Viral Story: ಬುಟ್ಟಿಗಟ್ಟಲೆ ನಾಣ್ಯಗಳನ್ನು ನೀಡಿ ಸ್ಕೂಟರ್​ ಖರೀದಿಸಿದ ವ್ಯಕ್ತಿ

| Updated By: Pavitra Bhat Jigalemane

Updated on: Feb 18, 2022 | 2:48 PM

ಬುಟ್ಟಿಗಟ್ಟಲೆ ನಾಣ್ಯಗಳನ್ನು ನೀಡಿ ಅಸ್ಸಾಂನ ವ್ಯಕ್ತಿಯೊಬ್ಬರು ಸ್ಕೂಟರ್​ ಖರೀದಿಸಿದ್ದಾರೆ. ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Story: ಬುಟ್ಟಿಗಟ್ಟಲೆ ನಾಣ್ಯಗಳನ್ನು ನೀಡಿ ಸ್ಕೂಟರ್​ ಖರೀದಿಸಿದ ವ್ಯಕ್ತಿ
ಸ್ಕೂಟರ್​
Follow us on

ಹನಿ ಹನಿ ಕೂಡಿದರೆ ಹಳ್ಳ ಎನ್ನುವ  ಮಾತು ಎಲ್ಲೆಡೆ ಪರಿಚಿತ. ಇಲ್ಲೊಂದು ಘಟನೆ ಅದನ್ನು ಮತ್ತೆ ಸಾಬೀತುಪಡಿಸಿದೆ.  ಪುಟ್ಟ ಅಂಗಡಿಯ ಮಾಲೀಕರೊಬ್ಬರು ತನ್ನ ದುಡಿಮೆಯ ಒಂದೊಂದು ರೂಪಾಯಿ ಹಣವನ್ನೂ ಕೂಡಿಸಿಟ್ಟು ಸ್ಕೂಟರ್ ​(Scooter) ಖರೀದಿಸಿದ್ದಾರೆ.  ಬ್ರಾಂಡ್​ ಮೊಬಿಲಿಟಿ ಸ್ಕೂಟರ್​ಅನ್ನು ಅವರು ಖರೀದಿಸಿದ್ದಾರೆ. ಅದು ಹೇಗೆ ಎಂದರೆ ಎಲ್ಲವೂ ನಾಣ್ಯಗಳೇ (Coins)ಆಗಿವೆ. ಹೌದು, ಬುಟ್ಟಿಯಲ್ಲಿ ಚಿಲ್ಲರೆಯನ್ನು ತೆಗೆದುಕೊಂಡು ಹೋಗಿ ಶೋರೂಮ್​ಗೆ ನೀಡಿ ಗಾಡಿಯನ್ನು ಖರೀದಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಈ ಘಟನೆ ಅಸ್ಸಾಂನಲ್ಲಿ(Assam) ನಡೆದಿದೆ.

ಈ ಕುರಿತು ಪೇಸ್ಬುಕ್​ ವೋಲ್ಗ್​ ಮಾಡುವ ಹಿರಾಕ್​ ಜೆ ದಾಸ್​ ಎನ್ನುವವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ,  ಕನಸನ್ನು ನನಸಾಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಅದು ಸಣ್ಣ ಸಣ್ಣ ಉಳಿತಾಯದಿಂದಲೂ ಸಾಧ್ಯವಾಗುತ್ತದೆ ಎಂದು ಕ್ಯಾಪ್ಷನ್​ ನೀಡಲಾಗಿದೆ.  ಯುಟ್ಯೂಬ್​ನಲ್ಲೂ ಇದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ನಾಣ್ಯಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಬಂದು ಅದನ್ನು ಬುಟ್ಟಿಗೆ ಹಾಕಿ ನಂತರ ಅದನ್ನು ಎಣಿಸುವುದನ್ನು ಕಾಣಬಹದು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.


ಎಷ್ಟೋ ಜನರಿಗೆ ಸ್ವಂತ ಹಣದಲ್ಲಿ ವಾಹನವನ್ನು ಖರೀದಿಸಬೇಕು ಎನ್ನುವ ಆಸೆ ಇರುತ್ತದೆ. ಆದರೆ ಅದು ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ಇಲ್ಲಿ ಅಸ್ಸಾಂನ ಮಧ್ಯಮ ವರ್ಗದ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಸಂಪಾದನೆಯನ್ನು ಉಳಿಸಿ ಸ್ವಂತ ಸ್ಕೂಟಿಯನ್ನು ಖರೀದಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ. ಕನಸನ್ನು ಕಾಣುವುದು ಸುಲಭ. ಅದನ್ನು ಈಡೇರಿಸಿಕೊಳ್ಳಲು ಕಷ್ಟಪಟ್ಟರೆ ಕನಸನ್ನು ನನಸಾಗಿಸಿಕೊಳ್ಳಬಹುದು ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

93 ಮಿಲಿಯನ್​ ವರ್ಷಗಳ ಹಿಂದಿನ ಮೊಸಳೆಯ ಪಳಯುಳಿಕೆಯ ಹೊಟ್ಟೆಯಲ್ಲಿ ಡೈನೋಸರ್​ ಮರಿ ಪತ್ತೆ

Published On - 2:41 pm, Fri, 18 February 22