ಮ್ಯಾಗಿ ಪರೋಟಾ ನೋಡಿ ಹೀಗೂ ಮಾಡಬಹುದಾ ಎಂದ ನೆಟ್ಟಿಗರು; ವಿಡಿಯೋ ವೈರಲ್​​

ಮ್ಯಾಗಿ ಪರೋಟಾ ನೋಡಿ ಹೀಗೂ ಮಾಡಬಹುದಾ ಎಂದ ನೆಟ್ಟಿಗರು; ವಿಡಿಯೋ ವೈರಲ್​​
ಮ್ಯಾಗಿ ಪರೋಟಾ

ಇಂದೋರ್​ನಲ್ಲಿ  ಮ್ಯಾಗಿ ಪರೋಟಾವನ್ನು ಹೊಸ ತಿನಿಸನ್ನು ತಯಾರಿಸಲಾಗಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ವಿಡಿಯೋ ನೋಡಿ ಹಲವರು ತಿನಿಸನ್ನು ಒಮ್ಮೆಯಾದರೂ ತಿನ್ನಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.

TV9kannada Web Team

| Edited By: Pavitra Bhat Jigalemane

Jan 30, 2022 | 10:36 AM

ಫುಡ್​​ ಬ್ಲಾಗರ್ (Food Blogger) ​ಗಳು ಹೊಸ ಹೊಸ ರುಚಿಯ ತಿಂಡಿಯನ್ನು ತಿಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಈ ಹಿಂದೆ ಕೂಡ ಹಲವು ರೀತಿಯ ಫುಡ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈಗ ಮ್ಯಾಗಿ ಪರೋಟ (Maggie Paratha) ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವರ್ಲ್ಡ್​​ ವೈಡ್​ ಫುಡ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ. ಇಂದೋರ್​ನಲ್ಲಿ  ಮ್ಯಾಗಿ ಪರೋಟಾವನ್ನು ಹೊಸ ತಿನಿಸನ್ನು ತಯಾರಿಸಲಾಗಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ವಿಡಿಯೋ ನೋಡಿ ಹಲವರು ತಿನಿಸನ್ನು ಒಮ್ಮೆಯಾದರೂ ತಿನ್ನಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.

ವಿಡಿಯೋದಲ್ಲಿ ಮೊದಲು ಬಾಣಲೆಗೆ ಬೆಣ್ಣೆಯನ್ನು ಹಾಕುವುದನ್ನು ಕಾಣಬಹುದು. ನಂತರ ಮ್ಯಾಗಿಯನ್ನು ಹಾಕಿ ಬೇಯಿಸಲಾಗುತ್ತದೆ ನಂತರ ಅದರಲ್ಲಿರುವ ನೀರಿನ ಅಂಶ ಹೋಗುವವರೆಗೆ ಬೇಯಿಸಿ ನಂತರ ಹಿಟ್ಟನ್ನು ತಯಾರಿಸಿ ಪರೋಟ ರೀತಿಯಲ್ಲಿ ಮಾಡಲಾಗುತ್ತದೆ. ನಂತರ ಅದರೊಳಗೆ ಮ್ಯಾಗಿಯನ್ನು ಹಾಕಿ ಲಟ್ಟಿಸಿ ಬೇಯಿಸುತ್ತಾರೆ. ಈ ಮ್ಯಾಗಿ ಪರೋಟಾವನ್ನು ಇಂದೋರ್​ನ ಮೇಘದೂತ್​ ಪರೋಟ ಎನ್ನುವ ಡಾಬಾದಲ್ಲಿ ತಯಾರಿಸಲಾಗಿದೆ ಎಂದು ವಿಡಿಯೋದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ವಿಡಿಯೋನೋಡಿ ಪರೋಟಾವನ್ನು ಹೀಗೂ ಮಾಡಬಹುದಾ ಎಂದು ಉದ್ಘಾರ ಎಳೆದಿದ್ದಾರೆ.

ಗೋಲ್ಗಪ್ಪಾ ಐಸ್​ಕ್ರೀಮ್​

ಅದೇ ರೀತಿ ಗೋಲ್ಗಪ್ಪಾ ಐಸ್ಕ್ರೀಮ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಗೋಲ್ಗಪ್ಪಾಗೆ ಐಸ್​ ಕ್ರೀಮ್​ ಹಾಕಿ ನಂತರ ಅದನ್ನು ಸ್ಮಾಶ್​ ಮಾಡಿ ರೋಲ್​ ರೀತಿಯಲ್ಲಿ ಮಾಡಿ ಕೊಡಲಾಗುತ್ತದೆ. ಇನ್ಸ್ಟಾಗ್ರಾಮ್​ನಲ್ಲಿ ಗ್ರೇಟ್​​ ಇಂಡಿಯನ್​ ಫುಡ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದ್ದು  7 ಸಾವಿರಕ್ಕೂ ಹೆಚ್ಚು ಜನ ಮೆಚ್ಚಿಕೊಂಡಿದ್ದಾರೆ. ಕೆಲವರು ಗೋಲ್ಗಪ್ಪಾ ಐಸ್​ಕ್ರೀಮ್​ ಅನ್ನು ತಿನ್ನಬೇಕು ಎಂದು ಬಾಯಲ್ಲಿ ನೀರೂರಿಸಿಕೊಂಡಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ,

ಇದನ್ನೂ ಓದಿ:

ಈ ಊರಿನ ತುಂಬ ಪ್ರತಿದಿನ ಬೆಳಗ್ಗೆ ಮೊಳಗುತ್ತೆ ರಾಷ್ಟ್ರಗೀತೆ; ಜನರೆಲ್ಲ ನಿಂತು ಸಲ್ಯೂಟ್ ಮಾಡೋದು ನೋಡೋದೇ ಚೆಂದ!

Follow us on

Related Stories

Most Read Stories

Click on your DTH Provider to Add TV9 Kannada