ಚಿಪ್ಸ್ ಕವರ್​ನಿಂದ ಹೊದಿಕೆ ತಯಾರಿಸಿ ನಿರಾಶ್ರಿತರಿಗೆ ಹಂಚಿದ 11 ವರ್ಷದ ಬಾಲಕಿ; ಯಶಸ್ಸಿನ ಕಥನ ಇಲ್ಲಿದೆ

ಚಿಪ್ಸ್ ಕವರ್​ನಿಂದ ಹೊದಿಕೆ ತಯಾರಿಸಿ ನಿರಾಶ್ರಿತರಿಗೆ ಹಂಚಿದ 11 ವರ್ಷದ ಬಾಲಕಿ; ಯಶಸ್ಸಿನ ಕಥನ ಇಲ್ಲಿದೆ
ಅಲಿಸ್ಸಾ ಡೀನ್

ಸಾಧನೆಗೆ ವಯಸ್ಸಿನ ಹಂಗಿಲ್ಲ. ಇಲ್ಲೊಬ್ಬಳು 11 ವರ್ಷದ ಬಾಲಕಿ ಚಿಪ್ಸ್ ಕವರ್​ಗಳನ್ನು ಬಳಸಿ ಅದರಿಂದ ಬ್ಲಾಂಕೆಟ್ ತಯಾರಿಸಿದ್ದಾಳೆ. ಅಷ್ಟೇ ಅಲ್ಲ, ಅದನ್ನು ನಿರಾಶ್ರಿತರಿಗೆ ಹಂಚಿದ್ದಾಳೆ.

TV9kannada Web Team

| Edited By: shivaprasad.hs

Jan 08, 2022 | 12:22 PM

ಏನನ್ನಾದರೂ ಸಾಧಿಸಬೇಕು ಎಂಬ ಛಲವಿದ್ದರೆ ವಯಸ್ಸು ಅಡ್ಡಿಯಾಗುವುದೇ ಇಲ್ಲ ಎನ್ನುತ್ತಾರೆ. ಇಲ್ಲೊಬ್ಬಳು 11 ವರ್ಷದ ಬಾಲಕಿ ಇದಕ್ಕೊಂದು ತಾಜಾ ಉದಾಹರಣೆಯಾಗಿದ್ದು, ಎಲ್ಲರ ಮನಗೆದ್ದಿದ್ದಾಳೆ. ಅಷ್ಟಕ್ಕೂ ಈ ಬಾಲಕಿ ಮಾಡಿದ ಸಾಧನೆ ಏನು ಅಂತೀರಾ? ಅಲ್ಲೇ ಇರೋದು ವಿಶೇಷ. ಯಾರಿಗೆ ಚಿಪ್ಸ್ ಇಷ್ಟವಿಲ್ಲ ಹೇಳಿ. ಆದರೆ ಎಲ್ಲರೂ ಚಿಪ್ಸ್ ತಿಂದು ಕವರ್ ಬಿಸಾಡುತ್ತಾರೆ. ಅದೇ ಕವರ್​ನಿಂದ ಹೊದಿಕೆಗಳನ್ನು (ಬ್ಲಾಂಕೆಟ್​) ತಯಾರಿಸಿದ್ದಾಳೆ ಈ ಬಾಲಕಿ ಅಲಿಸ್ಸಾ ಡೀನ್! ಹೌದು. ಇಂಗ್ಲೆಂಡ್ ದೇಶದ ವೇಲ್ಸ್​ನ ಪ್ರೆಸ್​​ಟೈನ್​ನ ಅಲಿಸ್ಸಾ (Alyssa Dean), ಚಿಪ್ಸ್ ಕವರ್​ಗಳನ್ನು ಸಂಗ್ರಹಿಸಿ ಅದರಿಂದ ಬ್ಲಾಂಕೆಟ್ ತಯಾರಿಸಿದ್ದಾರೆ. ಅಷ್ಟೇ ಅಲ್ಲ. ನಿರಾಶ್ರಿತರಾಗಿರುವ ಜನರು ಚಳಿಗಾಲದಲ್ಲಿ ಸುರಕ್ಷಿತವಾಗಿರಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಈ ಹೊದಿಕೆಗಳನ್ನು ತಯಾರಿಸಿ ಅವರಿಗೆ ನೀಡಿದ್ದಾರೆ ಅಲಿಸ್ಸಾ.

ಇಂಗ್ಲೆಂಡ್​ನಲ್ಲಿ ಚಳಿಗಾಲದ ಆರ್ಭಟ ಜೋರು. ಅಲ್ಲಿ ಮನೆಯಿಲ್ಲದ ನಿರಾಶ್ರಿತರಿಗೆ ಚಳಿಗಾಲ ಕಳೆಯುವುದು ಸವಾಲು. ಅಂಥವರಿಗೆ ತನ್ನ ಕೈಲಾದ ಸಹಾಯ ಮಾಡಲು ಮುಂದಾದ ಅಲಿಸ್ಸಾ ಚಿಪ್ಸ್ ಕವರ್​ಗಳಿಂದ ಬ್ಲಾಂಕೆಟ್ ತಯಾರಿಸಿದ್ದಾರೆ. ಒಂದು ಬ್ಲಾಂಕೆಟ್ ತಯಾರಿಸಲು ಸುಮಾರು 44 ಪ್ಯಾಕೆಟ್‌ಗಳು ಬೇಕಾಗುತ್ತವಂತೆ. ಅಲಿಸ್ಸಾಳ ಈ ಕಾರ್ಯಕ್ಕೆ ಅವಳ ಕುಟುಂಬ, ಸ್ನೇಹಿತರು ಎಲ್ಲರೂ ನೆರವಾಗುತ್ತಿದ್ದಾರೆ. ಇದುವರೆಗೆ ಟೋಪಿ, ಗ್ಲೌಸ್, ಸಾಕ್ಸ್ ಸೇರಿದಂತೆ ಸುಮಾರು 80 ಕ್ಕೂ ಅಧಿಕ ಪಾರ್ಸೆಲ್​ಗಳನ್ನು ತಯಾರಿಸಿ ಅಲಿಸ್ಸಾ ಹಂಚಿದ್ದಾಳೆ.

ಪ್ಯಾಕೆಟ್​ಗಳನ್ನು ಗರಿಗರಿಯಾಗುವಂತೆ ಐರನ್ ಮಾಡಲಾಗುತ್ತದೆ. ನಂತರ ಬ್ಲಾಂಕೆಟ್ ತಯಾರಿಸಲಾಗುತ್ತದೆ. ಅಲಿಸ್ಸಾ ತಾಯಿ ಡಾರ್ಲೀನ್ ಚಿಪ್ಸ್ ಪ್ಯಾಕೇಟ್​​ಗಳನ್ನು ಸಂಗ್ರಹಿಸಲು ನೆರವಾಗಿದ್ದಾರೆ. ಅಲಿಸ್ಸಾ ಕಾರ್ಯದ ಕುರಿತು ಮಾತನಾಡಿರುವ ಆಕೆಯ ತಾಯಿ ಡಾರ್ವಿನ್, ‘‘ಅಲಿಸ್ಸಾಗೆ ಬಹಳ ಪರಿಸರ ಪ್ರಜ್ಞೆಯಿದೆ. ಆದ್ದರಿಂದ ಇಂತಹ ಯೋಜನೆಗಳಿಗೆ ಮುಂದಾಗುತ್ತಾಳೆ. ನಾನು ಪ್ಯಾಕೆಟ್​​ಗಳನ್ನು ಸಂಗ್ರಹಿಸಿ ಪೆಟ್ಟಿಗೆಯಲ್ಲಿಡುತ್ತೇನೆ. ಸುಮಾರು 44 ಕವರ್​ಗಳಿಂದ ಒಂದು ಬ್ಲಾಂಕೆಟ್ ತಯಾರಿಸಬಹುದು. ಇದುವರೆಗೆ ಈ ರೀತಿಯ ಹಲವು ಕಿಟ್ ತಯಾರಿಸಿದ್ದೇವೆ’’ ಎಂದು ಹೇಳಿದ್ದಾರೆ.

ಜನರು ತಮ್ಮ ಹಬ್ಬದ ಕೂಟಗಳಿಂದ ಗರಿಗರಿಯಾದ ಪ್ಯಾಕೆಟ್‌ಗಳನ್ನು ಉಳಿಸುವ ಮೂಲಕ ಚಿಕ್ಕ ಹುಡುಗಿಗೆ ಹೆಚ್ಚಿನ ಹೊದಿಕೆಗಳನ್ನು ಮಾಡಲು ಸಹಾಯ ಮಾಡಬಹುದು. ಗರಿಗರಿಯಾದ ಪ್ಯಾಕೆಟ್ ದೇಣಿಗೆಗಳ ಸಂಗ್ರಹಕ್ಕಾಗಿ ಅವರು ತಮ್ಮ ಫೇಸ್‌ಬುಕ್ ಪುಟದ ಮೂಲಕ ಅಲಿಸ್ಸಾ ಮತ್ತು ಡಾರ್ಲೀನ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ.

ಡಾರ್ಲೀನ್ ಬ್ಲಾಂಕೆಟ್ ತಯಾರಿಸುವ ಕುರಿತೂ ಮಾಹಿತಿ ನೀಡಿದ್ದಾರೆ. ‘‘ಒಂದು ಬ್ಲಾಂಕೆಟ್ ತಯಾರಿಸಲು ಸುಮಾರು 45 ನಿಮಿಷ ಬೇಕಾಗುತ್ತದೆ. ಐರನ್ ಮಾಡಿ ನಂತರ ಹವಾಮಾನ ನಿರೋಧಕವಾಘುವಂತೆ ಮಾಡಬೇಕಾಗುತ್ತದೆ. ನಿರಾಶ್ರಿತರಿಗೆ ಕೇವಲ ಬ್ಲಾಂಕೆಟ್ ಮಾತ್ರವಲ್ಲದೇ ಹೆಚ್ಚಿನದನ್ನೂ ಕೊಡಬೇಕು ಎಂಬ ದೃಷ್ಟಿಯಿಂದ ಅದರೊಂದಿಗೆ ಇತರ ವಸ್ತುಗಳನ್ನೂ ನೀಡುತ್ತೇವೆ’’ ಎಂದಿದ್ದಾರೆ.

ಮೊದಲಿಗೆ ಅಲಿಸ್ಸಾ ತಮ್ಮ ಪಾಕೆಟ್ ಮನಿಯನ್ನೇ ಈ ಕಾರ್ಯಕ್ಕೆ ಬಳಸುತ್ತಿದ್ದರಂತೆ. ಪ್ರಸ್ತುತ ಈ ಕಾರ್ಯಕ್ಕಾಗಿ ನಿಧಿ ಸಂಗ್ರಹd ಯೋಜನೆಯನ್ನು ಅವರು ಹೊಂದಿದ್ದಾರೆ. ಅಲಿಸ್ಸಾ ತಯಾರಿಸಿದ ವಸ್ತುಗಳನ್ನು ಡೆನ್‌ಬಿಗ್‌ಶೈರ್ ಮತ್ತು ಕಾನ್ವಿ ಮತ್ತು ಫ್ಲಿಂಟ್‌ಶೈರ್‌ ಊರುಗಳಾದ್ಯಂತ ವಿತರಿಸಲಾಗುತ್ತಿದೆ.

ಜನರೂ ಇದಕ್ಕೆ ಕೈಜೋಡಿಸುವಂತೆ ಮಾಡಲು ಅಲಿಸ್ಸಾ ಒಂದು ವಿಧಾನ ರೂಪಿಸಿದ್ದಾರೆ. ಸಭೆ- ಸಮಾರಂಭಗಳಲ್ಲಿ ಚಿಪ್ಸ್ ಪಾಕೆಟ್​​ಗಳು ಖಾಲಿಯಾದ ತಕ್ಷಣ ಅದನ್ನು ಬಿಸಾಡದೆ ಎತ್ತಿಡಬಹುದು. ಅದನ್ನು ಬ್ಲಾಂಕೆಟ್ ತಯಾರಿಕೆಗೆ ಕೊಡಬಹುದು ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಜನರೊಂದಿಗೆ ಸಂವಹನ ಸುಲಭವಾಗಲು ಮತ್ತು ಅದರಿಂದ ಪ್ಯಾಕೆಟ್ ಸಂಗ್ರಹಣೆಗೆ ಪ್ರತ್ಯೇಕ್ ಫೇಸ್​ಬುಕ್ ಪೇಜ್​ಅನ್ನೂ ಆರಂಭಿಸಿದ್ದಾರೆ. ಅಲಿಸ್ಸಾ ಕಾರ್ಯಕ್ಕೆ ಇದೀಗ ಜಗತ್ತಿನಾದ್ಯಂತ ಜನರು ಶ್ಲಾಘನೆ ನೀಡಿದ್ದಾರೆ.

ಇದನ್ನೂ ಓದಿ:

ಜ.9ರಿಂದ ‘ಗಾನ ಬಜಾನ 2’, ‘ಕಾಮಿಡಿ ಉತ್ಸವ’ ಶುರು; ಕಿರುತೆರೆಯಲ್ಲಿ ಮಸ್ತ್​ ಮನರಂಜನೆ

Israel Defence Forces: ಇದು ಇಸ್ರೇಲ್​ ರಕ್ಷಣಾ ಪಡೆಗಳ ನಿಜವಾದ ಸ್ಟೋರಿ, ಒಮ್ಮೆ ಈ ಫೋಟೋ ನೋಡಿ!

Follow us on

Related Stories

Most Read Stories

Click on your DTH Provider to Add TV9 Kannada