Viral News: 7 ಲಕ್ಷ ರೂ. ಖರ್ಚು ಮಾಡಿ ನಾಯಿಯ ಹುಟ್ಟುಹಬ್ಬ ಆಚರಿಸಿದ ಕುಟುಂಬ!

Viral News: 7 ಲಕ್ಷ ರೂ. ಖರ್ಚು ಮಾಡಿ ನಾಯಿಯ ಹುಟ್ಟುಹಬ್ಬ ಆಚರಿಸಿದ ಕುಟುಂಬ!
ನಾಯಿಯ ಹುಟ್ಟುಹಬ್ಬ

Trending News: ಅಹಮದಾಬಾದ್‌ನ ವ್ಯಕ್ತಿಯೊಬ್ಬ ತಮ್ಮ ಮನೆಯ ಅಬ್ಬಿ ಎಂಬ ನಾಯಿಗೆ ಅದ್ದೂರಿಯಾಗಿ ಹುಟ್ಟುಹಬ್ಬದ ಪಾರ್ಟಿಯನ್ನು ಏರ್ಪಡಿಸಿದ್ದಾನೆ. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

TV9kannada Web Team

| Edited By: Sushma Chakre

Jan 08, 2022 | 1:53 PM

ಕೆಲವರಿಗೆ ಸಾಕುಪ್ರಾಣಿಗಳು ಕೇವಲ ಪ್ರಾಣಿಗಳಲ್ಲ, ಅವರು ಆ ಕುಟುಂಬದ ಸದಸ್ಯರೇ ಆಗಿರುತ್ತವೆ. ಮನೆಯವರ ಹುಟ್ಟುಹಬ್ಬವನ್ನು ಆಚರಿಸಲು ಜನರು ಏನೇನೋ ಪ್ಲಾನ್ ಮಾಡುತ್ತಾರೆ, ಅದಕ್ಕೆಂದು ಲಕ್ಷಾಂತರ ರೂ. ಖರ್ಚು ಮಾಡುವವರೂ ಇದ್ದಾರೆ. ಆದರೆ, ಇಲ್ಲೊಬ್ಬ ಶ್ವಾನಪ್ರಿಯ ತನ್ನ ಮುದ್ದಿನ ನಾಯಿಯ ಹುಟ್ಟುಹಬ್ಬಕ್ಕೆ ಬರೋಬ್ಬರಿ 7 ಲಕ್ಷ ರೂ. ಖರ್ಚು ಮಾಡಿದ್ದಾನೆ. ಅಹಮದಾಬಾದ್‌ನ ವ್ಯಕ್ತಿಯೊಬ್ಬ ತಮ್ಮ ಮನೆಯ ಅಬ್ಬಿ ಎಂಬ ನಾಯಿಗೆ ಅದ್ದೂರಿಯಾಗಿ ಹುಟ್ಟುಹಬ್ಬದ ಪಾರ್ಟಿಯನ್ನು ಏರ್ಪಡಿಸಿದ್ದಾನೆ. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಜರಾತ್‌ನ ಅಹಮದಾಬಾದ್‌ನ ನಿಕೋಲ್ ಪ್ರದೇಶದಲ್ಲಿ ಅಬ್ಬಿ ಎಂಬ ಈ ಮುದ್ದಾದ ನಾಯಿಯ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನಾಯಿಯ ಹುಟ್ಟುಹಬ್ಬದಂದು ಇಲ್ಲಿಗೆ ಬಂದವರೆಲ್ಲರೂ ಆಶ್ಚರ್ಯಚಕಿತರಾಗಿದ್ದರು. ಮಧುಬನ್ ಗ್ರೀನ್‌ನಲ್ಲಿ ದೊಡ್ಡ ಪ್ಲಾಟ್ ಅನ್ನು ಪಾರ್ಟಿಗಾಗಿ ಕಾಯ್ದಿರಿಸಲಾಗಿತ್ತು. ನಾಯಿಯನ್ನು ಸುಂದರವಾಗಿ ಅಲಂಕರಿಸಿ, ಅಲ್ಲಲ್ಲಿ ನಾಯಿಯ ಕಟೌಟ್​ಗಳನ್ನು ಹಾಕಿ, ಸುಂದರವಾದ ಬೃಹತ್ ಕೇಕ್ ತರಿಸಿ ಅಬ್ಬಿಯ ಹುಟ್ಟುಹಬ್ಬ ಆಚರಿಸಲಾಯಿತು.

ನಾಯಿಗಳ ಪಾರ್ಟಿಗೆ ಹಲವಾರು ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಆ ವಾತಾವರಣವು ನಿಜವಾಗಿಯೂ ಅದ್ದೂರಿ ಮತ್ತು ಭವ್ಯದಿಂದ ಕೂಡಿತ್ತು. ನಾಯಿಯ ಹುಟ್ಟುಹಬ್ಬಕ್ಕೆ ಇಷ್ಟೆಲ್ಲ ವ್ಯವಸ್ಥೆಗಳನ್ನು ಮಾಡಿರುವುದನ್ನು ಕಂಡು ಅನೇಕರು ಆಶ್ಚರ್ಯಚಕಿತರಾಗಿದ್ದಾರೆ. ಹುಟ್ಟುಹಬ್ಬದ ಪಾರ್ಟಿಗಾಗಿ ಅಬ್ಬಿಗೆ ಸ್ಕಾರ್ಫ್​ ಹಾಗೂ ಕಪ್ಪು ಉಡುಗೆಯನ್ನು ಹಾಕಲಾಗಿತ್ತು.

ಗುಜರಾತ್‌ನಲ್ಲಿ ವರ್ಷದ ಆರಂಭದಿಂದಲೂ ಕೊರೊನಾ ಪ್ರಕರಣಗಳಲ್ಲಿ ನಿರಂತರ ಏರಿಕೆ ದಾಖಲಾಗಿದೆ. ಹಲವಾರು ಮಾರ್ಗಸೂಚಿಗಳ ಜೊತೆಗೆ, ರಾತ್ರಿ ಕರ್ಫ್ಯೂ ಅವಧಿಯನ್ನು ರಾಜ್ಯದಲ್ಲಿ ಒಂದು ಗಂಟೆ ಹೆಚ್ಚಿಸಲಾಗಿದೆ. ಪಾರ್ಟಿಯ ಫೋಟೋಗಳನ್ನು ಪರಿಶೀಲಿಸಿದ ನಂತರ, ಹೆಚ್ಚಿನ ಅತಿಥಿಗಳು ಮಾಸ್ಕ್​ಗಳನ್ನು ಧರಿಸಿರಲಿಲ್ಲ ಎಂದು ಪೊಲೀಸರಿಗೆ ಗೊತ್ತಾಗಿತ್ತು.

ಇದನ್ನೂ ಓದಿ: Viral Video: ಬೀದಿ ಪಾಲಾಗಿ ಫುಟ್​ಪಾತ್​ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತಬ್ಬಿಕೊಂಡ ನಾಯಿ; ವಿಡಿಯೋ ವೈರಲ್

Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada