೆಳೆದಿದೆ.

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸ್ಟ್ರಾಬೆರಿ ಮಾರುತ್ತಿದ್ದ ವೃದ್ಧೆಯ ಬಳಿ ಬಂದು ಹೇಗಿದ್ದೀರಾ? ಸ್ಟ್ರಾಬೆರಿ ಪ್ಯಾಕ್​ ಬೆಲೆ ಎಷ್ಟು ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಆಕೆ ಒಂದು ಬಾಕ್ಸ್​ಗೆ 3 ಡಾಲರ್​ ಎಂದು ಉತ್ತರಿಸುತ್ತಾಳೆ. ಅದನ್ನು ಕೇಳಿ ವ್ಯಕ್ತಿ ಎಲ್ಲಾ ಬಾಕ್ಸ್​​ಗಳನ್ನುನಾನು ಖರೀದಿ ಮಾಡುತ್ತೇನೆ ಎಂದು ಹಣ  ನೀಡುತ್ತಾನೆ. ಆಗ ಆಕೆ ಸ್ಟ್ರಾಬೆರಿ ಹಣ್ಣುಗಳನ್ನು ಆತನಿಗೆ ನೀಡಲು ಬಂದಾಗ ಎಲ್ಲವನ್ನೂ ನೀವೇ ಇಟ್ಟುಕೊಳ್ಳಿ. ಇನ್ನು ಹೆಚ್ಚಿನ ಹಣವನ್ನು ಗಳಿಸಿ.  ನಾನು ನಿಮ್ಮನ್ನು ಬಹಳ ಪ್ರೀತಿಸುತ್ತೇನೆ ಎನ್ನುತ್ತಾನೆ. ಆಗ ಆಕೆಯ ಕಣ್ಣಾಲಿಗಳಲ್ಲಿ ನೀರು ತುಂಬುತ್ತದೆ. ಈ ಹೃದಯ ಸ್ಪರ್ಶಿ ವಿಡಿಯೋವನ್ನು @Pubity ಎನ್ನುವ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋ ಹಂಚಿಕೊಂಡಾಗಿನಿಂದ 43 ಮಿಲಿಯನ್​ಗೂ ಅಧಿಕ ಜನರು ಈ ವೀಡಿಯೋವನ್ನು ವೀಕ್ಷಿಸಿದ್ದು, 2.5 ಮಿಲಿಯನ್​ ಲೈಕ್ಸ್​ಗಳು ಬಂದಿವೆ. ಸಾವಿರಾರು ಜನರು ವ್ಯಕ್ತಿಯ ಮಾನವೀಯ ಗುಣವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Viral Video: ಮುಳುಗುತ್ತಿದ್ದ ನಾಯಿಯನ್ನು ರಕ್ಷಿಸಿದ ಮಾಲೀಕ: ವಿಡಿಯೋ ವೈರಲ್​