Viral Video : ಸುರಿಯುವ ಮಳೆಯಲ್ಲಿಯೂ ‘ಅರ್ಥ’ಪೂರ್ಣ ಮಾರ್ಗ ಕಂಡುಕೊಂಡ ಈ ವ್ಯಕ್ತಿ

| Updated By: ಶ್ರೀದೇವಿ ಕಳಸದ

Updated on: Sep 17, 2022 | 1:10 PM

Earning Sense : ಮಳೆ ಬರುತ್ತಿದೆ ಎಂದು ಎಲ್ಲೋ ಒಂದು ಕಡೆ ಕೈಕಟ್ಟಿ ನಿಲ್ಲಬಹುದಿತ್ತಿಲ್ಲವೆ? ಆದರೆ ಹಾಗೆ ಮಾಡದೆ ಆ ಸಮಯವನ್ನೂ ಹಣಗಳಿಕೆಯ ಉಪಾಯದಂತೆ ಪರಿವರ್ತಿಸಿಕೊಂಡಿದ್ದಾರೆ ಈ ವ್ಯಕ್ತಿ. ವಿಡಿಯೋ ನೋಡಿ.

Viral Video : ಸುರಿಯುವ ಮಳೆಯಲ್ಲಿಯೂ ‘ಅರ್ಥ’ಪೂರ್ಣ ಮಾರ್ಗ ಕಂಡುಕೊಂಡ ಈ ವ್ಯಕ್ತಿ
ಹೇಗಿದೆ ಈ ಉಪಾಯ?
Follow us on

Viral Video : ಇತ್ತೀಚೆಗೆ ಬೆಂಗಳೂರು ಮಳೆಯಿಂದಾಗಿ ಜಲಾವೃತಗೊಂಡಾಗ ಜನರು ಬೀದಿಯಿಂದ ಬೀದಿಗೆ ಸಂಚರಿಸಲು ಟ್ರ್ಯಾಕ್ಟರ್, ಬುಲ್ಡೋಜರ್​ಗಳ ಮೊರೆ ಹೋಗಿರುವ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೀರಿ. ಮಳೆ ಎನ್ನುವುದು ಏನೆಲ್ಲ ಅಪಾಯ, ಉಪಾಯಕ್ಕೆ ನಾಂದಿ ಹಾಡುತ್ತದೆ ಅಲ್ಲವೆ? ಈಗಿಲ್ಲಿ ಈ ವಿಡಿಯೋದಲ್ಲಿರುವ ವ್ಯಕ್ತಿ, ನಿಂತಲ್ಲೇ ಹೀಗೊಂದು ‘ಅರ್ಥ’ಪೂರ್ಣ ಉಪಾಯ ಕಂಡುಕೊಂಡಿದ್ದಾರೆ. ಪಾದಚಾರಿ ಮಹಿಳೆಯರಿಬ್ಬರು ರಸ್ತೆ ದಾಟಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ವ್ಯಕ್ತಿ ಮರದಗಾಡಿಯೊಂದನ್ನು ತರುತ್ತಾರೆ. ಆಗ ಅವರಿಬ್ಬರೂ ಅದರ ಮೇಲೆ ಏರಿ ನಿಲ್ಲುತ್ತಾರೆ. ವ್ಯಕ್ತಿ ಗಾಡಿಯನ್ನು ತಳ್ಳಿ ಅವರನ್ನು ರಸ್ತೆ ದಾಟಿಸಿ, ಅವರಿಂದ ಹಣ ಪಡೆಯುತ್ತಾರೆ. ಇದನ್ನು ನೋಡಿದ ಉಳಿದ ಪಾದಚಾರಿಗಳೂ ಈ ವ್ಯಕ್ತಿಯ ಸಹಾಯ ಪಡೆಯುತ್ತಾ ಹೋಗುತ್ತಾರೆ; ಅನಿವಾರ್ಯತೆಗೆ ತಕ್ಕಂತೆ ಆಲೋಚಿಸುತ್ತಾ ಹೋದಾಗ ಇಂಥ ಕ್ರಿಯಾತ್ಮಕ ಉಪಾಯಗಳು ಖಂಡಿತ ಹೊಳೆಯುತ್ತವೆ ಎನ್ನುವುದಕ್ಕೆ ಮಾದರಿ ಈ ವಿಡಿಯೋ.

ಗುರುವಾರದಂದು ಸಾಮಾಜಿಕ ಮಾಧ್ಯಮ, ರೆಡ್ಡಿಟ್‌ನಲ್ಲಿ BAlfonzo ಎಂಬ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಹರಿಯುವ ನೀರಿನಲ್ಲಿ ಬರಿಗಾಲಿನಲ್ಲಿ ಓಡುತ್ತ ಪಾದಚಾರಿಗಳನ್ನು ಆ ಬದಿಗೆ ತಲುಪಿಸುತ್ತಾರೆ ಈ ವ್ಯಕ್ತಿ. ಪಡೆದ ಹಣವನ್ನಿಟ್ಟುಕೊಳ್ಳಲು ಈತ ಮಾಡಿದ ಉಪಾಯ ಗಮನಿಸಿದಿರಾ?; ಪ್ಲಾಸ್ಟಿಕ್ ಬಾಟಲಿ!

ಇದನ್ನೂ ಓದಿ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಒಂದು ದಿನದಲ್ಲಿ 55,000 ಕ್ಕೂ ಹೆಚ್ಚು ಮತಗಳನ್ನು ಪಡೆದಿದೆ. 800 ಕ್ಕೂ ಹೆಚ್ಚು ರೆಡ್ಡಿಟ್ ಖಾತೆದಾರರು ಈ ವಿಡಿಯೋ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಾರೆ.

‘ವ್ಯವಹಾರದ ಮೊದಲ ನಿಯಮ; ಅಗತ್ಯವನ್ನು ಕಂಡುಕೊಂಡು ಅದರಲ್ಲಿ ತೊಡಗಿಕೊಳ್ಳಿ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ಧಾರೆ. ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು, ‘ವ್ಯವಹಾರದ ಎರಡನೇ ನಿಯಮ; ಸಮಸ್ಯೆಯನ್ನು ಸೃಷ್ಟಿಸಿ, ಪರಿಹಾರವನ್ನು ಮಾರಾಟರೂಪಕ್ಕೆ ತಿರುಗಿಸಿಕೊಳ್ಳಿ (ಈ ಪರಿಸ್ಥಿತಿಗೆ ಇದು ಅನ್ವಯಿಸುವುದಿಲ್ಲ)’ ಎಂದಿದ್ದಾರೆ. ಹೀಗೆ ಅನೇಕರು ವ್ಯವಹಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಪ್ರತಿಕ್ರಿಯೆಗಳ ಮೂಲಕ ಪ್ರಸ್ತಾಪಿಸುತ್ತಾ ಚರ್ಚಿಸಿರುವುದು ಆಸಕ್ತಿಕರವಾಗಿದೆ.

ಮೈಚಳಿಬಿಟ್ಟರೆ ಬದುಕಲು ನೂರೆಂಟು ಉಪಾಯಗಳು!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:05 pm, Sat, 17 September 22