Viral Video; ಬ್ಯಾಡ್ಮಿಂಟನ್ ಆಡುವ ರೊಬೋಟ್; ಆಟಗಾರರನ್ನೇ ಮೀರಿಸುವ ಜಾಣ್ಮೆ ಈ ರೊಬೋಟ್ನದ್ದು
ಗುಜರಾತ್ ಸೈನ್ಸ್ ಸಿಟಿಯಲ್ಲಿ ಬ್ಯಾಡ್ಮಿಂಟನ್ ಆಡುವ ರೊಬೋಟ್ ಒಂದನ್ನು ತಯಾರಿಸಲಾಗಿದೆ. ರೊಬೋಟ್ ಬ್ಯಾಡ್ಮಿಂಟನ್ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತಂತ್ರಜ್ಞಾನ (Technology) ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತವೆ. ಮಾನವನ ಕೆಲಸವನ್ನು ಸುಲಭ ಮಾಡಲು ಇಷ್ಟು ದಿನ ಸಾಕಷ್ಟು ಆಧುನಿಕ ಉಪಕರಣಗಳು ಆವಿಷ್ಕಾರಗೊಂಡಿದೆ. ಇತ್ತೀಚೆಗಂತೂ ಅಡುಗೆ ಮಾಡುವ, ಸರ್ವಿಂಗ್ ಮಾಡುವ ರೋಬೋಟ್ಗಳೂ ತಯಾರಾಗಿವೆ. ಇವು ಮನುಷ್ಯನ ಬದುಕನ್ನು ದಿನದಿಂದ ದಿನಕ್ಕೆ ಸರಳಗೊಳಿಸುತ್ತಿವೆ. ಇದೀಗ ಗುಜರಾತ್ ಸೈನ್ಸ್ ಸಿಟಿಯಲ್ಲಿ ಬ್ಯಾಡ್ಮಿಂಟನ್ ಆಡುವ ರೊಬೋಟ್ (Robot) ಒಂದನ್ನು ತಯಾರಿಸಲಾಗಿದೆ. ಆಟವಾಡಲು ಶಕ್ತಿ, ತಾಳ್ಮೆ, ಜಾಣ್ಮೆ ಎಲ್ಲವೂ ಬೇಕು ಎನ್ನುವುದು ಇಷ್ಟು ದಿನದ ವ್ಯಾಖ್ಯಾನವಾಗಿತ್ತು. ಆದರೆ ಈಗ ರೊಬೋಟ್ ಎಲ್ಲವನ್ನೂ ಬದಿಗೊತ್ತಿ ಕೃತಕ ಬುದ್ದಿಯ (Artificial Intelligence, )ಮೂಲಕವೂ ಕೂಡ ಆಟವನ್ನು ಆಡಬಹುದು ಎಂದು ತೊರಿಸಿಕೊಟ್ಟಿದೆ. ಸದ್ಯ ರೊಬೋಟ್ ಬ್ಯಾಡ್ಮಿಂಟನ್ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
View this post on Instagram
ಅಹಮದಾಬಾದ್ನಲ್ಲಿ ಗುಜರಾತ್ ಸೈನ್ಸ್ ಸಿಟಿಯಲ್ಲಿ ತಯಾರಿಸಿದ ರೊಬೋಟ್ ಬ್ಯಾಡ್ಮಿಂಟನ್ ಆಡುವುದನ್ನು ಚಿತ್ರೀಕರಣ ಮಾಡಲಾಗಿದೆ. ಇದರ ವಿಡಿಯೋ ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಒಂದು ಕಡೆ ಆಟಗಾರ ನಿಂತಿರುತ್ತಾನೆ ಇನ್ನೊಂದು ಕಡೆ ರೊಬೋಟ್ ನಿಂತಿರುತ್ತದೆ. ಆಟಗಾರ ಕೊಟ್ಟ ಶಾಟ್ಗೆ ರೊಬೋಟ್ ಕೂಡ ಸರಿಯಾಗಿ ಶಾಟ್ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದು. ನೆಟ್ಟಿಗರು ವಿಡಿಯೋ ನೋಡಿ ಅಚ್ಚರಿಪಟ್ಟಿದ್ದಾರೆ. ಕೆಲವರು ಸ್ನೇಹಿತರಿಲ್ಲದ ವ್ಯಕ್ತಿಗಳಿಗೆ ಈ ರೊಬೋಟ್ ಒಳ್ಳೆಯ ಸ್ನೇಹಿತನಾಗಿ ಬ್ಯಾಡ್ಮಿಂಟನ್ಗೆ ಜತೆಯಾಗಲಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಮೊದಲು ಗುಜರಾತ್ನ ಸೈನ್ಸ್ ಸಿಟಿ ರೊಬೊಟ್ನ ಡೆಮೋ ವಿಡಿಯೊವನ್ನು ಯುಟ್ಯೂಬ್ನಲ್ಲಿ ಹಂಚಿಕೊಂಡಿತ್ತು. 1 ನಿಮಿಷದ ವಿಡಿಯೋದಲ್ಲಿ ಮಾನವ ಮತ್ತು ರೊಬೋಟ್ ನಡುವಿನ ಪಂದ್ಯವನ್ನು ಹೇಗೆ ಆಯೋಜಿಸಬಹುದು ಎನ್ನುವುದನ್ನು ವಿವರಿಸಲಾಗಿದೆ. ರೊಬೋಟ್ ತನ್ನ ಎಲೆಕ್ಟ್ರಾನಿಕ್ ಕಣ್ಣುಗಳಿಂದ ಶೆಟಲ್ಕಾಕ್ ಅನ್ನು ಗುರುತಿಸುತ್ತದೆ. ಸೆನ್ಸಾರ್ ಮೂಲಕ ಕ್ರೀಡಾಂಗಣದ ಸುತ್ತ ತಿರುಗುತ್ತದೆ ಎಂದು ಗುಜರಾತ್ನ ಸೈನ್ಸ್ ಸಿಟಿ ತಿಳಿಸಿದೆ.
ಇದನ್ನೂ ಓದಿ: