ಈ ಊರಿನ ತುಂಬ ಪ್ರತಿದಿನ ಬೆಳಗ್ಗೆ ಮೊಳಗುತ್ತೆ ರಾಷ್ಟ್ರಗೀತೆ; ಜನರೆಲ್ಲ ನಿಂತು ಸಲ್ಯೂಟ್ ಮಾಡೋದು ನೋಡೋದೇ ಚೆಂದ!

ಪ್ರತಿದಿನ ಬೆಳಗ್ಗೆ ಸರಿಯಾಗಿ 8.30 ಗಂಟೆಗೆ ತೆಲಂಗಾಣದ ನಲ್ಗೊಂಡ ಪಟ್ಟಣದ 12 ಪ್ರಮುಖ ಜಂಕ್ಷನ್‌ಗಳಲ್ಲಿ ರಾಷ್ಟ್ರಗೀತೆಯನ್ನು ಮೊಳಗಿಸಲಾಗುತ್ತದೆ.

ಈ ಊರಿನ ತುಂಬ ಪ್ರತಿದಿನ ಬೆಳಗ್ಗೆ ಮೊಳಗುತ್ತೆ ರಾಷ್ಟ್ರಗೀತೆ; ಜನರೆಲ್ಲ ನಿಂತು ಸಲ್ಯೂಟ್ ಮಾಡೋದು ನೋಡೋದೇ ಚೆಂದ!
ತೆಲಂಗಾಣದಲ್ಲಿ ರಾಷ್ಟ್ರಗೀತೆಗೆ ರಸ್ತೆಯಲ್ಲೇ ನಿಂತು ಸಲ್ಯೂಟ್ ಮಾಡುತ್ತಿರುವ ಜನರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jan 29, 2022 | 6:40 PM

ಹೈದರಾಬಾದ್: ಕೇವಲ ಸ್ವಾತಂತ್ರ್ಯ ದಿನಾಚರಣೆ (Independence Day), ಗಣರಾಜ್ಯೋತ್ಸವದ ದಿನ (Republic Day) ಮಾತ್ರವಲ್ಲ ತೆಲಂಗಾಣದ ಈ ಊರಿನಲ್ಲಿ ಪ್ರತಿದಿನವೂ ರಾಷ್ಟ್ರಗೀತೆಯನ್ನು ಮೊಳಗಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ ಸರಿಯಾಗಿ 8.30 ಗಂಟೆಗೆ ತೆಲಂಗಾಣದ ನಲ್ಗೊಂಡ ಪಟ್ಟಣದ 12 ಪ್ರಮುಖ ಜಂಕ್ಷನ್‌ಗಳಲ್ಲಿ ರಾಷ್ಟ್ರಗೀತೆಯನ್ನು (National Anthem) ಮೊಳಗಿಸಲಾಗುತ್ತದೆ. ಈ ವೇಳೆ ಆ ನಗರದಲ್ಲಿರುವ ಎಲ್ಲಾ ನಾಗರಿಕರು ಅವರು ಏನು ಮಾಡುತ್ತಿದ್ದರೂ ಆ ಕೆಲಸವನ್ನು ಅಲ್ಲೇ ಬಿಟ್ಟು ಪ್ರತಿದಿನ ಬೆಳಿಗ್ಗೆ ಆ 52 ಸೆಕೆಂಡುಗಳ ಕಾಲ ನಿಂತು, ಸಲ್ಯೂಟ್ ಮಾಡಿ ರಾಷ್ಟ್ರಗೀತೆಗೆ ಗೌರವ ಸೂಚಿಸುತ್ತಾರೆ.

ಈ ಹೊಸ ಪದ್ಧತಿಯು ಎಲ್ಲಾ ಜಾತಿ ಮತ್ತು ಧರ್ಮದ ಜನರನ್ನು ಪ್ರತಿದಿನ ಬೆಳಿಗ್ಗೆ ರಾಷ್ಟ್ರಗೀತೆ ಹಾಡಲು ಒಟ್ಟಿಗೆ ತಂದಿದೆ. ಈ ಪದ್ಧತಿಯನ್ನು ಈ ವರ್ಷದ ಜನವರಿ 23ರಂದು ಪ್ರಾರಂಭಿಸಲಾಯಿತು. ಜನ ಗಣ ಮನ ಉತ್ಸವ ಸಮಿತಿ ಅಧ್ಯಕ್ಷ ಕರ್ನಾಟಿ ವಿಜಯ್ ಕುಮಾರ್ ಮತ್ತು ಅವರ ಸ್ನೇಹಿತರು ತಮ್ಮ ಊರಿನಲ್ಲಿ ಈ ಅಭ್ಯಾಸ ಆರಂಭಿಸಿದರು. ಪ್ರತಿದಿನ ಬೆಳಿಗ್ಗೆ ರಾಷ್ಟ್ರಗೀತೆ ಹಾಡುವುದರಿಂದ ಜನರಲ್ಲಿ ದೇಶಭಕ್ತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಅವರದ್ದು.

ಈ ಅಭ್ಯಾಸ ಈಗ ತೆಲಂಗಾಣದ ನಲ್ಗೊಂಡ ಸುತ್ತಮುತ್ತಲಿನ ಹಲವಾರು ಸಣ್ಣ ಪಟ್ಟಣಗಳಿಗೆ ಹರಡಿದೆ. 2020ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ-ಭಾರತದ ಘರ್ಷಣೆಯ ಸಮಯದಲ್ಲಿ ಸಾವನ್ನಪ್ಪಿದ ಕರ್ನಲ್ ಸಂತೋಷ್ ಬಾಬು ಅವರು ತೆಲಂಗಾಣದ ನಲ್ಗೊಂಡ ಪ್ರದೇಶದಲ್ಲಿ ಹುಟ್ಟಿ ಬೆಳೆದವರು. ಆ ನೆನಪಿನಲ್ಲಿ ದಿನವೂ ಬೆಳಗ್ಗೆ ರಾಷ್ಟ್ರಗೀತೆ ಮೊಳಗಿಸಲಾಗುತ್ತಿದೆ.

ಇದನ್ನೂ ಓದಿ: Interesting Facts: ಭಾರತದ ಈ ಒಂದು ರೈಲು ನಿಲ್ದಾಣಕ್ಕೆ ಹೆಸರೇ ಇಲ್ಲ; ಇದರ ಕತೆಯೇ ರೋಚಕ!

ದುಬೈ ಬಿಟ್ಟು ಬಂದು ಕಾಸರಗೋಡಿನಲ್ಲಿ ಅಡಿಕೆ ಹಾಳೆಯ ಪ್ಲೇಟ್ ತಯಾರಿಸುತ್ತಿರುವ ದಂಪತಿ; ಇವರ ಆದಾಯ ಕೇಳಿದ್ರೆ ಅಚ್ಚರಿ ಪಡ್ತೀರ!

Published On - 6:38 pm, Sat, 29 January 22