ಹುಟ್ಟುಹಬ್ಬ ಅಂದರೆ ಸಡಗರ ಸಂಭ್ರಮ. ಪ್ರತಿ ವರ್ಷದ ಹುಟ್ಟು ಹಬ್ಬದ ದಿನದಂದು ಏನಾದರೂ ಹೊಸದನ್ನು ಮಾಡಲು ಕೆಲವರು ಇಷ್ಟಪಡುತ್ತಾರೆ. ಅದೇ ರೀತಿ ಇಲ್ಲೋರ್ವರು ತಮ್ಮ ಬರ್ಥ್ ಡೇ ದಿನ ಬರೋಬ್ಬರಿ 550 ಕೇಕ್ಗಳನ್ನು ಕತ್ತರಿಸಿ ಸಂಭ್ರಮಿಸಿದ್ದಾರೆ. ಸುತ್ತಲೂ ಜನ ಸಮೂಹ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ.
ಮುಂಬೈನ ವ್ಯಕ್ತಿ ಟೇಬಲ್ ಮೇಲೆ ವಿವಿಧ ಬಗೆಯ 550 ಕೇಕ್ಗಳನ್ನು ಇಟ್ಟು ಏಕಕಾಲದಲ್ಲಿ ಕತ್ತರಿಸಿದ್ದಾರೆ. ವಿವಿಧ ಬಣ್ಣದ, ವಿವಿಧ ಹೂವಿನ ಚಿತ್ರಗಳಿರುವ ಕಲರ್ಫುಲ್ ಕೇಕ್ಗಳನ್ನು ಮುಂಬೈ ವ್ಯಕ್ತಿ ಕತ್ತರಿಸಿದ್ದಾರೆ. ಈ ಸಂಭ್ರಮದಲ್ಲಿ ಸುತ್ತಲೂ ಜನಸಮೂಹ ಸೇರಿದ್ದು ಈ ವಿಶಿಷ್ಟ ಹುಟ್ಟುಹಬ್ಬ ಆಚರಣೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಜೀ ನ್ಯೂಸ್ ಈ ಕುರಿತಾಗಿ ವರದಿ ಮಾಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸುತ್ತಲೂ ಜನಸಮೂಹ ಸೇರಿದ್ದಾರೆ, ಆದರೆ ಯಾರೂ ಕೂಡಾ ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಯಾರೊಬ್ಬರೂ ಕೊವಿಡ್ ರೂಲ್ಸ್ಗಳನ್ನು ಪಾಲಿಸಿಲ್ಲ ಎಂಬ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯ ಪೊಲೀಸರಿಗೆ ಒತ್ತಾಯಿಸಿದ್ದಾರೆ.
मुंबई के कांदिवली पश्चिम स्टेशन के पास एक शख्स ने एक साथ 550 केक काटकर अपना जन्मदिन मनाया, बर्थडे में लोगो ने कोरोना नियमों की उड़ाई धज्जियां. अब यह वीडियो सोशल मीडिया पर वायरल हो रहा है.#ViralVideo #Mumbai
अन्य Videos यहां देखें – https://t.co/ZoADfwSi4S pic.twitter.com/wEQzLan2Kr
— Zee News (@ZeeNews) October 13, 2021
ಇದನ್ನೂ ಓದಿ:
Viral Video: ತಲೆ ಕೂದಲಿನಲ್ಲಿಯೇ ವಾಹನವನ್ನು ಎಳೆದು ತಂದ ಯುವತಿ! ಶಾಕಿಂಗ್ ವಿಡಿಯೋ ವೈರಲ್