Video: ಅಣೆಕಟ್ಟಿನ ಅಂಚಿನಲ್ಲಿ ನಿಂತು ಫೋಟೋ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

|

Updated on: Aug 17, 2024 | 12:19 PM

ಅಣೆಕಟ್ಟಿನ ಮೇಲೆ ನಿಂತು ಯುವಕ ಅಪಾಯಕಾರಿ ಸಾಹಸ ಮಾಡಲು ಮುಂದಾಗಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಸಾವನಪ್ಪಿದ್ದಾನೆ. ಈ ಭಯಾನಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಮಹಾರಾಷ್ಟ್ರ: ಅಣೆಕಟ್ಟಿನ ಅಂಚಿನಲ್ಲಿ ನಿಂತು ಯುವಕನೊಬ್ಬ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಇಲ್ಲಿನ ಮಕರಧೋಕ್ಡಾ ಸರೋವರದ ಅಣೆಕಟ್ಟಿನ ಮೇಲೆ ಯುವಕ ನಿಂತು ಅಪಾಯಕಾರಿ ಸಾಹಸ ಮಾಡಲು ಮುಂದಾಗಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದು ದುರಂತವಾಗಿ ಮುಳುಗಿ ಸಾವನಪ್ಪಿದ್ದಾನೆ. ಈ ಭಯಾನಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅಣೆಕಟ್ಟಿನಂತೆ ಕಾಣುವ ಇಳಿಜಾರಿನ ಮೇಲ್ಭಾಗದಲ್ಲಿ ಮೂವರು ಹುಡುಗರು ನಿಂತು ನೃತ್ಯ ಮಾಡುತ್ತಿರುವುದು ಮತ್ತು ಕೆಲ ಹೊತ್ತಿನ ಬಳಿಕ ಅಣೆಕಟ್ಟಿನ ಅಂಚಿನ ಮೇಲೆ ನಿಂತಿದ್ದ ಯುವಕ ನಿಯಂತ್ರಣ ತಪ್ಪಿ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: Video: ಪಿಸ್ತೂಲ್, ಚಾಕು ಹಿಡಿದು ಚಿನ್ನ ಕದಿಯಲು ಬಂದ ನಾಲ್ವರನ್ನು ಕೋಲಿನಿಂದ ಹೊಡೆದು ಓಡಿಸಿದ ಮಾಲೀಕ