AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಈ ವ್ಯಕ್ತಿಯ ಹೇರ್​ಸ್ಟೈಲ್​ ನೋಡಿದರೆ ಬಾಯಲ್ಲಿ ನೀರೂರಬಹುದು; ಅಂಥದ್ದೇನಿದೆ ನೀವೇ ನೋಡಿ

ಡಿಯೋಗಳನ್ನು ನೀವು ನೋಡಬಹುದು. ಒಂದರಲ್ಲಿ ನ್ಯೂಡಲ್ಸ್​, ಇನ್ನೊಂದರಲ್ಲಿ ಪೋರ್ಕ್​ ಮತ್ತು ಬೀನ್ಸ್​ ಹೀಗೆ ವಿವಿಧ ಆಹಾರಗಳನ್ನು ಪೌಲ್​ ತಲೆಗೆ ಹಾಕಿ ವಿನ್ಯಾಸ ಮಾಡಲಾಗುತ್ತದೆ.

Video: ಈ ವ್ಯಕ್ತಿಯ ಹೇರ್​ಸ್ಟೈಲ್​ ನೋಡಿದರೆ ಬಾಯಲ್ಲಿ ನೀರೂರಬಹುದು; ಅಂಥದ್ದೇನಿದೆ ನೀವೇ ನೋಡಿ
ವಿಭಿನ್ನ ಹೇರ್​ಕಟ್​ ಮಾಡಿಕೊಳ್ಳುವ ವ್ಯಕ್ತಿ
TV9 Web
| Edited By: |

Updated on:Apr 11, 2022 | 9:56 AM

Share

ಕೂದಲ ವಿನ್ಯಾಸ ಎಲ್ಲರಿಗೂ ಒಂದು ಕ್ರೇಜ್​. ಹುಡುಗರಂತೂ ಹೊಸಹೊಸ ಮಾದರಿಯಲ್ಲಿ ಹೇರ್​​ಸ್ಟೈಲ್ ಮಾಡಿಕೊಳ್ಳುತ್ತಾರೆ. ಯಾವುದಾದರೂ ಹೊಸ ಸಿನಿಮಾ ಬಂದರೆ ಅದರಲ್ಲಿ ಹೀರೋ, ವಿಲನ್​ ಯಾವುದೇ ಹೊಸ ಮಾದರಿಯಲ್ಲಿ ಕೂದಲು ವಿನ್ಯಾಸ​ ಮಾಡಿಕೊಂಡಿದ್ದರೆ ಸ್ವಲ್ಪ ದಿನ ಅದೇ ಹೇರ್​ಕಟ್​ ಟ್ರೆಂಡ್ ಆಗುವುದನ್ನು ನೋಡಿದ್ದೇವೆ. ಎಷ್ಟೆಷ್ಟೋ ಜನ, ವಿವಿಧ ಮಾದರಿಯಲ್ಲಿ ಕೂದಲು ಕತ್ತರಿಸಿಕೊಂಡು ಸುದ್ದಿಯಾದವರೂ ಇದ್ದಾರೆ. ಆದರೆ ಇಲ್ಲೊಬ್ಬ ವಿವಿಧ ಆಹಾರಗಳನ್ನೇ ಹೇರ್​ಸ್ಟೈಲ್​ ಮಾಡಿಕೊಳ್ಳುತ್ತಿದ್ದಾರೆ. ಅವರ ಫೋಟೋ, ವಿಡಿಯೋಗಳು ಸಿಕ್ಕಾಪಟೆ ವೈರಲ್ ಆಗುತ್ತಿದ್ದು,  ಜನರು ಹುಬ್ಬೇರಿಸುತ್ತಿದ್ದಾರೆ.  ನೀವು ಬಿಎಂಆರ್​ ಟ್ವಿನ್ಸ್​ ಎಂಬ ಇನ್​ಸ್ಟಾಗ್ರಾಂ ಅಕೌಂಟ್ ನೋಡಿದರೆ ವಿಡಿಯೋಗಳನ್ನೆಲ್ಲ ನೋಡಬಹುದು. ಅದರಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯ ಹೆಸರು ಪೌಲ್ ಜೋನ್ಸ್​ ಎಂದಾಗಿದ್ದು, ಆತ ಸ್ವತಃ ಕ್ಷೌರಿಕ. ತಲೆಗೆ ನ್ಯೂಡಲ್ಸ್​ ಅಂಟಿಸಿಕೊಂಡು, ಇಬ್ಬರು ಹೆಣ್ಣುಮಕ್ಕಳು ಅದನ್ನು ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. 

ಸ್ವತಃ ಕ್ಷೌರಿಕನಾಗಿರುವ ಪೌಲ್​​ಗೆ ಇನ್ನೊಬ್ಬ ಕೇಶವಿನ್ಯಾಸಕಾರ ಹೇರ್​ಸ್ಟೈಲ್​ ಮಾಡಿದ್ದಾನೆ. ರಾಮೆನ್​ ನ್ಯೂಡಲ್ಸ್​​ನ್ನು ಪೌಲ್​ ತಲೆಗೆ ಪ್ಯಾಕ್​ ಮಾಡಿದ್ದನ್ನು ವಿಡಿಯೋದಲ್ಲಿ ನೋಡಬಹದು. ನಿಜ ಹೇಳಬೇಕೆಂದರೆ ಪೌಲ್​ ತಲೆಯಲ್ಲಿ ಕೂದಲು ಇಲ್ಲ. ಬೋಳಾಗಿರುವ ಅವರ ತಲೆಗೆ ನ್ಯೂಡಲ್ಸ್​ ಸೇರಿ ಇನ್ನೂ ವಿವಿಧ ಆಹಾರಗಳನ್ನು ಪ್ಯಾಕ್​ ಮಾಡುವುದು, ಆ ವಿಡಿಯೋ ವೈರಲ್ ಮಾಡುವುದು ಇವರ ಕಾಯಕವಾಗಿದೆ.  ಇದನ್ನು ನೋಡಿ ನೆಟ್ಟಿಗರು ನಕ್ಕಿದ್ದಾರೆ.

ಹೀಗೆ ಎರಡು ಮೂರು ವಿಡಿಯೋಗಳನ್ನು ನೀವು ನೋಡಬಹುದು. ಒಂದರಲ್ಲಿ ನ್ಯೂಡಲ್ಸ್​, ಇನ್ನೊಂದರಲ್ಲಿ ಪೋರ್ಕ್​ ಮತ್ತು ಬೀನ್ಸ್​ ಹೀಗೆ ವಿವಿಧ ಆಹಾರಗಳನ್ನು ಪೌಲ್​ ತಲೆಗೆ ಹಾಕಿ ವಿನ್ಯಾಸ ಮಾಡಲಾಗುತ್ತದೆ. ಈ ವಿಡಿಯೋಕ್ಕೆ ಹಿನ್ನೆಲೆ ಸಂಗೀತದ ಧ್ವನಿಯನ್ನೂ ಕೊಡಲಾಗುತ್ತದೆ. ನೀವು ನೋಡಿ ಇಲ್ಲಿವೆ ವಿಡಿಯೋಗಳು.

View this post on Instagram

A post shared by BMR Twins (@bmrtwins1)

View this post on Instagram

A post shared by BMR Twins (@bmrtwins1)

ಇದನ್ನೂ ಓದಿ: ಡೈರೆಕ್ಟರ್ ಜತೆ ಖ್ಯಾತ ನಟಿಯ ಸೀಕ್ರೆಟ್​ ಅಫೇರ್ ಬಯಲು​; ಪ್ರೆಗ್ನೆನ್ಸಿ ವಿಷಯ ಕೇಳಿ ಕಣ್ಣೀರು ಹಾಕಿದ ಕಂಗನಾ

Published On - 9:29 am, Mon, 11 April 22

Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು