ಸ್ನೋ ಸ್ಪೇಯಿಂದ ಬೆಂಕಿ; ಹುಟ್ಟುಹಬ್ಬದ ಸಂಭ್ರಮವನ್ನು ಕಿತ್ತುಕೊಳ್ಳಬಹುದು ಜೋಕೆ

|

Updated on: Mar 26, 2021 | 12:07 PM

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾಗ ಸ್ನೇಹಿತನ ಮುಖಕ್ಕೆ ಸ್ನೋ ಸ್ಪ್ರೇ ಮಾಡಿದಾಗ ಮುಖಕ್ಕೆ ಬೆಂಕಿ ಹತ್ತಿಕೊಂಡಿರುವ ಘಟನೆ ನಡೆದಿದೆ.

ಸ್ನೋ ಸ್ಪೇಯಿಂದ ಬೆಂಕಿ; ಹುಟ್ಟುಹಬ್ಬದ ಸಂಭ್ರಮವನ್ನು ಕಿತ್ತುಕೊಳ್ಳಬಹುದು ಜೋಕೆ
ಹುಟ್ಟು ಹಬ್ಬದ ಸಂಭ್ರಮದ ವೇಳೆ ಮುಖಕ್ಕೆ ಬೆಂಕಿ ತಗುಲಿದ್ದ ಚಿತ್ರ
Follow us on

ತಮ್ಮ ಆತ್ಮೀಯ ಸ್ನೇಹಿತನ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸುತ್ತಿರುವಾಗ ಹೃದಯ ಕದಡುವ ಘಟನೆಯೊಂದು ನಡೆದಿದೆ. ವ್ಯಕ್ತಿ ಕೇಕ್​ ಕತ್ತರಿಸಲೆಂದು ಬಾಗಿದಾಗ ಸ್ನೇಹಿತರು ಆತನ ಮುಖಕ್ಕೆ ಸ್ನೋ ಸ್ಪ್ರೇ ಮಾಡುತ್ತಾರೆ. ಅದೇ ವೇಳೆ ಮೇಣದ ಬತ್ತಿಗೆ ಹಚ್ಚಿದ್ದ ಬೆಂಕಿ ಸ್ನೋ ಸ್ಪ್ರೇಗೆ ಹಿಡಿದು ವ್ಯಕ್ತಿಯ ಮುಖಕ್ಕೆ ಬೆಂಕಿ ಹಚ್ಚಿಕೊಳ್ಳುವ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

ಕಳೆದ ತಿಂಗಳು ಸ್ನೇಹಿತರೆಲ್ಲ ಕೂಡಿ ತಮ್ಮ ಆತ್ಮೀಯ ಸ್ನೇಹಿತನ ಹುಟ್ಟು ಹಬ್ಬದ ಆಚರಣೆಗೆಂದು ಕೇಕ್​ ಜೊತೆ ಮೇಣದ ಬತ್ತಿ ಹಚ್ಚಿ ದೀಪ ಬೆಳಗಿ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಇದೇ ವೇಳೆ ಕೇಕ್​ ಕತ್ತರಿಸಲೆಂದು ವ್ಯಕ್ತಿ ಬಾಗುತ್ತಿದ್ದಾಗ, ಖುಷಿಯಿಂದ ಸ್ನೇಹಿತರು ವ್ಯಕ್ತಿ ಮುಖಕ್ಕೆ ಸ್ನೋ ಸ್ಪ್ರೇ ಮಾಡುತ್ತಾರೆ. ಕೇಕ್​ ಪಕ್ಕದಲ್ಲಿ ಬೆಳಗಿದ್ದ ಮೇಣದ ಬತ್ತಿಯ ಬೆಂಕಿ ವ್ಯಕ್ತಿ ಮುಖಕ್ಕೆ ಎರಚಿದ್ದ ಸ್ನೋ ನೊರೆಗೆ ತಗಲುತ್ತದೆ.

ಮುಖಕ್ಕೆ ಬೆಂಕಿ ಹತ್ತಿದ ತಕ್ಷಣ ಆತನ ಸ್ನೇಹಿತರು ಸಹಾಯಕ್ಕಾಗಿ ಓಡುತ್ತಾರೆ. ತಡ ಮಾಡದೇ ಬೆಂಕಿ ಆರಿಸುತ್ತಾರೆ. ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ಟ್ರಾವೆಲ್ ಬ್ಲಾಗರ್​ ‘ಪಾರ್ಟಿ ಸ್ನೋ ಸ್ಪ್ರೇ ಕಣ್ಣಿಗೆ ಒಳ್ಳೆಯದಲ್ಲದ ರಾಸಾಯನಿಕಗಳನ್ನು ಹೊಂದಿರುತ್ತದೆ. ಇದು ಕಣ್ಣಿನ ಕಿರಿಕಿರಿಯುಂಟು ಮಾಡುತ್ತದೆ. ಕಣ್ಣು ಉರಿಯಲು ಪ್ರಾರಂಭಿಸುತ್ತದೆ. ಈ ದಿನಗಳಲ್ಲಿ ಯುವ ಹುಡುಗರು ಮತ್ತು ಹುಡುಗಿಯರು ಪಾರ್ಟಿಗಳಲ್ಲಿ, ವಿಶೇಷವಾಗಿ ಜನ್ಮದಿನಗಳಲ್ಲಿ ಸ್ನೋ ಸ್ಪ್ರೇಗಳೊಂದಿಗೆ ಆಟವಾಡುತ್ತಾರೆ. ದೇಹಕ್ಕೆ ಸಿಂಪಡಿಸುತ್ತಾರೆ. ಪಾರ್ಟಿ ಸ್ಪ್ರೇಗಳು ಹೆಚ್ಚು ಉರಿಯುವ ರಾಸಾಯನಿಕಗಳನ್ನು ಹೊಂದಿರುವುದರಿಂದ ಅಪಾಯಕಾರಿ. ಆದ್ದರಿಂದ, ಅದನ್ನು ಬೆಂಕಿಯ ಬಳಿ ಸಿಂಪಡಿಸದಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ’.

ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಲಾದ ವಿಡಿಯೋ ಇದೀಗ ಡಿಲಿಟ್​ ಆಗಿದೆ.

ಇದನ್ನೂ ಓದಿ: ಹೊತ್ತಿ ಉರಿದ ಕೊಟ್ಟಿಗೆ; ನೋಡನೋಡುತ್ತಲೇ ಸಜೀವ ದಹನವಾದ ಆಕಳು, ಕಲಬುರಗಿಯಲ್ಲಿ ಮನಕಲಕುವ ಘಟನೆ