10 ನಿಮಿಷದಲ್ಲಿ ಥಾಲಿ ಊಟವನ್ನು ತಿಂದು 5 ಸಾವಿರ ಬಹುಮಾನ ಗೆದ್ದ ಯುವಕ; ನಂತರ ಮಾಡಿದ್ದೇನು ಗೊತ್ತಾ?

| Updated By: Pavitra Bhat Jigalemane

Updated on: Jan 30, 2022 | 5:16 PM

ಇಲ್ಲೊಬ್ಬ ಫುಡ್ ಬ್ಲಾಗರ್ ರಾಜಸ್ಥಾನ ಥಾಲಿ ಊಟವನ್ನು 10 ನಿಮಿಷದಲ್ಲಿ ತಿಂದು ಮುಗಿಸಿ 5,100 ರೂ ಬಹುಮಾನ ಗೆದ್ದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

10 ನಿಮಿಷದಲ್ಲಿ ಥಾಲಿ ಊಟವನ್ನು ತಿಂದು 5 ಸಾವಿರ ಬಹುಮಾನ ಗೆದ್ದ ಯುವಕ; ನಂತರ ಮಾಡಿದ್ದೇನು ಗೊತ್ತಾ?
ಥಾಲಿ ತಿಂದು ಬಹುಮಾನ ಗೆದ್ದ ವ್ಯಕ್ತಿ
Follow us on

ಇಷ್ಟು ದಿನ ಹೊಸ ಹೊಸ ರುಚಿಯ ತಿನಿಸನ್ನು ತಿಂದು ಫುಡ್​ ಬ್ಲಾಗರ್​ಗಳು ನೆಟ್ಟಿಗರಿಗೆ ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿತ್ತು. ಇಲ್ಲೊಬ್ಬ ಫುಡ್ ಬ್ಲಾಗರ್ (Food Blogger)​ ರಾಜಸ್ಥಾನ ಥಾಲಿ (Thali) ಊಟವನ್ನು 10 ನಿಮಿಷದಲ್ಲಿ ತಿಂದು ಮುಗಿಸಿ 5,100 ರೂ ಬಹುಮಾನ ಗೆದ್ದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದೆಹಲಿ (Dehli)ಯ ಚಾಪ್​ ಪ್ಯಾಕ್ಟರಿ (Chaap Factory )ಎನ್ನುವ ಹೊಟೇಲನಲ್ಲಿ ವಿಡಿಯೋವನ್ನು ಶೂಟ್​ ಮಾಡಲಾಗಿದೆ. ಈ ವಿಡಿಯೊವನ್ನು ಲೈವ್​ ಲಿಮಿಟ್​ಲೆಸ್​ ಎನ್ನುವ ಪೇಸ್ಬುಕ್​ ಖಾತೆ ಹಂಚಿಕೊಂಡಿದೆ.

ವಿಡಿಯೋದಲ್ಲಿ ಸ್ಪರ್ಧೆಯನ್ನು ವಿವರಿಸಲಾಗಿದೆ. ಸಸ್ಯಾಹಾರಿ ಹೊಟೇಲ್​ನಲ್ಲಿ 499 ರೂಗಳ ಥಾಲಿಯನ್ನು ನೀಡಿ ಅದನ್ನು 10 ನಿಮಿಷದಲ್ಲಿ ತಿಂದು ಮುಗಿಸಿದವರೆಗೆ ಬಹುಮಾನವನ್ನು ನೀಡುವುದಾಗಿ ಘೋಷಿಸಲಾಗಿತ್ತು. ಥಾಲಿಯಲ್ಲಿ ಬೆಣ್ಣೆ ಸವರಿದ ಬಾಹುಬಲಿ ನಾನ್​ ಅನ್ನು ನೀಡಲಾಗಿತ್ತು. ಇದರಲ್ಲಿ ರುಮಾಲ್​ ರೋಟಿ, ವೆಜಿಟೇರಿಯನ್​ ಚಾಪ್​, ದಾಲ್​ ಮತ್ತು ಪನ್ನೀರ್​ಅನ್ನು ನೀಡಲಾಗಿತ್ತು. ವ್ಯಕ್ತಿಯೊಬ್ಬ ಈ ಚಾಲೆಂಜ್​ ಅನ್ನು ಸ್ವೀಕರಿಸಿ 10 ನಿಮಿಷದಲ್ಲಿ ಥಾಲಿಯನ್ನು ಸಂಪೂರ್ಣವಾಗಿ ತಿಂದು ಮುಗಿಸಿ 5,100ರೂ ಬಹುಮಾನ ಗೆದ್ದಿದ್ದನು. ಬಳಿಕ ಆತ ಮಾಡಿದ ಕೆಲಸ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಹೌದು, ಥಾಲಿಯನ್ನು ತಿಂದ ಬಳಿಕ ಆತ ಬಹುಮಾನವಾಗಿ ಗೆದ್ದ ಹಣವನ್ನು ಅದೇ ಅಂಗಡಿಯ ಮಾಲೀಕನಿಗೆ ವಾಪಸ್​ ನೀಡಿದ್ದಾನೆ. ತಿನಿಸು ರುಚಿಕರವಾಗಿತ್ತು ಎಂದು ಆತ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಜ.11ರಂದು ವಿಡಿಯೋ ಹಂಚಕೊಳ್ಳಲಾಗಿದ್ದು ಈವರೆಗೆ 3.2 ಮಿಲಿಯನ್​ ವೀಕ್ಷಣೆ ಪಡೆದಿದದೆ. ವ್ಯಕ್ತಿಯು ಹಣವನ್ನು ಹಿಂದಿರುಗಿಸಿದ್ದನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಪರ್ಧೆಯನ್ನು ಗೆದ್ದಿದ್ದಕ್ಕೆ ಅಭಿನಂದಿಸಿದ್ದಾರೆ.

ಇದನ್ನೂ ಓದಿ:

ಗುಜರಿಯಿಂದ ₹ 500 ಕೊಟ್ಟು ಖರೀದಿಸಿದ್ದ ಕುರ್ಚಿ ಹರಾಜಾಗಿದ್ದು ಬರೋಬ್ಬರಿ ₹ 16 ಲಕ್ಷಕ್ಕೆ! ಅಂಥದ್ದೇನಿತ್ತು ಅದರಲ್ಲಿ?

Published On - 5:13 pm, Sun, 30 January 22